ಜಿಲ್ಲಾ ಯಾದವ (ಗೊಲ್ಲ)ರ ಸಂಘ: ಗುರುತಿನ ಚೀಟಿ ಪಡೆಯಲು ಸೂಚನೆ
ಚಿತ್ರದುರ್ಗಚಿತ್ರದುರ್ಗ ನಗರದ ರಂಗಯ್ಯನಬಾಗಿಲು ಬಳಿಯ ಜಿಲ್ಲಾ ಯಾದವ (ಗೊಲ್ಲ)ರ ಸಂಘ ಚುನಾವಣೆಯು ಮೇ 17ರಂದು ಚಿತ್ರದುರ್ಗ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮತದಾನ ನಡೆಯಲಿದ್ದು, ಈ ಸಂಬಂಧ ಗುರುತಿನ ಚೀಟಿಯನ್ನು ಸಂಘದ ಕಚೇರಿಯಲ್ಲಿ ಮೇ 07 ರಿಂದ 16 ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 5.30 ರವರಗೆ ವಿತರಿಸಲಾಗುವುದು.
ಗುರುತಿನ ಚೀಟಿಗಾಗಿ ತಮ್ಮ ಇತ್ತೀಚಿನ ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್‍ನೊಂದಿಗೆ ಆಗಮಿಸಿ, ಗುರುತಿನ ಚೀಟಿ ಪಡೆಯುವಂತೆ ಜಿಲ್ಲಾ ಯಾದವ (ಗೊಲ್ಲ)ರ ಸಂಘದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಕೋರಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.