E-PAPER
16 Nov 2026, 02:19:30 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಒಂದ ಕಪ್ಪು ಚಹಾ..

ದಣಿದ ದೇಹಕ್ಕೆ ಮತ್ತು ದಣಿದ ಮನಸ್ಸಿಗೆ ಒಂದು ಕಪ್ ಚಹಾ ಸಿಕ್ಕಿಬಿಟ್ರೆ ಸ್ವರ್ಗಾನಂದ ಹೌದಲ್ಲೋ.
ಬಹಳ ಜೋರ ಮಳೆ ಆಗ್ತಿರ್ತದೆ, ಅದರ ಜೋಡಿ ಥಂಡಿನೂ ಇರತದ ಅಂಥಾ ಸಂದರ್ಭದೊಳಗ ಒಂದು ಕಪ್ಪು ಚಹಾ ಸಿಕ್ಕಿ ಬಿಟ್ಟರೆ ಬ್ರಹ್ಮಾನಂದ ಹೌದಲ್ಲಾ? ಹಸಿದ ಹೊಟ್ಟೆಗೆ ಚಹಾ ಕುಡಿಬಾರದು ಆದರೂ ಊಟ ಸಿಗದೇ ಇರುವಂತಹ ಸಂದರ್ಭದೊಳಗ ಒಂದು ಚಕ್ಕ ಚಹಾ ಸಿಕ್ಕಿಬಿಟ್ಟರೆ ಒಂದೆರಡು ತಾಸ್ ಆದ್ರು ನಿಮಗೆ ತೊಂದರೆ ಆಗದಂಗ ನೋಡ್ಕೋತದ ಹೌದಲ್ಲೋ ?
ಇದನ್ನೆಲ್ಲ ಯಾಕ್ ಹೇಳಾಕತ್ತೀನಿ ಅಂತ ಅಂದ್ರ ಇಲ್ಲಿ ಒಬ್ಬ ಚಹಾದ್ ಕೃಷ್ಣಾ ಅಂತ ಅದಾನ ಅವನ ಕಾಯಕ ಏನಪ್ಪಾ ಅಂದ್ರೆ ಬೆಳಗಾವಿ ಹನುಮಾನನಗರ್, ಕುವೆಂಪು ನಗರ, ಸಹ್ಯಾದ್ರಿ ನಗರ , ಮಹಾಬಲೇಶ್ವರ ನಗರ , ವಿಜಯನಗರ, ವಿನಾಯಕ ನಗರ ಹಿಂಗ್ ಬಾ...ಳ ನಗರಗಳು ಹೊಸ ಹೊಸ ಬಡಾವಣೆಗಳು ಅದಾವ ಇಲ್ಲೆಲ್ಲಾ  ತನ್ನ ದ್ವಿಚಕ್ರ ವಾಹನದ ಮೇಲೆ 55 ರ ಹರೆಯದ ಕೃಷ್ಣಾ ದಿನಕ್ಕೆ ಕನಿಷ್ಠ 60 km ಓಡಾಡಿ ಅವರಿದ್ದಲ್ಲೇ ಹೋಗಿ ಅವರಿಗೆ ಚಹಾ ಮತ್ತ ಕಾಫಿ ಕೊಡುವಂಥಾ ಕಾಯಕ ಈ ಕೃಷ್ಣಾ ಮಾಡುತಾನೆ.
ಮಹಾರಾಷ್ಟ್ರ ಮುಂಗರವಾಡಿಯ ಕೃಷ್ಣ ಪಾಟೀಲ್ ಸದ್ಯಕ್ಕೆ ವಾಸ ಮಾಡುವುದು ಬೆಳಗಾವಿಯ ಜಯನಗರದಲ್ಲಿ ಇಬ್ಬರು ಹೆಣ್ಣು ಮಕ್ಕಳು ಒಬ್ಬಳು ಎನ್ ಡಿ ಟಿವಿಯಲ್ಲಿ ಮತ್ತೊಬ್ಬಳು ಇನ್ನೊಂದು ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ ಇತ್ತೀಚೆಗೆ ಸಾಫ್ಟ್ವೇರ್ ಇಂಜಿನಿಯರ್ ಒಟ್ಟಿಗೆ ಹಿರಿ ಮಗಳ ಮದುವೆ ಆಗಿದೆ ಮದುವೆಗೆ ಹೋಗಲಾಗದ ಒಂದು ಕಪ್ ಚಹಾದ ಕೆಲವು ಖಾಯಂ ಗಿರಾಕಿಗಳು ಆತನಿಗೆ ಶುಭ ಹಾರೈಸಿ ಆತ್ಮೀಯತೆಯಿಂದ ಕಾಣಿಕೆ ನೀಡಿದ ಸಂದರ್ಭ ಇಲ್ಲಿ ನೆನಪಿಸಿಕೊಳ್ಳಲಾಯಿತುಈತ ಸದ್ಯಕ್ಕೆ ಇಲ್ಲಿ ಒಬ್ಬಂಟಿ ದಿನಕ್ಕೆ ಎರಡು ನೂರರಿಂದ ನಾಲ್ಕು ನೂರು ಕಪ್ ಚಹಾ ಮಾರುವ ಈತನಿಗೆ ಉಳಿಯುವುದು ಪ್ರತಿ ಕಪ್ಪಿಗೆ ಒಂದೂವರೆಯಿಂದ ಎರಡು ರೂಪಾಯಿಗಳು ಮಾತ್ರ.
ಐದು ರೂಪಾಯಿಗೆ ಒಂದು ಕಪ್ಪು ಚಹಾ, ಅದು ವಿತ್ ಶುಗರ್ ಆಗಿರಬಹುದು ವಿಥೌಟ್ ಶುಗರ್ ಆಗಿರಬಹುದು. ಅದು ಕಾಫಿ ಆಗಿರಬಹುದು ಚಹಾ ಆಗಿರಬಹುದು ಬೇಕಂದ್ರೆ ಅದರ ಜೋಡಿ ಬಿಸ್ಕಿಟ್ ಇರ್ತಾವ. ಬೆಳಗಿನ ವಾಕಿಂಗ್ ಮಾಡುವಂಥ ಸೀನಿಯರ್ ಸಿಟಿಜನ್ಸ್ ಇರಬಹುದು ಜೂನಿಯರ್ ಸಿಟಿಜನ್ಸ್ ಇರಬಹುದು ಬೇಕಾದವರು ಚಹಾ ಕುಡೀತಾರ, ಕೆಲವರಂತೂ ಕೃಷ್ಣಾನ ಹಾದಿ ನೋಡ್ಕೊಂತ ನಿಲ್ತಾರ ಅವನಿಗೂ ಗೊತ್ತಿರುತ್ತದೆ ಇವರು ಹಾದಿ ಕಾಯ್ತಾ ಇದ್ದಾರೆ ಅಂತ. ರಸ್ತೆ ಕಾಮಗಾರಿ ಕೆಲಸ ಮಾಡುವವರಾಗಿರಬಹುದು, ಬೆಳಗಿನ ರಸ್ತೆ ಸ್ವಚ್ಛತಾ ಮಾಡು ಕಾರ್ಪೊರೇಷನ್ ದವರಾಗಿರಬಹುದು, ಕಟ್ಟಡ ಕಾಮಗಾರಿಗಳಿಗೆ ಬರುವಂತಹ ಕಾರ್ಮಿಕರಾಗಿರಬಹುದು ಇದೇ ರೂಟದಾಗ ಓಡಾಡುವಂತ ಗಾಡಿ ಡ್ರೈವರ್ ಗಳಾಗಿರಬಹುದು ಎಲ್ಲರಿಗೂ ಕೃಷ್ಣಾ ಬೇಕು. ಇಡೀ ದಿವಸ ಯಾರು ಎಲ್ಲಿರ್ತಾರೋ ಅಲ್ಲಿ ಹೋಗಿ ಚಹಾ ಕುಡಿಸೋದು ಅವನ ಕಾಯಕ. ಕೆಲವರು ತಮ್ಮ ಮನೆಗಳಿಗೆ ಇರುವಂತ ಕೆಲವು ಕಾರ್ಯಕ್ರಮಗಳಿಗೂ ಹೇಳಿ ಬಿಟ್ಟಿರುತ್ತಾರೆ 20--30 ಚಹಾ ತರಿಸ್ಕೊಂತಾರ ನಾನು ಅಷ್ಟೇ ಬಹಳ ಸಾರಿ ತರಿಸಿಕೊಂಡಿದ್ದೇನೆ. ರಸ್ತೆ ಬದಿಯ ಕಾರ್ಮಿಕರಿಂದ ಹಿಡಿದು ದೊಡ್ಡ ದೊಡ್ಡ ಬಂಗಲೆಗಳವರಿಗೂ ಚಹಾ ಕೊಟ್ಟಿದ್ದೇನೆ ಎಂದು ಹೇಳುವಾಗ ಅವನಿಗೊಂದು ಖುಷಿ. ಪ್ರಾಮಾಣಿಕ ಕಾಯಕಯೋಗಿಗೆ ಒಂದು ಸೆಲ್ಯೂಟ್.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ