LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎನ್‌ಪಿಎಸ್‌ ಸಾಧನೆ: ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ಶಿವಮೊಗ್ಗ, ಏ.16  : ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ನ್ಯಾಷನಲ್ ಪಬ್ಲಿಕ್ ಶಾಲೆಯು ಸಿಬಿಎಸ್ಇ‌ 10 ನೇ ತರಗತಿ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ದಾಖಲಿಸಿದೆ.

ಪರೀಕ್ಷೆ ಬರೆದ 163 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, 102 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌, 21 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 32 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಕೀರ್ತನ.ಎಚ್.ಪಾಟೀಲ್ (ಶೇ.97.6), ಹಾಝಿರಾ ಮದಿಹ ಇಂದಾಡಿ (ಶೇ.97), ಅನುಷ್ಕಾ.ಕೆ (ಶೇ.96.6), ನವ್ಯ.ವೈ.ಮಥಡ್ (96.2), ವಿಪುಲಾ ಗಿರೀಶ್ ಸದವರ್ತಿ(ಶೇ.96.2), ಸಮನ್ವಿತ.ಎಸ್.ಪಿ (ಶೇ.96) ಅಂಕ ಪಡೆದಿದ್ದಾರೆ.
100 ಕ್ಕೆ 100 ಅಂಕ: ವಿಶೇಷವಾಗಿ ಕೆಲವು ವಿಷಯಗಳಲ್ಲಿ ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದಿದ್ದು, ಇಂಗ್ಲೀಷ್ ವಿಷಯದಲ್ಲಿ 3 ವಿದ್ಯಾರ್ಥಿಗಳು, ಇನ್ಫಾರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ 3, ಸಮಾಜ ವಿಜ್ಞಾನ ವಿಷಯದಲ್ಲಿ ಓರ್ವ ವಿದ್ಯಾರ್ಥಿ ಹಾಗೂ ಕನ್ನಡದಲ್ಲಿ ಓರ್ವ ವಿದ್ಯಾರ್ಥಿನಿ 100 ಕ್ಕೆ 100 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿ ಹಾಝಿರಾ ಮದಿಹ ಇಂದಾಡಿ  ಇಂಗ್ಲೀಷ್   ವಿಷಯದಲ್ಲಿ 100 ಅಂಕ, ಅನುಷ್ಕಾ.ಕೆ ಇಂಗ್ಲೀಷ್ ಹಾಗೂ ಇನ್ಫಾರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ ತಲಾ 100 ಅಂಕ, ಸೈಯದ್ ರಾಹಿಲ್ ಇಂಗ್ಲೀಷ್ ಮತ್ತು ಸಮಾಜ ವಿಷಯದಲ್ಲಿ 100 ಅಂಕ, ಪ್ರಾರ್ಥನಾ. ಎಸ್.ಎಂ ಕನ್ನಡದಲ್ಲಿ 100 ಅಂಕ, ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ನಿದಾ ನಾಝ್.ಎಸ್.ಎ ಮತ್ತು ವಿಭಾ.ಎಸ್.ಗೌಡರ್ 100 ಅಂಕ ಪಡೆದಿದ್ದಾರೆ. ಇದರೊಂದಿಗೆ ಎಲ್ಲಾ ವಿದ್ಯಾರ್ಥಿಗಳ ಸರಾಸರಿ ಅಂಕ ಗಳಿಕೆಯು ಶೇ.78.57 ಪ್ರತಿಶತವಾಗಿದೆ

ಈ ಫಲಿತಾಂಶವು ಶಾಲೆಯ ಶೈಕ್ಷಣಿಕ ಗುಣಮಟ್ಟ ಮತ್ತು ಸಮಗ್ರ ತರಬೇತಿಯ ಪ್ರತೀಕವಾಗಿದ್ದು, ಎಲ್ಲಾ ವಿದ್ಯಾರ್ಥಿಗಳೂ 6 ನೇ ವಿಷಯವಾಗಿ ಇನ್ಫಾರ್ಮೇಶನ್ ಟೆಕ್ನಾಲಜಿ ಅಧ್ಯಯನ ನಡೆಸಿರುವುದು ವಿಶೇಷ ಎಂದು ಪ್ರಾಂಶುಪಾಲರಾದ ನವೀನ.ಎಂ.ಪಾಯಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಧಕರಿಗೆ ಎನ್ಇಎಸ್ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST