ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವ ಸಂಘ,ಸಂಸ್ಥೆಗಳಿಗೆ ಮುಕ್ತ ಅವಕಾಶ:ಎಸ್ಪಿ ಉಮಾ
ದಾವಣಗೆರೆ: ಸಮಾಜ ಸೇವೆ ಮತ್ತು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಲು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವ ಯಾವುದೇ ಸಂಘ, ಸಂಸ್ಥೆಗಳಿಗೆ ಮುಕ್ತ ಅವಕಾಶ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ಶುಕ್ರವಾರ ಸಂಜೆ ನಗರದ ಎಸ್‌ಎಸ್ ಕನ್ವೆನ್ಷನ್ ಹಾಲ್‌ನ ಪಾರ್ವತಿ ಪರ್ಲ್ ಸಭಾಂಗಣದಲ್ಲಿ ರೌಂಡ್ ಟೇಬಲ್ ಇಂಡಿಯಾ -76 ಮತ್ತು ದಾವಣಗೆರೆ ಲೇಡಿಸ್ ಸರ್ಕಲ್ -168 ವತಿಯಿಂದ “ನೈಟ್ಸ್ ಇನ್ ಖಾಕಿ” ಕಾರ್ಯಕ್ರಮದಡಿ ಸಿಎಂ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು
ಸಮಾಜದಲ್ಲಿಂದು ಸಾಕಷ್ಟು ಕಾನೂನು ಬಾಹಿರ ಮತ್ತು ಕಾನೂನು ಉಲ್ಲಂಘನೆ ಕೃತ್ಯಗಳು ಹೆಚ್ಚುತ್ತಿವೆ. ಮೋಸ ಮಾಡುವುದು ಮತ್ತು ಮೋಸ ಹೋಗುವವರಲ್ಲಿ ವಿದ್ಯಾವಂತರೆ ಹೆಚ್ಚಾಗಿರುವುದು ಕಳವಳಕಾರಿಯಾದ ಸಂಗತಿ. ಇಂಥಹ ಸಮಾಜಬಾಹಿರ ಕೃತ್ಯಗಳನ್ನು ತಡೆಯಲು ಜಾಗೃತಿಯ ಅವಶ್ಯಕತೆ ಹೆಚ್ಚಾಗಿದೆ. ಇದಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವ ಯಾವುದೇ ಸಂಘ, ಸಂಸ್ಥೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.
ವೃತ್ತಿಯಲ್ಲಿ ಸಾಧನೆ ತೋರಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಈ ರೀತಿಯ ಸನ್ಮಾನ, ಅಭಿನಂದನೆಗಳು ಉತ್ತಮ ಕಾರ್ಯಕ್ಕೆ ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಮಹಾರಾಷ್ಟ್ರ , ಮುಂಬೈ, ಕರಾವಳಿ ಭಾಗದಲ್ಲಿ “ನೈಟ್ಸ್ ಇನ್ ಖಾಕಿ” ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತವೆ. ಅದೇ ಮಾದರಿಯಲ್ಲಿ ದಾವಣಗೆರೆಯಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು.
ರೌಂಡ್ ಟೇಬಲ್ ಇಂಡಿಯಾ ರಾಷ್ಟಿçÃಯ ಅಧ್ಯಕ್ಷ ಚೈತನ್ಯ ದೇವ್‌ಸಿಂಗ್ ಮಾತನಾಡಿ, ರೌಂಡ್ ಟೇಬಲ್ ಇಂಡಿಯಾ ಯುವ ಉತ್ಸಾಹಿ ಯುವಕರನ್ನು ಒಳಗೊಂಡ ಸಂಸ್ಥೆಯಾಗಿದ್ದು, ರಕ್ತದಾನ, ಶೈಕ್ಷಣಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಇಂಥಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇನ್ನು ಮುಂದೆ ನಿರಂತರವಾಗಿ ನಡೆಸಿಕೊಂಡು ಬರಲಾಗುವುದು ಎಂದು ಹೇಳಿದರು.
ದಾವಣಗೆರೆ ರೌಂಡ್ ಟೇಬಲ್-76 ಛೇರ್ಮನ್ ಸುಹಾಸ್ ಮಾತನಾಡಿ, ಇದೊಂದು ರಾಜಕೀಯೇತರ ಮತ್ತು ಸರ್ಕಾರೇತನ ಸಂಸ್ಥೆಯಾಗಿದ್ದು, ಯುವಕರನ್ನು ಮಾತ್ರ ಒಳಗೊಂಡ ಸಂಸ್ಥೆಯಾಗಿದೆ. ಸ್ನೇಹದ ಮೂಲಕ ಸಮಾಜಸೇವೆ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಸ್ಥಳಿಯವಾಗಿ ಶೈಕ್ಷಣಿಕ, ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ತನ್ನ ಸೇವೆಯನ್ನು ಮುಂದುವರಿಸಿದೆ ಎಂದು ಹೇಳಿದರು.
ದಾವಣಗೆರೆ ಲೇಡಿಸ್ ಸರ್ಕಲ್-168 ಚರ‍್ಮನ್ ಮಾಧುರಿ ಸುಹಾಸ್ ಮಾತನಾಡಿ, ಲೇಡಿಸ್ ಸರ್ಕಲ್ ಸಂಸ್ಥೆ ಕಳೆದ 2017-18 ರಲ್ಲಿ ಆರಂಭಗೊAಡಿತು. ಇದುವರೆಗೂ ನೂರಾರು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ತನ್ನನ್ನು ಗುರುತಿಸಿಕೊಂಡಿದ್ದು, ಭವಿಷ್ಯದಲ್ಲಿಯೂ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಹೆಚ್ಚುವರಿ ಎಸ್‌ಪಿಗಳಾದ ವಿಜಯ್ ಕುಮಾರ್ ಸಂತೋಷ್, ಮಂಜುನಾಥ್, ಲೇಡಿಸ್ ಸರ್ಕಲ್ ಇಂಡಿಯಾ ಅಧ್ಯಕ್ಷೆ ಮನಿಷಾ, ರೌಂಡ್ ಟೇಬಲ್ ಏರಿಯಾ 10 ಅಧ್ಯಕ್ಷ ಸುದರ್ಶನ್ ಜಾದವ್, ಮಹಿಳಾ ಛರ‍್ಮನ್ ಶ್ರೇಯಾ ಸುಲ್ತಾನ್‌ಕರ್ ಉಪಸ್ಥಿತರಿದ್ದರು.
ನ್ಯಾಮತಿಯ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಪತ್ತೆಹಚ್ಚಿ ಮುಖ್ಯಮಂತ್ರಿಗಳ ಪದದಕ್ಕೆ ಭಾಜರಾಗಿರುವ 20 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.