E-PAPER
16 Nov 2026, 02:20:14 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಹೊಸ ಕಚೇರಿ ಆರಂಭ

ಬೆಳಗಾವಿ; ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ “ ಹೊಸ ಕಛೇರಿ ಉದ್ಘಾಟನಾ ಸಮಾರಂಭ “ ಮತ್ತು “ ಪಿಂಚಣಿದಾರರ ದಿನಾಚರಣೆ”  ದಿನಾಂಕ: 17-12-2025 ರಂದು ಮುಂಜಾನೆ 10 ಘಂಟೆಗೆ ವಿಶ್ವೇಶ್ವರಯ್ಯ ನಗರದಲ್ಲಿರುವ ತೋಟಗಾರಿಕೆ ಇಲಾಖೆ ಕಟ್ಟಡದಲ್ಲಿ ಸನ್ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಮೊಹಮ್ಮದ ರೋಷನ್ ಮತ್ತು ಹಿಂದಿನ ಜಿಲ್ಲಾಧಿಕಾಗಳಾದ ಶ್ರೀ.ಎಮ್.ಜಿ.ಹಿರೇಮಠರವರು ಉದ್ಘಾಟನೆ ಮಾಡಿದರು.
ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾದ ಶ್ರೀ.ಎ.ವಾಯ್.ಬೆಂಡಿಗೇರಿಯವರು ಮಾತನಾಡಿ ಈ ಹೊಸ ಕಛೇರಿಯನ್ನು ಉದ್ಘಾಟನೆ ಮಾಡಿದ ಇವರಿಬ್ಬರು ಶ್ರೀ.ಎಮ್.ಜಿ.ಹಿರೇಮಠರವರು ಹಳೆಯ ಕಛೇರಿಯನ್ನು ನೀಡಿದ್ದರು ಈಗ ಕಛೇರಿಯನ್ನು ಶ್ರೀ ಮೊಹಮ್ಮದ ರೋಷನ್ ನೀಡಿದ್ದಾರೆ. ಅದು ಸುಸಜ್ಜಿತವಾಗಿ ಮಾಡಿ ನೀಡಿದ್ದಕ್ಕೆ ಹಿರಿಯ ನಾಗರಿಕರ ಸಂಘ ಹಾಗೂ ರಾಜ್ಯ ನಿವೃತ್ತ ನೌಕರರ ಸಂಘದ ಪರವಾಗಿ ಹೃತ್ಪೂರ್ವಕರ ಅಭಿನಂದನೆಗಳನ್ನು ಸಲ್ಲಿಸಿ ಮುಂದೆಯೂ ಇದೇ ರೀತಿ ಹಿರಿಯ ನಾಗರಿಕೆ ಸಮಸ್ಯೆಗೆ ಸ್ಪಂದನೆ ನೀಡಿ ಸಹಾಯ, ಸಹಕಾರ ನೀಡಲು ವಿನಂತಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಶ್ರೀ.ಸಿದ್ನಾಳರವರು ಮಾತನಾಡಿ ಈ ಹೊತ್ತು ಪಿತಾಮಹ ದಿ || ಡಿ.ಎಸ್.ನಕ್ಕರವರು ನಮಗೆ ವರದಾನವಾದ ಪಿಂಚಣಿಯನ್ನು ನೀಡಲು ಹೋರಾಡಿದ ದಿನವೇ ಪಿಂಚಣಿದಾತ ದಿನಾಚರಣೆಯನ್ನು ಆಚರಿಸಲಾಯಿತು. ಭಾರತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯ ಮೂರ್ತಿಗಳು ಹಾಗೂ ಪ್ರಖಾತ್ಯ ನ್ಯಾಯಾವಾದಿಗಳಾದ ದಿ || ಡಿ.ಎಸ್.ನಕ್ಕರವರ ಪ್ರಯತ್ನದ ಫಲವಾಗಿ ನಾವು ಇಂದು ಪಿಂಚಣಿಯನ್ನು ಪಡೆಯುತ್ತಿದ್ದೇವೆ. ಅವರು ನಮ್ಮ ಪಿತಾಮಹರಾಗಿದ್ದಾರೆ. ಸತತವಾದ ಅಂದರೆ 1972 ರಿಂದ 1982 ರ ವರೆಗೆ 10 ವರ್ಷಗಳ ಹೋರಾಟದ ಫಲವಾಗಿ  ಪಿಂಚಣಿ ನೀಡುವುದು ಬಿಕ್ಷೆಯಲ್ಲ ಅದು ನಮ್ಮ ಹಕ್ಕು ಅಂತಾ ಪ್ರತಿಪಾದಿಸಿದರು ಅಂದಿನ ಸುಪ್ರೀಮ್ ಕೋರ್ಟ ಮುಖ್ಯ ನ್ಯಾಯಾಮೂರ್ತಿಗಳಾದ ಶ್ರೀ. ವಾಯ್.ಬಿ. ಚಂದ್ರಚೂಡರವರು ವಾದವನ್ನು ಆಲಿಸಿ ನಿವೃತ್ತ ನೌಕರರಿಗೆ ಪಿಂಚಣಿ ನೀಡುವುದು ಬಿಕ್ಷೆಯಲ್ಲ ಅವರ ಹಕ್ಕು ಅಂತಾ ಆದೇಶ ಮಾಡಿದರು ಆದ್ದರಿಂದ ಪ್ರತಿ ವರ್ಷ 17-12-1982 ರಂದು ಪಿಂಚಣಿ ದಿನಾಚರಣೆಯನ್ನು ಆಚರಿಸಲಾಗುತ್ತದೆ ಅಂತಾ ತಿಳಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಮಹಾಂತೇಶ ಹಿರೇಮಠರವರು ಮಾತನಾಡಿ, ಪ್ರತಿ ಮೂರು ತಿಂಗಳೊಮ್ಮೆ ಸಭೆಯನ್ನು ಕರೆಯಬೇಕು ಹಿರಿಯ ನಾಗರೀಕರ ಕುಂದು ಕೊರತೆಗಳ ಬಗ್ಗೆ ಇಲಾಖೆ, ಕಾನೂನ್ವಯ ಆದೇಶಗಳನ್ನು ನೀಡಿ ಅವರಿಗೆ ನ್ಯಾಯ ದೊರಕಿಸಿ ಕೊಡಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ವಿನಂತಿಸಿದರು. ಹಿರಿಯ ನಾಗರಿಕರಿಗೆ ಯಾವುದೇ ತೊಂದರೆಗಳಾಗಿದ್ದರೆ ಸಂಘಕ್ಕೆ ಬನ್ನಿರಿ ನಿಮ್ಮ ಸೇವೆಗೆ ನಾವು ಹೋರಾಟ ಮಾಡಿ ನ್ಯಾಯ ದೊರಕಿಸಿ ಕೊಡಲು ಸಹಾಯ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದರು ಎಲ್ಲರೂ ಸಂಘದ ಸದಸ್ಯರಾಗಿ  ಸಂಘವನ್ನು ಬಲಪಡಿಸಲು  ಕೋರಿದರು.
ಪ್ರಧಾನ ಕಾರ್ಯದರ್ಶಿ ಮುದಕವಿ, ನೀರಲಗಿಮಠ, ಶ್ರೀಮತಿ ರಜಪೂತ, ಚಟ್ಟೇರ್, ಮಳಾಯಿ, ಕೆಂಚರಾಹುತ, ದೊಡ್ಡಬಂಗಿ, ಹೆದ್ದೂರಶೆಟ್ಟಿ ಮಾತನಾಡಿದರು.
ಶ್ರೀ. ಬನಶಂಕರಿಯವರು ಎಲ್ಲರಿಗೂ ವಂದಿಸಿದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ