Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ನಿಜವಾಗುತ್ತಾ ನಾಸ್ಟ್ರಾಡಾಮಸ್ ಭವಿಷ್ಯ ?

 

ದೆಹಲಿ :
ಪ್ರಖ್ಯಾತ ಫ್ರೆಂಚ್‌ ಕಾಲಜ್ಞಾನಿ ಮೈಕೆಲ್ ಡಿ ನಾಸ್ಟ್ರೆಡೇಮ್ ಸಾಮಾನ್ಯವಾಗಿ ನಾಸ್ಟ್ರಾಡಾಮಸ್‌ ಎನ್ನುವ ಹೆಸರಿನಿಂದಲೇ ಪರಿಚಿತರು. ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಯುದ್ಧದ ಸಂದರ್ಭದಲ್ಲಿ ನಾಸ್ಟ್ರಾಡಾಮಸ್‌ ಹೇಳಿದ್ದ 450 ವರ್ಷದ ಹಿಂದಿನ ಭವಿಷ್ಯ ನಿಜವಾಗಿದೆ.
ಅಷ್ಟು ವರ್ಷಗಳ ಹಿಂದೆಯೇ ನಾಸ್ಟ್ರಾಡಾಮಸ್‌, 2023ರಲ್ಲಿ ಏಳು ತಿಂಗಳ ಯುದ್ಧವನ್ನು ಅವರು ಊಹೆ ಮಾಡಿದ್ದರು. ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧದ ಉಲ್ಲೇಖ ಎಂದು ಆ ಸಂದರ್ಭದಲ್ಲಿ ಹೇಳಲಾಗಿತ್ತಾದರೂ, ಈಗ ಆ ದೇಶಗಳ ನಡುವಿನ ಯುದ್ಧ ಏಳು ತಿಂಗಳ ಅವಧಿಯನ್ನೂ ಮೀರಿದೆ. ಹಾಗಾಗಿ ನಾಸ್ಟ್ರಾಡಾಮಸ್‌ ಅವರ 2023ರ ಭವಿಷ್ಯ ಹೊಸ ಚರ್ಚೆ ಹುಟ್ಟುಹಾಕಿದೆ. ಹೆಚ್ಚಿನವರ ಪ್ರಕಾರ, 450 ವರ್ಷಗಳ ಹಿಂದೆ ನಾಸ್ಟ್ರಾಡಾಮಸ್‌ ಹೇಳಿದ್ದ ಏಳು ತಿಂಗಳ ಯುದ್ಧದ ಭವಿಷ್ಯ ಇಸ್ರೇಲ್‌ ಹಾಗೂ ಹಮಾಸ್‌ ಯುದ್ಧಕ್ಕೆ ಹೊಂದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ಯಾಲಿಸ್ತೇನ್‌ ದೇಶದ ಭಯೋತ್ಪಾದಕ ಗುಂಪು ಹಮಾಸ್‌, ಕಳೆದ ಶನಿವಾರ ಇಸ್ರೇಲ್‌ ಮೇಲೆ 6 ಸಾವಿರಕ್ಕೂ ಅಧಿಕ ರಾಕೆಟ್‌ಅನ್ನು ಉಡಾಯಿಸಿದ ಬೆನ್ನಲ್ಲಿಯೇ, ಇಸ್ರೇಲ್‌ ಹಮಾಸ್‌ ಮೇಲೆ ಯುದ್ಧ ಘೋಷಣೆ ಮಾಡಿದೆ. ಇತ್ತೀಚೆಗೆ, ಗಾಜಾದ ಸಂಪೂರ್ಣ ದಿಗ್ಭಂದನ ಹೇರಿರುವ ಇಸ್ರೇಲ್‌, ನೀರು, ವಿದ್ಯುತ್‌ ಮತ್ತು ಆಹಾರ ಸಂಪೂರ್ಣವಾಗಿ ಬಂದ್‌ ಮಾಡುವುದಾಗಿ ತಿಳಿಸಿದೆ.

ನಾಸ್ಟ್ರಾಡಾಮಸ್‌ ಇಸ್ರೇಲ್‌ ಯುದ್ಧ ಮಾತ್ರವಲ್ಲದೆ, ಸಾಕಷ್ಟು ವಿಚಾರಗಳ ಬಗ್ಗೆ ಅವರು ಹಿಂದೆಯೇ ಭವಿಷ್ಯ ನುಡಿದಿದ್ದರು. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗಬಹುದು ಎಂದು ಅಗಲೇ ಅವರು ತಿಳಿಸಿದ್ದರು. ನಾಸ್ಟ್ರಾಡಾಮಸ್‌ ಹೇಳಿರುವ ಭವಿಷ್ಯದ ಟ್ರ್ಯಾಕ್‌ ರೆಕಾರ್ಡ್‌ ನೋಡಿದಲ್ಲಿ, ಅವರ ಭವಿಷ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

"ಸೂರ್ಯನಂತೆ ತಲೆಯು ಹೊಳೆಯುವ ಸಮುದ್ರವನ್ನು ನೋಡುತ್ತದೆ: ಕಪ್ಪು ಸಮುದ್ರದ ಜೀವಂತ ಮೀನುಗಳು ಕುದಿಯುತ್ತವೆ. ರೋಡ್ಸ್ ಮತ್ತು ಜಿನೋವಾ ಅರ್ಧ ಹಸಿವಿನಿಂದ ಬಳಲುತ್ತಿರುವಾಗ, ಸ್ಥಳೀಯ ಜನರು ಅವುಗಳನ್ನು ಕತ್ತರಿಸಲು ಶ್ರಮಿಸುತ್ತಾರೆ" ಎಂದು ನಾಸ್ಟ್ರಾಡಾಮಸ್ 450 ವರ್ಷಗಳ ಹಿಂದೆ 2023 ರ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ನಾಸ್ಟ್ರಾಡಾಮಸ್‌ ಬದುಕಿದ್ದ ಸಮಯ ವಾಹನಗಳು ಹಾಗೂ ಕೈಗಾರೀಕರಣದ ಕಾಲಘಟ್ಟವೂ ಆಗಿರಲಿಲ್ಲ. ಹಾಗಿದ್ದರೂ ಅಂದೇ ಅವರು ಜಾಗತಿಕ ತಾಪಮಾನದ ಬಗ್ಗೆ ಊಹೆ ಮಾಡಿದ್ದರು.

 

ಇನ್ನು ಮಂಗಳ ಗ್ರಹದ ಬಗ್ಗೆ ಮಾನವನ ಆಸಕ್ತಿಯ ಬಗ್ಗೆಯೂ ಅವರು ಬರೆದಿದ್ದು, 'ಮಂಗಳನಲ್ಲಿ ಬೆಳಕು ಕುಸಿಯುತ್ತದೆ' ಎಂದು ತಮ್ಮ ಕಾಲಜ್ಞಾನದ ಪುಸ್ತಕದಲ್ಲಿ ಬರೆದಿದ್ದಾರೆ. ಹೆಚ್ಚಿನವರು ಇದು ಗ್ರಹದ ಹಿಮ್ಮುಖ ಚಲನೆಯನ್ನು ಆಗಿರಬಹುದು ಎಂದಿದ್ದಾರೆ. ಆದರೆ, ಕೆಲವು ಪಂಡಿತರ ಪ್ರಕಾರ, ಮಂಗಳ ಗ್ರಹದಲ್ಲಿ ಮಾನವನ ಭವಿಷ್ಯವನ್ನು ನಾಸ್ಟ್ರಾಡಾಮಸ್‌ ಇದರಲ್ಲಿ ಬರೆದಿದ್ದಾರೆ ಎಂದು ಅಂದಾಜಿಸಿದ್ದಾರೆ. ಇನ್ನು ನಾಸ್ಟ್ರಾಡಾಮಸ್‌ ಹೇಳಿರುವ ಅಂದಾಜಿನಲ್ಲಿ ತಿಳಿಸುವುದಾದರೆ, ಯಾವುದೇ ಸಮಯದಲ್ಲಿ ಸ್ಫೋಟಗಳು ಮತ್ತು ವಿಮಾನ ಅಪಘಾತಗಳು ಸಂಭವಿಸಬಹುದು. ಡಚ್ ಕಂಪನಿಯಿಂದ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್‌ವರೆಗೆ, ಹಲವಾರು ಏಜೆನ್ಸಿಗಳು ಮಂಗಳಯಾನದ ಹಿಂದೆ ಬಿದ್ದಿವೆ. ಆದರೆ, ನಾಸ್ಟ್ರಾಡಾಮಸ್‌ ಪ್ರಕಾರ ಇದು ಕಷ್ಟದ ವಿಚಾರ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ