ಬೆಂಗಳೂರು: ರಾಜ್ಯದಲ್ಲಿ ಆಹಾರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2026-27ರ ಬಜೆಟ್‌ನಲ್ಲಿ ಹಲವು ಹೊಸ ಕ್ರಮಗಳನ್ನು ಸರ್ಕಾರ ಘೋಷಿಸಿದೆ. ಆಹಾರ ಧಾನ್ಯಗಳ ವಿತರಣೆಗಾಗಿ ನೀಡಲಾಗುವ ಚಿಲ್ಲರೆ ಹಾಗೂ ಸಗಟು ಲಾಭಾಂಶದ ಪಾವತಿಯಲ್ಲಿ ವಿಳಂಬವಾಗದಂತೆ FIST Application ಮೂಲಕ ನೇರ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.
ಇದೇ ವೇಳೆ ಪ್ರಸ್ತುತ ಇರುವ ಸಹಾಯವಾಣಿ 1967 ಅನ್ನು AI ಆಧಾರಿತ “ಸ್ಮಾರ್ಟ್ ಅನ್ನವಾಣಿ”ಯಾಗಿ ಪರಿವರ್ತಿಸಿ ಸ್ವಯಂ ಚಾಲಿತ ದೂರು ಕೇಂದ್ರ, ಧ್ವನಿ ಚಾಟ್‌ಬಾಟ್ ಮತ್ತು ಲೈವ್ ಕರೆ ವರ್ಗಾವಣೆ ವ್ಯವಸ್ಥೆಗಳನ್ನು ಒಳಗೊಂಡಂತೆ ಅಭಿವೃದ್ಧಿಪಡಿಸಲಾಗುತ್ತದೆ.
ಅದರ ಜೊತೆಗೆ ದಾಸೋಹ ಯೋಜನೆಯಡಿ 34 ಹೊಸ ಕಲ್ಯಾಣ ಸಂಸ್ಥೆಗಳಲ್ಲಿ ಇರುವ 6,701 ಫಲಾನುಭವಿಗಳಿಗೆ ಆಹಾರ ಭದ್ರತೆ ಒದಗಿಸುವುದಾಗಿ ಸರ್ಕಾರ ತಿಳಿಸಿದೆ.