LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಂಪ್ಡ್ ಸ್ಟೋರೇಜ್ ಯೋಜನಾ ಪ್ರದೇಶದ ಬಗ್ಗೆ ನಾಳೆ ಸಿಇಸಿ ಸಭೆಗೆ ವಿರೋಧ

ಶಿವಮೊಗ್ಗ, ಜೂ.01 : ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಮತ್ತು ವರಾಹಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರಿಯ ಅಧಿಕಾರ ಸಮಿತಿ ಯೋಜನಾ ಪ್ರದೇಶದಲ್ಲಿ ಮಾಹಿತಿ ಸಂಗ್ರಹಕ್ಕಾಗಿ ಉನ್ನತ ಸಮಿತಿ ನಾಳೆ ಬರಲಿದ್ದು, ಇದು ಯಾರ ಒತ್ತಡದ ಮೇಲೆ ಎಂದು ಪ್ರಶ್ನಿಸಿರುವ ಮಾಜಿ ಡಿಸಿಎಂ ಕೆ ಎಸ್ ಈಶ್ವ್‌ರಪ್ಪ, ನಾಳೆ ನಾಡಿದ್ದು ಸಾರ್ವಜನಿಕರ ಸಭೆ ನಡೆಸಲಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬಳಗದ ಸಂಸ್ಥಾಪಕ ಕೆ ಎಸ್ ಈಶ್ವರಪ್ಪ ಮತ್ತು ಮುಖಂಡ ಶ್ರೀಕಾಂತ್, ಜೂನ್ ೨, ೩ರಂದು ಈ ಸಂಸ್ಥೆಯ ಸದಸ್ಯರಾದ ಸುನೀಲ್ ಲಿಮಯೆ ಶರಾವತಿ ಪಿ.ಎಸ್.ಪಿ. ಯೋಜನೆಗೆ ಸಂಬಂಧಿಸಿದಂತೆ, ಕೆ.ಪಿ.ಸಿ. ಅಧಿಕಾರಿಗಳು ಸೇರಿಂದತೆ ಸಾರ್ವಜನಿಕರೊಂದಿಗೆ ಸಭೆಯನ್ನು ಆಯೋಜಿಸಿರುವುದಾಗಿ ಮಾಹಿತಿ ಬಂದಿದೆ ಎಂದರು.

ಈ ಸಂಸ್ಥೆಯು ಪರಿಸರಕ್ಕೆ ಸಂಬಂಧಿಸಿದಂತ ವಿಷಯಗಳಲ್ಲಿ ಸ್ವಾಯುತ್ತವಾಗಿ ತನಿಖೆ ನಡೆಸಿ ಅಭಿವೃದ್ಧಿ ಯೋಜನೆಗಳಿಂದ ಪರಿಸರಕ್ಕೆ ಉಂಟಾಗುವ ಸಾಧಕ-ಭಾದಕಗಳ ಮಾಹಿತಿಯನ್ನು ಸಂಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ನೇರವಾಗಿ ಸಲ್ಲಿಸುವಂತಹ ಸಂವಿಧಾನಿಕ ಸಂಸ್ಥೆಯಾಗಿದೆ. ಶರಾವತಿ ಪಿ.ಎಸ್.ಪಿ. ಸಂಬಂಧಿಸಿದಂತೆ ಈಗಾಗಲೇ ಮಾನ್ಯ ಕರ್ನಾಟಕ ಹೈ ಕೋರ್ಟ್‌ನಲ್ಲಿ ತಡೆಯಾಜ್ಞೆ ಜಾರಿಯಾಗಿದ್ದು, ಇಂತಹ ಸಂದರ್ಬದಲ್ಲಿ ಕೇಂದ್ರದ ಉನ್ನತ ಮಟ್ಟದ ಸಂಸ್ಥೆಯಿಂದ ಈ ಯೋಜನೆಗೆ ಸಂಬಂಧಿಸಿದಂತೆ ತರಾತುರಿಯಲ್ಲಿ ಸಭೆ ನಡೆಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.

ಕೇಂದ್ರ ವನ್ಯ ಜೀವಿ ಮಂಡಳಿ ಸದಸ್ಯರಾದ ಪ್ರೋ. ಸುಕುಮಾರ್ ಹಾಗೂ ಹೆಚ್.ಎಸ್. ಸಿಂಗ್ ತಂಡವು ಮತ್ತು ಹಿರಿಯ ಐ.ಎಫ್.ಎಸ್. ಅಧಿಕಾರಿ ಪ್ರಣೀತ ಕೌರ್ ಇವರು ಶರಾವತಿ ಪಿ.ಎಸ್.ಪಿ. ಯೋಜನೆಯು ಕಾರ್ಯ ಸಾಧುವಲ್ಲ, ಈ ಯೋಜನೆಯಿಂದ ಪರಿಸರಕ್ಕೆ ಅಪಾರ ಪ್ರಮಾಣದ ಹಾನಿಯಾಗುತ್ತದೆ ಎಂದು ವರದಿ ನೀಡಿರುತ್ತದೆ. ಹೈಕೋರ್ಟ್ ಸಹ ಈ ವರದಿಗಳನ್ನು ಪರಿಗಣಿಸಿ ಶರಾವತಿ ಪಿಎಸ್‌ಪಿ ಯೋಜನೆಗೆ ತಡೆಯಾಜ್ಞೆ ನೀಡಿರುವುದನ್ನು ನೆನಪಿಸಿದರು.

ಕೇಂದ್ರದ ಉನ್ನತ ಮಟ್ಟದ ಸಮಿತಿಯಿಂದ ಯೋಜನೆಗೆ ಪೂರಕವಾದ ವರದಿಯನ್ನು ಪಡೆಯುವ ಉದ್ದೇಶದಿಂದ ಸಿ.ಇ.ಸಿ.ಯಿಂದ ತರಾತುರಿಯಲ್ಲಿ ಯೋಜನಾ ಪ್ರದೇಶಕ್ಕೆ ಭೇಟಿ ಹಾಗೂ ಸಭೆಯನ್ನು ಏರ್ಪಡಿಸುವ ಉದ್ದೇಶವಾಗಿದೆ. ಈಗಾಗಲೇ ಶರಾವತಿ ಪಿ.ಎಸ್.ಪಿ. ವಿರುದ್ಧ ಸುಮಾರು ೭೫ ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಮತ್ತು ಸಿ.ಈ.ಸಿ. ಸಭೆಯ ಬಗ್ಗೆ ಸಾರ್ವಜನಿಕರಿಗಾಗಲೀ ಮಾಧ್ಯಮಗಳಿಗಾಗಲೀ ಮತ್ತು ಯೋಜನೆಯಿಂದ ಬಾಧಿರಾಗಲಿರುವವರಿಗೂ ಯಾವುದೇ ಮಾಹಿತಿ ನೀಡದೇ ಸಭೆ ನಡೆಸುತ್ತಿರುವ ಅನುಮಾನಕ್ಕೆ ಪುಷ್ಟಿ ನೀಡುತ್ತದೆ ಎಂದರು.

ಮುಕಾಂಬಿಕ ಅಭಯಾರಣ್ಯದಲ್ಲಿ ವರಾಹಿ ಪಿ.ಎಸ್.ಪಿ. ಯೋಜನೆಯನ್ನು ಕೈಗೊಳ್ಳಲು ರಾಜ್ಯ ವನ್ಯ ಜೀವಿ ಮಂಡಳಿಯಿಂದ ಈಗಾಗಲೇ ತಾಂತ್ರಿಕ ಅನುಮೋದನೆ ತೊರೆದಿದ್ದು, ಶರಾವತಿ ಪಿ.ಎಸ್.ಪಿ. ಮತ್ತು ವರಾಹಿ 224.2.2   ಯೋಜನೆಗಳಿಗೂ ಪೂರಕವಾದಂತಹ ವರದಿಯನ್ನು ಪಡೆಯಲು ಯೋಜನಾ ಪ್ರದೇಶದ ಭೇಟಿ , ಸಭೆ ನಡೆಸಲಾಗುತ್ತಿದೆ ಎಂಬ ಸಂಶಯ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪರಿಸರ ಹೋರಾಟಗಾರರಾದ ಜನಾರ್ದನ ಪೈ, ವಿಶ್ವೇಶ್ವರಯ್ಯ, ಸುಬ್ರಹ್ಮಣ್ಯ, ಮಹದೇವಸ್ವಾಮಿ, ವಿ ರಾಜು ಹಾಗೂ ಬಳಗದ ಮುಖಂಡ ಶ್ರೀಕಾಂತ್ ಮೊದಲಾದವರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST