LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಮ್ಮ ಭಾಷೆ ನಮ್ಮದು ಇಂಗ್ಲೀಷ್ ಬರುವುದಿಲ್ಲವೆಂಬ ಕೀಳರಿಮೆ ಬೇಡ : ಬುಕರ್ ಪ್ರಶಸ್ತಿ ಪುರಸ್ಕತರಾದ ಬಾನು ಮುಷ್ತಾಕ್



ಬೆಂಗಳೂರು: ನನ್ನ ಮಾತೃ ಭಾಷೆ ಉರ್ದು, ನನ್ನ ನಾಡಿನ ಭಾಷೆ ಕನ್ನಡ, ನನಗೂ ಸಹ ಅಷ್ಟಾಗಿ ಇಂಗ್ಲೀಷ್ ಬರುವುದಿಲ್ಲ. ನಮ್ಮ ಭಾಷೆ ಬಗ್ಗೆ ನಮಗೆ ಗೌರ ಇರಬೇಕು ಹಾಗೂ ಹಿಡಿತ ಇರಬೇಕು. ಕನ್ನಡದವರಾಗಿ ಈಗಿನ ಮಕ್ಕಳಿಗೆ ಕನ್ನಡ ಸಹ ಸರಿಯಾಗಿ ಬರದಿರುವುದು ಇಂದಿನ ದುರಂತ ಎಂದು ಬುಕರ್ ಪ್ರಶಸ್ತಿ ವಿಜೇತ ಕನ್ನಡ ಬರಹಗಾರ್ತಿ ಶ್ರೀಮತಿ ಬಾನು ಮುಷ್ತಾಕ್ ಅವರು ವಿಷಾಧ ವ್ಯಕ್ತಪಡಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕøತರಾದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರೊಂದಿಗೆ ಕಬ್ಬನ್ ಪಾರ್ಕ್‍ನ ಪ್ರೆಸ್ ಕ್ಲಬ್‍ನಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ನಾನು ಪ್ರಾಥಮಿಕ ಶಾಲೆಯವರೆಗೆ ಕನ್ನಡ ಮಾದ್ಯಮದಲ್ಲಿಯೆ ಕಲಿತಿರುವುದು. ಕನ್ನಡದಲಿಯೆ ಕಥೆ ಬರೆದಿದ್ದೇನೆ.  ಅದಕ್ಕೆ ಇಂಗ್ಲೀಷ್ ಬರಹಗಾರ್ತಿ ದೀಪಾ ಭಾಸ್ತಿ ಅವರು ಇಂಗ್ಲೀಷ್‍ಗೆ ಅನುವಾದ ಮಾಡಿದ್ದಾರೆ. ನನಗೆ ಸರಿಯಾಗಿ ಇಂಗ್ಲೀಷ್ ಬರುವುದಿಲ್ಲ ಎಂಬ ಕೀಳರಿಮೆ ನನ್ನನ್ನು ಇಂದಿಗೂ ಕಾಡುತ್ತಿಲ್ಲ. ನಿಮಗೆ ಬರುವ ಭಾಷೆ ನಿಮ್ಮ ಬಲ. ನಾವು ಮಾಡುವ ಕೆಲಸದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು ಎಂದರು.

ಸಂವಾದದಲ್ಲಿ ಕೇಳುಗರೊಬ್ಬರು ಗ್ರಾಮೀಣ ಪ್ರದೇಶzಲ್ಲಿÀ ಹೆಚ್ಚಿನ ಮಕ್ಕಳು ಕನ್ನಡ ಮಾದ್ಯಮದಲ್ಲಿ ಶಿಕ್ಷಣ ಕಲಿಯುತ್ತಿದ್ದಾರೆ,  ತಾವು ಕನ್ನಡ ಸಾಹಿತ್ಯದಲ್ಲಿ ಅಂತರಾಷ್ಟೀಯ ಬೂಕರ್ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದೀರಿ ಮಕ್ಕಳಿಗೆ ತಾವು ಸ್ಪೂರ್ತಿ ತುಂಬಬೇಕು ಎಂದಾಗ ಉತ್ತರಿಸಿದ ಅವರು ಅವರವರ ಭಾಷೆ ಅವರದ್ದು, ನನಗೆ ಬುಕರ್ ಬಂದಾಗ ಅಂತರರಾಷ್ಟ್ರೀಯ ವೇದಿಕೆಗಳು ಹಾಗೂ ಮಾಧ್ಯಮಗಳಲ್ಲಿ ನಾನು ಭಾಷಾಂತರಕಾರರನ್ನು ಬಳಸಿಕೊಂಡು ಸಂವಹನ ನಡೆಸಿದ್ದು, ಇದರ ಬಗ್ಗೆ ಹೆಮ್ಮೆ ಇದೆ.

ನನ್ನ ಬದುಕಿನಲ್ಲಿ ನನ್ನದೇ ಆದ ಅಸ್ತಿತ್ವ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಚಿಕ್ಕ ವಯಸ್ಸಿನಲ್ಲಿಯೇ ನಾನು ನನ್ನ ಸಮಾಜದೊಳಗಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭಿಸಿದೆ. ಶಿಕ್ಷಣ ಪಡೆದ ನಂತರ ವಕೀಲೆಯಾಗಿ, ಶಿಕ್ಷಕಿಯಾಗಿ, ಹೋರಾಟಗಾರ್ತಿಯಾಗಿ ನನ್ನನ್ನು ನಾನು ಗುರುತಿಸಿಕೊಂಡು ನನ್ನ ಅನುಭವಗಳನ್ನು ಹಾಗೂ ಕಣ್ಣಾರೆ ಕಂಡ ಘಟನೆಗಳಿಗೆ ಸಾಹಿತ್ಯದ ರೂಪ ಕೊಡಲು ಆರಂಭಿಸಿ ಇಂದು ಅಂತರರಾಷ್ಟ್ರೀಯ ಮಟ್ಟದ ಬುಕರ್ ಪಡೆಯುವದರೊಂದಿಗೆ ಜಗತ್ತಿನ ಕಣ್ಣಿಗೆ ಬಿದ್ದಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ನನ್ನ ಬರಹದ ಜೊತೆಗೆ ನನ್ನ ಬದುಕು ನನ್ನೊಳಗೆ ಚರ್ಚೆ ಹುಟ್ಟು ಹಾಕುತ್ತಿದ್ದವು.  ಬರವಣಿಗೆಯಲ್ಲಿ ಮರೆಮಾಚುವುದು ಏನೂ ಇಲ್ಲ,  ಎಲ್ಲವೂ ತೆರೆದಿಟ್ಟ ಪುಸ್ತಕ. ಭವಿಷ್ಯದಲ್ಲಿ ಕಾದಂಬರಿ ಸೇರಿದಂತೆ ಆತ್ಮಕಥನವನ್ನು ಸಹ ಬರೆಯುವ ಉದ್ದೇಶವಿದ್ದು, ಇಲ್ಲಿಯವರೆಗೆ ಯಾವುದೇ ಪ್ರಶಸ್ತಿ ಅಥವಾ ಪುರಸ್ಕಾರಗಳಿಗಾಗಿ ನಾನು ಬರೆದಿಲ್ಲ, ಸಾಹಿತ್ಯ-ಹೋರಾಟ-ವಕೀಲ ವೃತ್ತಿ ಒಳಗೊಂಡಂತೆ  51 ವರ್ಷಗಳ ಸುಖೀ ದಾಂಪತ್ಯವನ್ನು ಅನುಭವಿಸಿದ್ದೇನೆ ಎಂದು ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಆಯೇಶಾ ಖಾನಂ ಅವರು ಮಾತನಾಡಿ, ಕನ್ನಡ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸುವಂತೆ ಮಾಡಿದ ನಮ್ಮ ಹೆಮ್ಮೆಯ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕøತರಾದ ಶ್ರೀಮತಿ ಬಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ಅವರು ನಮ್ಮ ಮನೆಗೆ ಬಂದಿದ್ದಾರೆ. ಇವರಿಬ್ಬರೂ ಸಹ ಮೂಲತಃ ಪತ್ರಕರ್ತರಾಗಿದ್ದವರು. ಇವರನ್ನು ನಮ್ಮ ಮಾಧ್ಯಮ ಅಕಾಡೆಮಿಯಿಂದ ಸನ್ಮಾನಿಸುತ್ತಿರುವುದು ಹೆಮ್ಮೆ ಎನಿಸುತ್ತದೆ ಎಂದರು.

ನಮ್ಮ ರಾಜ್ಯದ ಇಬ್ಬರು ಹೆಣ್ಣು ಮಕ್ಕಳು ಬುಕರ್ ಪ್ರಶಸ್ತಿ ಪಡೆದಿರುವುದು ನಮ್ಮ ರಾಜ್ಯದ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. ಇವರ ಸಾಧನೆ ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ. ಹೆಣ್ಣುಮಕ್ಕಳ ಕುರಿತು ಇವರ ಪುಸ್ತಕದಲ್ಲಿನ ಸಂವೇದನಾಶೀಲ ವಸ್ತುವಿಷಯವನ್ನು ಸಮಾಜ ನೋಡಿ ಅರಿತುಕೊಳ್ಳಬೇಕು ಎಂದರು.




ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದಲ್ಲಿ 140 ಕೋಟಿ ಭಾರತೀಯರಿಗೆ ಹಾಗೂ ಜಗತ್ತಿನ ಅರ್ಧದಷ್ಟಿರುವ ಮಹಿಳೆಯರಿಗೆ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕøತರಾದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರು ಹೆಮ್ಮೆ ತಂದು ಕೊಟ್ಟಿದ್ದಾರೆ. ಕನ್ನಡದ ಕತೆಗಳನ್ನು ಶ್ರೀಮತಿ ದೀಪಾ ಭಾಸ್ತಿ ಅವರು  ಆಂಗ್ಲಬಾಷೆಗೆ “ಹಾರ್ಟ್ ಲ್ಯಾಂಪ್” ಹೆಸರಿನಲ್ಲಿ ಅನುವಾದಿಸಿ ಬುಕರ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡಕ್ಕೆ ಅಂತರರಾಷ್ಟ್ರೀಯ ಗೌರವ ತಂದು ಕೊಟ್ಟಿದ್ದಾರೆ.  ಜಗತ್ತಿನ ಈ ಶ್ರೇಷ್ಠ ಪ್ರಶಸ್ತಿಯನ್ನು  ಸಾಹಿತಿಗಳಿಗಿಂತ ಹೆಚ್ಚು ಸಂಭ್ರಮಿಸಿದವರು ಪತ್ರಕರ್ತರು. ಕಾರಣ ಇವರಿಬ್ಬರೂ ಮೂಲತಃ ಇಬ್ಬರೂ ಪತ್ರಕರ್ತರಾಗಿದ್ದವರು ಎಂದರು.ಸಾಹಿತಿಗಳಿಗೆ ತಮ್ಮ ಖಾಸಗಿ ಬದುಕಿಗಿಂತ ಸಾಹಿತ್ಯದ ಬದುಕು ದೊಡ್ಡದು. ಬಾನು ಮುಷ್ತಾಕ್ ಅವರು ಬದುಕಿನ ಅಗ್ನಿಕುಂಡ ದಾಟಿ ಸಾಹಿತ್ಯ ರಚಿಸಿದ್ದಾರೆ.   ಈ ರೀತಿ ಬರೆಯಲು ಅವರಿಗೆ ಮಾತ್ರ ಸಾಧ್ಯ.  ಶಿಕ್ಷಕಿ, ಪತ್ರಕರ್ತೆ, ವಕೀಲೆ, ಹೋರಾಟಗಾರ್ತಿಯಾಗಿ ಹಲವಾರು ಅವತಾರ ಎತ್ತಿ ಬಂದಿದ್ದಾರೆ.  ಅವರ ತಂದೆಗೆ ನಾವು ನಮಸ್ಕರಿಸಬೇಕು. ಯಾಕೆಂದರೆ ದಶಕಗಳ ಹಿಂದಿನ ಕಾಲದ ಕಟ್ಟುಪಾಡು ಸಂಪ್ರದಾಯವಿರುವ ಸಂದರ್ಭದಲ್ಲಿಯೆ ತಮ್ಮ ಮಗಳಿಗೆ ಉನ್ನತ ಶಿಕ್ಷಣ ನೀಡಿದ್ದಾರೆ.   ನಾವು ನಮ್ಮ ಮನೆಯ ಮಹಿಳೆಯರಿಗೆ ಸ್ವಾತಂತ್ರ್ಯ ಕೊಡಲು ಸಾಧ್ಯವಾದಾಗ ಮಾತ್ರ ಬಾನು ಮುಷ್ತಾಕ್ ಅವರಿಗೆ ನಾವು ನಿಜವಾದ ಅಭಿನಂದನೆ ಸಲ್ಲಿಸಿದಂತಾಗುತ್ತದೆ.  ಮಹಿಳೆಯರಿಗೆ ಬರೆಯಲು ಓದಲು ಬಿಟ್ಟರೆ, ಒಳ್ಳೆಯ ಹೆಂಡತಿ, ಮಗಳು ಆಗಲು ಸಾಧ್ಯ ಎಂಬುದನ್ನು ಸಮಾಜಕ್ಕೆ ತೋರಿಸಿ ಕೊಟ್ಟಿದ್ದಾರೆ ಎಂದರು.

ಪ್ರೆಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಶಿವಕಮಾರ್ ಬೆಳ್ಳಿತಟ್ಟೆ ಅವರು ಮಾತನಾಡಿ, ಮಾದ್ಯಮ ಅಕಾಡೆಮಿಯು ಸರ್ಕಾರದ ಪ್ರಮುಖ ಅಂಗವಾಗಿದ್ದು. ಮಾದ್ಯಮದವರ ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಅವರಿಗೆ ಸೌಲಭ್ಯ ಒದಗಿಸುತ್ತಿದೆ. ಇಂದಿನ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಿದ್ದು,  ವಿಶ್ವಕ್ಕೆ ಖ್ಯಾತಿ ತಂದು ಕೊಟ್ಟವರನ್ನು ಸನ್ಮಾನಿಸುತ್ತಿದ್ದೇವೆ. ಇವರಿಬ್ಬರೂ ಕನ್ನಡ ಸಾಹಿತ್ಯಕ್ಕೆ, ಪತ್ರಿಕೋದ್ಯಮಕ್ಕೆ, ದೇಶಕ್ಕೆ ತಂದಿರುವ ಕೀರ್ತಿ ತಂದಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕøತರಾದ ಶ್ರೀಮತಿ ಬಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ಅವರನ್ನು ಹಾಗೂ ಕನ್ನಡದ ಪ್ರತಿಷ್ಠಿತ ಸುಧಾ ವಾರಪತ್ರಿಕೆಯ ನೂತನ ಸಂಪಾದಕರಾಗಿ ಆಯ್ಕೆಯಾಗಿರುವÀ ಶ್ರೀಮತಿ ಎಸ್.ರಶ್ಮಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಹಾಗೂ ಪ್ರೆಸ್ ಕ್ಲಬ್‍ನ ಸದಸ್ಯರುಗಳು, ಸಾಹಿತಿಗಳು, ಪತ್ರಕರ್ತರು, ಅನುವಾದಕರು, ವಿದ್ಯಾರ್ಥಿಗಳು ಉಪಸ್ಥಿತÀರಿದ್ದರು.  ಕರ್ನಾಟಕ ಮಾದ್ಯಮ ಅಕಾಡೆಮಿಯ ಕಾರ್ಯದರ್ಶಿ ಶ್ರೀಮತಿ ಎಂ ಸಹನಾ ಅವರು ಸ್ವಾಗತಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ