LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಮಾನ ನಿಲ್ದಾಣದ ಲೈಸೆನ್ಸ್ ಒಂದು ವರ್ಷ ವಿಸ್ತರಣೆ

ಶಿವಮೊಗ್ಗ,ಅ.25 : ವಿಮಾನ ನಿಲ್ದಾಣದ ಲೈಸೆನ್ಸ್ ಅವಧಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಒಂದು ವರ್ಷಕ್ಕೆ ವಿಸ್ತರಿಸಿದೆ. ಈ ಹಿಂದಿನ ಲೈಸೆನ್ಸ್ ಅವಧಿ ಮಂಗಳವಾರಕ್ಕೆ ಮುಕ್ತಾಯವಾಗಿದೆ.

ಲೈಸೆನ್ಸ್ ಅವಧಿ ವಿಸ್ತರಣೆ ಅಗಿರುವ ಕುರಿತು ಡಿಜಿಸಿಎ ಅಧಿಕಾರಿಗಳು ಶಿವಮೊಗ್ಗ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಂಗಳವಾರ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ. ಈಗ 2025 ರ ಅಕ್ಟೋಬರ್ 23 ರವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್ ಅವಧಿ ವಿಸ್ತರಣೆ ಆಗಿದೆ. ಒಂದೊಂದೇ ತಿಂಗಳು ವಿಸ್ತರಣೆಯಾಗುತ್ತಿತ್ತು.

2023 ರ ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. 2024 ರ ಆಗಸ್ಟ್ 23 ರವರೆಗೆ ವಿಮಾನ ನಿಲ್ದಾಣಕ್ಕೆ ಲೈಸೆನ್ಸ್ ಇತ್ತು. ಅವಧಿ ಪೂರ್ಣಗೊಳ್ಳುತ್ತಿದ್ದ ಹಿನ್ನೆಲೆ ಲೈಸೆನ್ಸ್ ನವೀಕರಣಕ್ಕೆ ಡಿಜಿಸಿಎಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆ ಲೈಸೆನ್ಸ್ ಅವಧಿಯನ್ನು ಕೇವಲ ಒಂದು ತಿಂಗಳಿಗೆ ವಿಸ್ತರಿಸಲಾಗಿತ್ತು.2024 ರ ಸೆಪ್ಟೆಂಬರ್ 23 ಕ್ಕೆ ಒಂದು ತಿಂಗಳು ಅವಧಿ ಪೂರ್ಣಗೊಂಡಿತ್ತು.

ಸುರಕ್ಷತೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಹಿನ್ನೆಲೆ ವಿಮಾನ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಐಐಡಿಸಿ) 20 ಲಕ್ಷ ರೂ. ದಂಡ ವಿಧಿಸಿ, ಪುನಃ ಒಂದು ತಿಂಗಳು ಮಾತ್ರ ಲೈಸೆನ್ಸ್ ಅವಧಿ ವಿಸ್ತರಣೆ ಮಾಡಲಾಗಿತ್ತು.

ಈ ಅವಧಿ 2024 ರ ಅಕ್ಟೋಬರ್ 23ಕ್ಕೆ ಮುಕ್ತಾಯವಾಗುತ್ತಿತ್ತು. ಎರಡು ಬಾರಿ ಒಂದೊಂದು ತಿಂಗಳು ಮಾತ್ರ ಲೈಸೆನ್ಸ್ ಅವಧಿ ವಿಸ್ತರಣೆ ಮಾಡಿದ್ದ ಡಿಜಿಸಿಎ, ತನ್ನ ಸೂಚನೆಗಳನ್ನು ಪಾಲಿಸಿದ ಹಿನ್ನೆಲೆ ಒಂದು ವರ್ಷದ ಅವಧಿಗೆ ಲೈಸೆನ್ಸ್ ನವೀಕರಣ ಮಾಡಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST