LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಕಲ್‌ ಕರ್ನೆ ಲಿಯೆ ಅಕಲ್‌ ಚಾಹಿಯೆ : ವಿದೇಶಿ ನೆಲದಲ್ಲಿ ಪಾಕಿಸ್ತಾನವನ್ನು ಲೇವಡಿ ಮಾಡಿದ ಓವೈಸಿ

ನವದೆಹಲಿ : ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್‌ ಷರೀಫ್‌ಗೆ ಅಲ್ಲಿನ ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌ ನೀಡಿದ ಫೋಟೊ ಇಡೀ ಜಗತ್ತಿನಲ್ಲಿ ನಗೆಪಾಟಲಾಗಿದೆ. ಚೀನದ 2019ರ ಮಿಲಿಟರಿ ಡ್ರಿಲ್‌ನ ಫೋಟೊವನ್ನು ಆಪರೇಷನ್‌ ಸಿಂಧೂರ ಸಂದರ್ಭದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸಿಕ್ಕಿದ ಗೆಲುವು ಎಂದು ಹೇಳಿಕೊಂಡು ಸನ್ಮಾನ ಸಮಾರಂಭದಲ್ಲಿ ಮುನೀರ್‌ ಈ ಫೋಟೊವನ್ನು ಪ್ರಧಾನಿಗೆ ಉಡುಗೊರೆ ನೀಡಿದ್ದರು. ಕ್ಷಣಾರ್ಧದಲ್ಲಿ ಈ ಫೋಟೊದ ಅಸಲಿ ಮೂಲ ಪತ್ತೆಯಾಗಿದ್ದು, ಪಾಕಿಸ್ತಾನದ ಸೇನೆ ಇನ್ನಿಲ್ಲದಂತೆ ಅಪಹಾಸ್ಯಕ್ಕೆ ಗುರಿಯಾಗಿದೆ.

ಇದೇ ವಿಚಾರವಾಗಿ ಕುವೈಟ್‌ನಲ್ಲಿ ಮಾತನಾಡಿರುವ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ʼನಕಲ್‌ ಕರ್ನೆ ಕೆ ಲಿಯೆ ಅಕಲ್‌ ಚಾಹಿಯೆ ಇನ್‌ ಕೆ ಪಾಸ್‌ ಅಕಲ್‌ ಭಿ ನಹೀ ಹೇʼʼ ಎಂದು ಪಾಕಿಸ್ತಾನವನ್ನು ಲೇವಡಿ ಮಾಡಿದ್ದಾರೆ. ಪಾಕಿಸ್ತಾನದ ಉಗ್ರವಾದದ ಮುಖವನ್ನು ಜಗತ್ತಿಗೆ ತಿಳಿಸಲು ಹೋಗಿರುವ ನಿಯೋಗದಲ್ಲಿರುವ ಓವೈಸಿ ವಿದೇಶ ನೆಲದಲ್ಲೇ ಪಾಕಿಸ್ತಾನದ ಬಣ್ಣಬಯಲು ಮಾಡಿದ್ದಾರೆ.



ಕುವೈಟ್‌ನ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಓವೈಸಿ ಚೀನದ ಹಳೆಯ ಫೊಟೊವನ್ನು ತನ್ನ ಗೆಲುವಿನ ಸಂಕೇತ ಎಂದು ಬಿಂಬಿಸಲು ಯತ್ನಿಸಿದ ಪಾಕಿಸ್ತಾನದ ಬೋಳೇತನವನ್ನು ಇನ್ನಿಲ್ಲದಂತೆ ಲೇವಡಿ ಮಾಡಿದ್ದಾರೆ. 2019ರ ಚೀನದ ಮಿಲಿಟರಿ ಡ್ರಿಲ್‌ನ ಫೋಟೊ ಎಡಿಟ್‌ ಮಾಡಿ ಪ್ರಧಾನಿಗೇ ಉಡುಗೊರೆ ಕೊಟ್ಟು ಇದು ಭಾರತದ ವಿರುದ್ಧ ನಾವು ಹಾರಿಸಿದ ಕ್ಷಿಪಣಿಗಳು ಎಂದು ಅಲ್ಲಿನ ಸೇನಾ ಮುಖ್ಯಸ್ಥ ಹೇಳಿಕೊಂಡಿದ್ದಾರೆ. ಇದು ಪಾಕಿಸ್ತಾನದ ನಿಜವಾದ ಯೋಗ್ಯತೆ ಎಂದು ಓವೈಸಿ ಲೇವಡಿ ಮಾಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026