Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಲಾಸ್ ಏಂಜಲೀಸ್‌ನಲ್ಲಿ ‘ರಾಮಾಯಣ’ ಪ್ರೀಮಿಯರ್ ವೈಭವ: ರೆಡ್ ಕಾರ್ಪೆಟ್ ಮೇಲೆ ಯಶ್, ರಣಬೀರ್ ಮತ್ತು ಸಾಯಿ ಪಲ್ಲವಿ ಮಿಂಚಿಂಗ್!

ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ಮಹಾಕಾವ್ಯ ಆಧಾರಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾದ ಭವ್ಯ ಪ್ರೀಮಿಯರ್ ಪ್ರದರ್ಶನ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನ ಡೆವಿಡ್ ಗೆಫೆನ್ ಥಿಯೇಟರ್‌ನಲ್ಲಿ ನಡೆದ ಈ ವಿಶೇಷ ಪ್ರದರ್ಶನದಲ್ಲಿ ಚಿತ್ರದ ನಾಯಕ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ರಾಕಿಂಗ್ ಸ್ಟಾರ್ ಯಶ್ ಜೊತೆಯಾಗಿ ಭಾಗವಹಿಸಿ ಮಿಂಚಿದ್ದಾರೆ.

ಲಾಸ್ ಏಂಜಲೀಸ್‌ನಲ್ಲಿ ನಡೆದ ಈ ಪ್ರೀಮಿಯರ್ ಶೋ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಕೆಂಪು ರತ್ನಗಂಬಳಿ (Red Carpet) ಮೇಲೆ ಚಿತ್ರತಂಡ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ‘ಜೈ ಶ್ರೀರಾಮ್’ ಎಂದು ಗಟ್ಟಿಯಾಗಿ ಘೋಷಣೆ ಕೂಗಿ ತಮ್ಮ ಸಂಭ್ರಮ ವ್ಯಕ್ತಪಡಿಸಿದರು. ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತಿರುವ ಕನ್ನಡದ ನಟ ಯಶ್, ತಮ್ಮ ಧರ್ಮಪತ್ನಿ ರಾಧಿಕಾ ಪಂಡಿತ್ ಅವರೊಂದಿಗೆ ಆಗಮಿಸಿದ್ದರು. ಯಶ್ ಆಲ್-ಬ್ಲ್ಯಾಕ್ ಸೂಟ್‌ನಲ್ಲಿ ಕಂಗೊಳಿಸಿದರೆ, ರಾಧಿಕಾ ಪಂಡಿತ್ ಹಸಿರು ಮತ್ತು ಗಡಚು ರೇಷ್ಮೆ ಸೀರೆಯಲ್ಲಿ ಗಮನ ಸೆಳೆದರು. ಇನ್ನು ಸೀತಾ ದೇವಿಯ ಪಾತ್ರಧಾರಿಯಾದ ಸಾಯಿ ಪಲ್ಲವಿ ಕೆಂಪು ಬಣ್ಣದ ಸಾಂಪ್ರದಾಯಿಕ ಜರ್ದೋಸಿ ಸೀರೆಯಲ್ಲಿ ಕಳೆ ತಂದಿದ್ದರು.

ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಸಮ್ಮುಖದಲ್ಲಿ ನಡೆದ ಈ 3D ಪ್ರದರ್ಶನದಲ್ಲಿ ಹಾಲೀವುಡ್‌ನ ಹಲವು ಗಣ್ಯರು ಭಾಗವಹಿಸಿದ್ದರು. ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಭಾರತೀಯ ಸಿನಿರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಪಂಚದಾದ್ಯಂತ ಈ ಚಿತ್ರದ ಮೇಲಿನ ನಿರೀಕ್ಷೆಗಳು ಈಗ ಮತ್ತಷ್ಟು ಹೆಚ್ಚಾಗಿವೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಪಿಎಲ್‌ನಲ್ಲಿ ಸದ್ದು ಮಾಡಿದ್ದ ದೆಹಲಿ ಲೆಗ್ ಸ್ಪಿನ್ನರ್‌ಗೆ ಒಲಿದ ಅದೃಷ್ಟ: ಆರ್‌ಸಿಬಿ, ಮುಂಬೈ ಕಣ್ಣು ಮೇಧಾವಿ ಬಿಧೂರಿ ಮೇಲಿದೆಯೇ?BREAKING : ಸ್ಪೇನ್‌ನಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಭೀಕರ ಡಿಕ್ಕಿ; 10 ಮಂದಿ ಸಾವುBREAKING : ಸೈಕ್ಲೋನ್ ಅರ್ನಬ್ ಅಬ್ಬರಕ್ಕೆ ಆಂಧ್ರಪ್ರದೇಶ ತತ್ತರ: ಮೂವರು ಸಾವು, 714 ಗ್ರಾಮಗಳಿಗೆ ಹಾನಿ |WATCH VIDEO‘ನನ್ನ ಕನಸು ನನಸಾದ ಕ್ಷಣ ಇದು!’: ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಜೊತೆ ಕುಣಿದು ಕುಪ್ಪಳಿಸಿದ ಶಾರ್ವರಿಫೋನ್’ಪೇಯಿಂದ ‘ತತ್ಕಾಲ್ NPS’ ಸೇವೆ ಆರಂಭ ; ಕೇವಲ ₹250 ಹೂಡಿಕೆಯಲ್ಲಿ ಹೀಗೆ ಪಿಂಚಣಿ ಖಾತೆ ತೆರೆಯಿರಿಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಗೆಲುವು ಕಾಂಗ್ರೆಸ್ ಸರ್ಕಾರದ ಅಹಂಕಾರಕ್ಕೆ ಕಪಾಳಮೋಕ್ಷ ಎಂದ HDKನವೆಂಬರ್ 1ರಿಂದ LPG ಸಿಲಿಂಡರ್, PNG ನಿಯಮಗಳಲ್ಲಿ ಬದಲಾವಣೆ: ಗ್ರಾಹಕರು ತಿಳಿಯಬೇಕಾದ ಮಾಹಿತಿ ಇಲ್ಲಿದೆಅರ್ನಾಬ್’ ಚಂಡಮಾರುತದ ಅಬ್ಬರ: ಚೆನ್ನೈ ಕರಾವಳಿಯಲ್ಲಿ ಭಾರಿ ಅಲೆಗಳ ಅಟ್ಟಹಾಸ, ವಾಹನಗಳಿಗೆ ಹಾನಿವಾಹನ ಸವಾರರಿಗೆ ಗುಡ್ ನ್ಯೂಸ್ ; ನ. 1ರಿಂದ ಫಾಸ್ಟ್ ಟಾಗ್ ಪಾಸ್ ದರದಲ್ಲಿ ಭಾರೀ ರಿಯಾಯಿತಿ!ವ್ಯಕ್ತಿಯ ಪೂರ್ವಾನುಮತಿ ಪಡೆದು ಸುದ್ದಿ ಪ್ರಕಟಿಸುವುದಾದರೆ ನ್ಯೂಸ್ ರೂಂಗಳು ಮುಚ್ಚಬೇಕಾಗುತ್ತದೆ: ಸುಪ್ರೀಂ ಕೋರ್ಟ್ ಗೆ ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ ಅರ್ಜಿ