ಬಳ್ಳಾರಿ,ನ.12
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಆರ್‌ಎಎಂಪಿ ಯೋಜನೆಯಡಿ ಉದ್ಯಮಶೀಲತಾ ಚಟುವಟಿಕೆಗಳನ್ನು ಬೆಂಬಲಿಸಲು ಮತ್ತು ಪೋಷಿಸಲು ಹಾಗೂ ಸ್ಥಳೀಯ ಮಟ್ಟದ ಎಂಎಸ್‌ಎಇ ಕಾರ್ಯಕ್ಷಮತೆ ಹೆಚ್ಚಿಸಲು ನ.13 ರಂದು ಮಧ್ಯಾಹ್ನ 03 ಗಂಟೆಗೆ ಸಿರುಗುಪ್ಪದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ವ್ಯಾಪಾರ ಅಭಿವೃದ್ಧಿ ಸೇವಾ ಪೂರೈಕೆದಾರರು (ಬಿಡಿಎಸ್‌ಪಿ) ಕುರಿತು ಒಂದು ದಿನದ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದಲ್ಲಿ ಉದ್ಯಮಿದಾರರಿಗೆ ವ್ಯಾಪರ ಅವಕಾಶಗಳ ಕುರಿತು ಮಾರ್ಗದರ್ಶನ, ವ್ಯವಹಾರ ಯೋಜನೆ ಸಿದ್ಧತೆಗೆ ಸಹಕಾರ, ತಂತ್ರಜ್ಞಾನದ ಉನ್ನತೀಕರಣ ಮತ್ತು ಗುಣಮಟ್ಟದ ಪ್ರಮಾಣೀಕರಣಕ್ಕೆ ಬೆಂಬಲ, ವಿಳಂಬಿತ ಪಾವತಿಗಳ ಸಮಸ್ಯೆಗಳ ಬಗ್ಗೆ ಹಾಗೂ ಬ್ರಾಂಡಿoಗ್ ಮತ್ತು ರಫ್ತು ಪ್ರಚಾರದ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಕಾರ್ಯಾಗಾರದಲ್ಲಿ ಆಸಕ್ತಿಯುಳ್ಳ ಉದ್ದಿಮೆದಾರರು ಭಾಗವಹಿಸಿ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್.ಬಿ ಅವರು ತಿಳಿಸಿದ್ದಾರೆ.