Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎಐಎಡಿಎಂಕೆ 25 ಶಾಸಕರನ್ನು ಪಕ್ಷದ ಹುದ್ದೆಗಳಿಂದ ಕಿತ್ತೊಗೆದ ಪಳನಿಸ್ವಾಮಿ !

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಬುಧವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ವಿಜಯ ನೇತೃತ್ವದ ಟಿವಿಕೆ (TVK) ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಬೆನ್ನಲ್ಲೇ ಪ್ರತಿಪಕ್ಷ ಎಐಎಡಿಎಂಕೆಯಲ್ಲಿ (AIADMK) ಬಂಡಾಯದ ಸ್ಫೋಟಗೊಂಡಿದ್ದು, ಪಕ್ಷದ ಹಿರಿಯ ನಾಯಕರ ವಿರುದ್ಧ ಇಪಿಎಸ್ ಕಠಿಣ ಕ್ರಮ ಕೈಗೊಂಡಿದ್ದಾರೆ.
ಪಕ್ಷದ ಹೈಕಮಾಂಡ್ ಸೂಚನೆಯನ್ನು ಧಿಕ್ಕರಿಸಿ ವಿಜಯ ಸರ್ಕಾರದ ಪರವಾಗಿ ಮತ ಚಲಾಯಿಸಿದ 25 ಶಾಸಕರ ನಡೆಗೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಪ್ರಭಾವಿ ನಾಯಕರಾದ ಎಸ್‌ಪಿ ವೇಲುಮಣಿ ಮತ್ತು ಸಿ.ವಿ. ಶಣ್ಮುಗಂ ಅವರನ್ನು ತಮ್ಮ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಲಾಗಿದೆ. ಇವರ ಜೊತೆಗೆ ಪಕ್ಷದ ಆದೇಶ ಉಲ್ಲಂಘಿಸಿದ ಕಾರಣಕ್ಕಾಗಿ ಸಿ. ವಿಜಯಭಾಸ್ಕರ ಮತ್ತು ನಾಥಮ್‌ ಆರ್. ವಿಶ್ವನಾಥನ್ ಅವರನ್ನೂ ಹುದ್ದೆಗಳಿಂದ ಕಿತ್ತೊಗೆಯಲಾಗಿದೆ.

‘ಇಪಿಎಸ್ ಪತ್ರ ನಕಲಿ’ – ಶಣ್ಮುಗಂ ಗಂಭೀರ ಆರೋಪ
ಹುದ್ದೆಯಿಂದ ವಜಾಗೊಳ್ಳುವ ಮೊದಲೇ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಿ.ವಿ. ಶಣ್ಮುಗಂ, ಇಪಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. “ವಿಶ್ವಾಸಮತಕ್ಕೂ ಮುನ್ನ ಪಕ್ಷ ಹೊರಡಿಸಿದ್ದ ‘ವಿಪ್’ ಮಾನ್ಯತೆ ಬಗ್ಗೆ ಸಂಶಯವಿದೆ. ಸದನದ ನಾಯಕ ಅಥವಾ ಸಚೇತಕರನ್ನು ಆಯ್ಕೆ ಮಾಡಲು ಪಕ್ಷದ ಶಾಸಕರ ಸಭೆಯನ್ನೇ ಕರೆದಿಲ್ಲ. ಇಪಿಎಸ್ ಸ್ಪೀಕರ್ ಅವರಿಗೆ ಸಲ್ಲಿಸಿರುವ ಪತ್ರವೇ ನಕಲಿ,” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಎಐಎಡಿಎಂಕೆ ಇಬ್ಭಾಗ?
ಸದ್ಯದ ಮತದಾನದ ಲೆಕ್ಕಾಚಾರದ ಪ್ರಕಾರ, ಇಪಿಎಸ್ ಬಣದಲ್ಲಿ ಕೇವಲ 22 ಶಾಸಕರು ಉಳಿದುಕೊಂಡರೆ, ಬಂಡಾಯ ಬಣದಲ್ಲಿ 25 ಶಾಸಕರು ಗುರುತಿಸಿಕೊಂಡಿದ್ದಾರೆ. ಈ ಬೆಳವಣಿಗೆಯು ಎಐಎಡಿಎಂಕೆಯಲ್ಲಿ ಮತ್ತೊಂದು ದೊಡ್ಡ ಒಡಕನ್ನು ಸ್ಪಷ್ಟಪಡಿಸಿದ್ದು, ತಮಿಳುನಾಡಿನ ರಾಜಕೀಯ ಸಮೀಕರಣವೇ ಬದಲಾಗುವ ಮುನ್ಸೂಚನೆ ನೀಡಿದೆ.

ಕೇವಲ ನಾಲ್ಕು ದಿನಗಳ ಹಿಂದೆ ಅಧಿಕಾರಕ್ಕೇರಿದ್ದ ವಿಜಯ ನೇತೃತ್ವದ ಸರ್ಕಾರಕ್ಕೆ ಈ ವಿಶ್ವಾಸಮತ ಪರೀಕ್ಷೆ ಮೊದಲ ದೊಡ್ಡ ಸವಾಲಾಗಿತ್ತು. ಸದನದಲ್ಲಿ ಮಂಡಿಸಲಾದ ವಿಶ್ವಾಸಮತ ನಿರ್ಣಯದ ಪರವಾಗಿ 144 ಮತಗಳು ಚಲಾವಣೆಯಾದರೆ, ವಿರೋಧವಾಗಿ ಕೇವಲ 22 ಮತಗಳು ಬಂದವು. ಆ ಮೂಲಕ ಸರ್ಕಾರವು ಸುಲಭವಾಗಿ ಗೆಲುವು ಸಾಧಿಸಿತು. ಕಾಂಗ್ರೆಸ್, ವಿಸಿಕೆ (VCK), ಎಡಪಕ್ಷಗಳು ಮತ್ತು ಐಯುಎಂಎಲ್ (IUML) ಪಕ್ಷಗಳು ವಿಜಯ ಸರ್ಕಾರಕ್ಕೆ ಬೆಂಬಲ ನೀಡಿದರೆ ನಾಟಕೀಯ ಬೆಳವಣಿಗೆಯಲ್ಲಿ ಎಐಎಡಿಎಂಕೆಯ 25 ಬಂಡಾಯ ಶಾಸಕರು ಸಹ ವಿಜಯ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದಾರೆ.

ಪ್ರಮುಖ ವಿಪಕ್ಷವಾದ ಡಿಎಂಕೆ (59 ಶಾಸಕರು) ಅಶ್ವಪೇಟ ನಡೆಸುತ್ತಿರುವ ಕುದುರೆ ವ್ಯಾಪಾರವನ್ನು ವಿರೋಧಿಸಿ ಸದನದಿಂದ ಹೊರನಡೆದವು. ಪಿಎಂಕೆ (4 ಶಾಸಕರು) ಮತ್ತು ಬಿಜೆಪಿಯ ಒಬ್ಬ ಶಾಸಕ ಮತದಾನದಿಂದ ದೂರ ಉಳಿದರು.
ಕುದುರೆ ವ್ಯಾಪಾರ ಆರೋಪ ತಳ್ಳಿಹಾಕಿದ ಸಿಎಂ ವಿಜಯ
ವಿರೋಧ ಪಕ್ಷಗಳು ಮಾಡಿದ ಕುದುರೆ ವ್ಯಾಪಾರದ ಆರೋಪಗಳನ್ನು ಮುಖ್ಯಮಂತ್ರಿ ವಿಜಯ ಬಲವಾಗಿ ನಿರಾಕರಿಸಿದ್ದಾರೆ. “ನಮ್ಮ ಸರ್ಕಾರವು ಜಾತ್ಯತೀತ ತತ್ವಗಳ ಮೇಲೆ ನಡೆಯಲಿದೆ. ಹಿಂದಿನ ಸರ್ಕಾರಗಳು ಜಾರಿಗೆ ತಂದಿದ್ದ ಜನಕಲ್ಯಾಣ ಯೋಜನೆಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು,” ಎಂದು ಅವರು ಸದನದಲ್ಲಿ ಭರವಸೆ ನೀಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ