ಬಜೆಟ್ ಮಂಡನೆ ತಯಾರಿ ಭೋಗಸ್ : ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ.!
ಚಿತ್ರದುರ್ಗ: ಬಜೆಟ್ ಮಾಡೋಕೆ ಸಿ ಎಂ ಸಿದ್ಧರಾಮಯ್ಯ ಬಳಿ ಹಣ ಇಲ್ಲ, ಆದರೂ ಅಧಿಕಾರ ಉಳಿಸಿಕೊಳ್ಳಲು ಬಜೆಟ್ ಮಂಡನೆ ತಯಾರಿ ನಡೆಸಿದ್ದು, ಇದೊಂದು ಭೋಗಸ್ ಬಜೆಟ್ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 3 ವರ್ಷದಲ್ಲಿ ತೋರಿಸಿದಷ್ಟು ಆದಾಯವೇ ಬಂದಿಲ್ಲ. ರಾಜ್ಯದ ಸಾಲ 3ಲಕ್ಷ ಕೋಟಿ ರೂ. ತಲುಪಲಿದ್ದು, ರಾಜ್ಯದಲ್ಲಿ ಹೆಚ್ಚಿನ ಸಾಲ ಮಾಡಿದ ಸಿಎಂ ಸಿದ್ಧರಾಮಯ್ಯ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸರ್ಕಾರ ಸಭೆಯೇ ಕರೆದಿಲ್ಲ. ಕೇಂದ್ರ ಸರ್ಕಾರ ಬಳಿ ಹೊಗೋಣ ಬನ್ನಿ ಎಂದು ಯಾರನ್ನು ಕರೆದಿಲ್ಲ. ಸಿಎಂ ಸಿದ್ಧರಾಮಯ್ಯ ಜಿಎಸ್ಟಿ ಸಭೆಗೆ ಹೋಗಲ್ಲ. ಮಂತ್ರಿಯೊಬ್ಬರನ್ನು ಕಳಿಸಿ ಸಿಎಂ ಬೇಜವಬ್ದಾರಿತನ ಮೆರೆದಿದ್ದಾರೆ. ಯಾಕೆ ಸಭೆಗೆ ಹೋಗಲು ಸಿಎಂಗೆ ಯೋಗ್ಯತೆ ಇಲ್ಲವೇ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ ಉಳಿದಿವೆ. 65 ಸಾವಿರ ಹುದ್ದೆ ಭರ್ತಿಗೆ ಫೈನಾನ್ಸ್ ಇಲಾಖೆ ಆದೇಶಿಸಿ 6 ತಿಂಗಳಾಗಿದೆ. ಆದರೂ ರಾಜ್ಯ ಸರ್ಕಾರ 2 ವರ್ಷದಲ್ಲಿ ಒಬ್ಬರಿಗೂ ಉದ್ಯೋಗ ನೀಡಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ. ಸಿಎಂ, ಡಿಸಿಎಂ ಅಧಿಕಾರದ ಕಚ್ಚಾಟದಲ್ಲಿ ಮುಳುಗಿ ದ್ದಾರೆ. ಡಿಸಿಎಂ ಡಿಕೆಶಿಗೆ ಸಿಎಂ ಉದ್ಯೋಗ ಬೇಕು, ಸಿಎಂಗೆ ಎರಡೂವರೆ ವರ್ಷ ಇದ್ದದ್ದು 5 ವರ್ಷ ಉದ್ಯೋಗ ಬೇಕು. ಸಿಎಂ, ಡಿಸಿಎಂಗೆ ಆದಾಯ ಬರುವ ಉದ್ಯೋಗ ಮಾತ್ರ ಬೇಕು ಎಂದು ಕಿಡಿಕಾರಿದರು.
ಸಚಿವ ಸಂಪುಟ ಪುನರಚನೆಗೆ ಕೈ ಶಾಸಕರ ಪತ್ರ ವಿಚಾರವಾಗಿ ಮಾತನಾಡಿ, ಕಾದು ಕಾದು ಕಾಂಗ್ರೆಸ್ ಶಾಸಕರು ಸುಸ್ತಾಗಿದ್ದಾರೆ. ಮೊದಲ ಸಲ ಶಾಸಕರಾದ 30 ಜನ ಬೇಡಿಕೆಯಿಟ್ಟಿದ್ದಾರೆ. ಇದಾದ ಬಳಿಕಾ ಎರಡನೇ ಸಲ ಶಾಸಕರಾದವರಿಂದ ಬೇಡಿಕೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ಶಾಸಕರಿಂದ ಫಾರಿನ್ ಟೂರ್ ಹೋಗಿದ್ದಾರೆ. ಇವೆಲ್ಲವುಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದ್ದಂತಿದೆ ಎಂದು ಹೇಳಿದರು.
ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಟ್ರಾಪ್ ವಿಚಾರ ಮಾತನಾಡಿ ತಪ್ಪು ಮಾಡಿರೋರು ಯಾರೇ ಆದರೂ ಶಿಕ್ಷೆ ಆಗಬೇಕು ಈಗಾಗಲೇ ನೋಟಿಸ್ ನೀಡಲು ನಾವು ಸೂಚಿಸಿದ್ದೇವೆ ಯಾರೋ ಸ್ವಾಮೀಜಿ ಕುತಂತ್ರದ ಆಡಿಯೋ ಬಿಡುಗಡೆ ಆಗಿದೆ ತನಿಖೆಯಿಂದ ಸತ್ಯಾಸತ್ಯತೆ ಹೊರಗಡೆ ಬರಲಿ ಕೈ ಶಾಸಕ ಸೈಲ್ ಜೈಲಿಗೆ ಹೋಗಿ ಬಂದರಲ್ಲ ಕಾಂಗ್ರೆಸ್ ಏನು ಕ್ರಮ ಕೈಗೊಂಡಿದೆ ಕಾಂಗ್ರೆಸ್ ಶಾಸಕ ಕುಲಕರ್ಣಿ ಮರ್ಡರ್ ಕೇಸಲ್ಲಿದ್ದಾರೆ ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿಯ 150ಕೋಟಿ ಸೀಜ್ ಸೀಜ್ ಆಗದೇ ಇರೋದು 1500ಕೋಟಿ ಇದೆ ಕಾಂಗ್ರೆಸ್ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಮಗೆ ಪ್ರಶ್ನೆ ಮಾಡ್ತಾರೆ ಎಂದ ಅಶೋಕ್ ಸದನದಲ್ಲಿ ಸರ್ಕಾರದ ಎಡಬಿಡಂಗಿತನ ಬಿಚ್ಚಿಡುತ್ತೇವೆ ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಮೋದಿ, ರಾಷ್ಟ್ರೀಯ ಅದ್ಯಕ್ಷರ ನೇತೃತ್ವದಲ್ಲಿ ನಿರ್ಧಾರಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿಗೆ ಮಾತುಕತೆ ನಡೆಯುತ್ತಿದೆರಾಷ್ಟ್ರೀಯ ನಾಯಕರು ಸಭೆ ಕರೆದು ತೀರ್ಮಾನಿಸುತ್ತಾರೆ ಒಟ್ಟಿಗೆ ಹೋಗುವುದಾದರೆ ಒಟ್ಟಿಗೆ ಹೋಗುತ್ತೇವೆಸಪರೇಟಾಗಿ ಹೋಗಬೇಕೆಂದರೆ ಸಪರೇಟಾಗಿ ಹೋಗುತ್ತೇವೆಫ್ರೆಂಡ್ಲಿ ಎಂದಾದರೆ ಫ್ರೆಂಡ್ಲಿ ಹೋಗುತ್ತೇವೆಂದು ಆರ್ ಅಶೋಕ್ ತಿಳಿಸಿದರು.
ಮನಮೋಹನ್ ಸಿಂಗ್ ಅವಧಿಯಲ್ಲಿ ಕೇಂದ್ರ ನೀಡಿದ ಹಣ ಮೋದಿ ಅವಧಿಯಲ್ಲಿ ಕೇಂದ್ರ ನೀಡಿದ ಹಣ ಎಷ್ಟು ತಿಳಿಸಲಿ ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಶ್ವೇತ ಪತ್ರ ಪ್ರಕಟಿಸಲು ಎಂದು ಸವಾಲ್ ಹಾಕಿದ ಅಶೋಕ್ ಸರ್ಕಾರಿ ವೈದ್ಯರು, ಗುತ್ತಿಗೆದಾರರು, ಸಾರಿಗೆ ನೌಕರರಿಂದ ಗಡುವು ಡಿಸಿಎಂ ಡಿಕೆ ಶಿವಕುಮಾರ್ ಸಹ ಹೋರಾಟ ಶುರು ಮಾಡ್ತಾರೆ ಅಧಿಕಾರಕ್ಕಾಗಿ ಡಿಕೆಶಿ ಹೋರಾಟ ಶುರು ಮಾಡ್ತಾರೆ ಸಿಎಂ ಸಿದ್ಧರಾಮಯ್ಯ ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ ಏಕಾಏಕಿ ಜಿ.ಪಂ ಚುನಾವಣೆ ಘೋಷಣೆ ಮಾಡ್ತಾರೆ ಚುನಾವಣೆ ಆದರೆ ಅಲ್ಲಿವರೆಗೆ ಸಿಎಂ ಮುಂದುರಿಕೆ ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ಅಂಟಿ ಕುಳಿತಿದ್ದಾರೆ ಎಂದ ಅವರು ಜಿ.ಪಂ, ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧರಿದ್ದೇವೆ ಸಲೀಸಾಗಿ ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ರೈತವ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜನ್, ಪ್ರಧಾನ ಕಾರ್ಯದರ್ಶಿಗಳಾದ ಮಾಧುರಿ ಗೀರೀಶ್,ವೆಂಟಕೇಶ್ ಯಾದವ್, ಮೋಹನ್ ಕುಮಾರ್, ವಕ್ತಾರ ನಾಗರಾಜ್ ಬೇದ್ರೆ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಗಾ,ನ ಲಿಂಗರಾಜು, ಸಂಪತ್ ಕುಮಾರ್ ಕಿರಣ್ ಸೇರಿದಂತೆ ಇತರರು ಹಾಜರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.