ಬೆಳಗಾವಿ; ಉತ್ತರ ಕರ್ನಾಟಕ ಭಾಗದ ಬೃಹತ್ ಮಟ್ಟದ ನಿರ್ಮಾಣ ಹಾಗೂ ಒಳಾಂಗಣ ಪ್ರದರ್ಶನವಾದ ‘ಬೆಲ್ಕಾನ್ 2026’ ಅನ್ನು ಫೆಬ್ರವರಿ 5ರಿಂದ ಫೆಬ್ರವರಿ 8ರವರೆಗೆ ಬೆಳಗಾವಿ ನಗರದಲ್ಲಿ ಆಯೋಜಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಈ ಎಕ್ಸಿಬಿಷನ್ನ್ನು ಸಿ.ಪಿ.ಎಡ್ ಮೈದಾನ (ಕ್ಲಬ್ ರಸ್ತೆ) ಯಲ್ಲಿ ನಡೆಸಲಾಗುತ್ತಿದ್ದು, ಈ ಬಾರಿ ಕೂಡ ಅದೇ ಸ್ಥಳದಲ್ಲಿ ಆಯೋಜನೆ ಮಾಡಲಾಗಿದೆ.
ಗುರುವಾರ ಸಂಜೆ 4 ಗಂಟೆಗೆ ಬೃಹತ್ ಮಟ್ಟದ ಬೆಲ್ಕಾನ್ ಎಕ್ಸಿಬಿಷನ್ ಉದ್ಘಾಟನೆ ನಡೆಯಲಿದೆ. ಈ ಪ್ರದರ್ಶನವು ಎರಡು ವರ್ಷಗಳಿಗೆ ಒಮ್ಮೆ ಆಯೋಜಿಸಲಾಗುವ ಮಹತ್ವದ ಕಾರ್ಯಕ್ರಮವಾಗಿದೆ.
ನಿರ್ಮಾಣ ಸಾಮಗ್ರಿಗಳು, ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲ ರೀತಿಯ ವಸ್ತುಗಳು, ಒಳಾಂಗಣ ವಿನ್ಯಾಸ, ಪೀಠೋಪಕರಣಗಳು, ಎಲೆಕ್ಟ್ರಿಕಲ್–ಪ್ಲಂಬಿಂಗ್ ಸಾಮಗ್ರಿಗಳು ಸೇರಿದಂತೆ ಮನೆ ಕಟ್ಟುವುದಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳು ಒಂದೇ ಸೂರಿನಡಿ ಲಭ್ಯವಿರುವುದು ಈ ಎಕ್ಸಿಬಿಷನ್ನ ವಿಶೇಷತೆ.
ಈ ಬಾರಿ ಬೆಲ್ಕಾನ್ ಎಕ್ಸಿಬಿಷನ್ನಲ್ಲಿ ಸುಮಾರು 176ಕ್ಕೂ ಹೆಚ್ಚು ಕಂಪನಿಗಳ ಸ್ಟಾಲ್ಗಳು ಭಾಗವಹಿಸಿದ್ದು, ವಿವಿಧ ರೀತಿಯ ನವೀನ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನ ನಡೆಯಲಿದೆ.
ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ನಡೆಯಲಿದೆ.
ಕಾರ್ಯಕ್ರಮವನ್ನು ಕ್ರೆಡೈ ಬೆಳಗಾವಿ ವತಿಯಿಂದ ಆಯೋಜಿಸಲಾಗಿದ್ದು, ಯುವರಾಜ್ ಹುಲ್ಜಿ ಹಾಗೂ ಪ್ರಶಾಂತ್ ವಂಡ್ಕರ್ ಅವರು ಆಹ್ವಾನ ನೀಡಿದ್ದಾರೆ. ಕ್ರೆಡೈ ಬೆಳಗಾವಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಓರಿಯೋನಿಸ್ ಪ್ರೋಮೀಟರ್ಸ್ & ಡೆವಲಪರ್ಸ್ ಪ್ರೈ. ಲಿಮಿಟೆಡ್ ಸಂಸ್ಥೆ ಶೀರ್ಷಿಕೆ ಪ್ರಾಯೋಜಕರಾಗಿ ಬೆಂಬಲ ನೀಡಿದ್ದು, GM ಸಂಸ್ಥೆ ಎಲೈಟ್ ಪ್ರಾಯೋಜಕರಾಗಿ ಕೈಜೋಡಿಸಿದೆ.
ನಿರ್ಮಾಣ ಮತ್ತು ಒಳಾಂಗಣ ಕ್ಷೇತ್ರದ ಉದ್ಯಮಿಗಳು, ಗುತ್ತಿಗೆದಾರರು, ವಿನ್ಯಾಸಕಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಎಕ್ಸಿಬಿಷನ್ಗೆ ಆಗಿರುವ ಒಟ್ಟು ವೆಚ್ಚ ಬಹಳಷ್ಟಿದ್ದು ಎಂದು ಹೇಳಿದರು.