LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಖಿನ್ನತೆಯಿಂದ ಹೊರಬಂದು ಯುಪಿಎಸ್‌ಸಿನಲ್ಲಿ ಸಾಧನೆ ಮಾಡಿದ ಅಲಂಕೃತಾ ಪಾಂಡೆ

ಉತ್ತರ ಪ್ರದೇಶದ :ಅಲಂಕೃತಾ ಪಾಂಡೆಯವರು IAS ಕನಸು ಕಂಡು ಓದಲು ನಿರ್ಧರಿಸಿದರು. ಅದರೆ ಅವರ ಜೀವನದಲ್ಲೇ ಮಹತ್ತರ ಟ್ವಿಸ್ಟ್‌ ಸಿಕ್ಕಿತ್ತು. ಆದರೂ ಸಹ ಆ ಸಮಸ್ಯೆಯಿಂದ ಹೊರಬಂದು, ಒಂದೇ ವರ್ಷದಲ್ಲಿ ಮತ್ತೆ ಯುಪಿಎಸ್‌ಸಿ ಸಿಎಸ್‌ಇ ಗೆದ್ದರು. ದೇಶದ ಅತ್ಯುನ್ನತ ಪರೀಕ್ಷೆ ಪಾಸಾದರು. ಅವರ ಯಶಸ್ಸಿನ ಹಾದಿಯು ಕೇವಲ ಕಠಿಣ ಮತ್ತು ಪರಿಶ್ರಮ ಮಾತ್ರವಲ್ಲದೇ ರೋಚಕ ಜರ್ನಿಯೇ ಆಗಿದೆ.

ಉತ್ತರ ಪ್ರದೇಶದ ಕಾನ್ಪುರ್ ಮೂಲದ ಅಲಂಕೃತಾ ಪಾಂಡೆ'ಯವರು 2014 ರಲ್ಲಿ ಯುಪಿಎಸ್‌ಸಿ ಸಿವಿಲ್‌ ಸೇವೆಗಳ ಪರೀಕ್ಷೆ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿ ತಯಾರಿ ಅರಂಭಿಸಿದರು. ಆದರೆ ಅವರ ವಿಧಿಯಾಟವೇ ಬೇರೆಯಾಗಿತ್ತು. ಜೀವನದ ಹಲವು ಸಮಸ್ಯೆಗಳಿಂದ ಅವರು ಖಿನ್ನತೆಗೆ ಒಳಗಾದರು. ಈ ಕಷ್ಟದ ಸಮಯದಲ್ಲಿ ಅವರು ಕುಗ್ಗದೆ ಮತ್ತೆ ಚೇತರಿಕೊಂಡು ಗೆಲುವು ಸಾಧಿಸಿದ್ದಾರೆ.

ಆದರೆ ಅವರು 2014ನೇ ಸಾಲಿನ ಯುಪಿಎಸ್‌ಸಿ ಪ್ರಿಲಿಮ್ಸ್‌ ಪರೀಕ್ಷೆ ಬರೆಯಲು ಆಗಲೇ ಇಲ್ಲ. ಅಲಂಕೃತಾ'ಗೆ ಈ ಖಿನ್ನತೆಯಿಂದ ಹೊರಬರಲು ಚಿಕಿತ್ಸೆ, ಕೋಪ ನಿರ್ವಹಣೆ ಮತ್ತು ಸ್ನೇಹಿತರು, ಕುಟುಂಬದ ಅಚಲ ಬೆಂಬಲದಿಂದ ಒಲವು ಮತ್ತೆ ಚಿಗುರಿತು.ಅವರ ಈ ಖಿನ್ನತೆ ಆಗಿರಬಹುದು, ಜೀವನದ ಸಮಸ್ಯೆಗಳು ತಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದನ್ನು ಗಂಭೀರವಾಗಿಯೇ ವಿರೋಧಿಸಿದ ಅವರು, ಮತ್ತೆ ತನ್ನ ಗಮನವನ್ನು ಮರಳಿ ಪಡೆಯಲು ನಿರ್ಧರಿಸಿದರು.

ಇದರ ಫಲವಾಗಿ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 2015 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಗೆದ್ದರು. ಖಿನ್ನತೆಯಿಂದ ಹೊರಬಂದು ಅದು ಸಹ ಮೊದಲ ಪ್ರಯತ್ನದಲ್ಲೇ ಅವರು ಅಖಿಲ ಭಾರತ ಶ್ರೇಣಿ AIR 85 ನೊಂದಿಗೆ ಪಾಸಾದರು. ಇದರ ಪ್ರತಿಫಲವಾಗಿ 2016ನೇ ಬ್ಯಾಚ್‌ನಲ್ಲಿ ಐಎಎಸ್‌ ಅಧಿಕಾರಿ ಆಗಿ ಭಾರತೀಯ ಸಿವಿಲ್ ಸೇವೆಗೆ ಸೇರಿದರು. ಆರಂಭದಲ್ಲಿ ಪಶ್ಚಿಮ ಬಂಗಾಳದ ಕೇಡರ್‌ಗೆ ನಿಯೋಜಿಸಲಾಗಿತ್ತು.

ನಂತರ ಅವರು ಸಹ ತಮ್ಮಂತ ಐಎಎಸ್‌ ಅಧಿಕಾರಿಯಾಗಿದ್ದ ಅನ್ಶುಲ್ ಅಗರ್‌ವಾಲ್‌ ರನ್ನು ಮದುವೆ ಅದರು, ಅನಂತರ ಅವರನ್ನು ಬಿಹಾರ್ ಕೇಡರ್‌ಗೆ ವರ್ಗಾವಣೆ ಮಾಡಲಾಯಿತು. ಅವರು ಅಲಹಾಬಾದ್‌ನ ಎಂಎನ್‌ಎನ್‌ಐಟಿ ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದವರು. ಅನಂತರ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸುವ ನಿರ್ಧಾರ ತೆಗೆದುಕೊಳ್ಳವವರೆಗೆ ಬೆಂಗಳೂರು ಐಟಿ ಕಂಪನಿಯಲ್ಲಿ ಸಹ ಕೆಲಸ ಮಾಡಿದ್ದರು.

ಯಾವುದೋ ಸರ್ಕಾರಿ ಕೆಲಸ, ಯಾವುದೋ ಹೆಚ್ಚು ಸಂಬಳದ ಕೆಲಸ ಅನ್ನುವುದಕ್ಕಿಂತ ಹೆಚ್ಚಾಗಿ, ದೇಶದ ಅತ್ಯುನ್ನತ ನಾಗರೀಕ ಸೇವೆಗೆ ಸೇರಿ, ಕೆಲಸ ಮಾಡಬೇಕು ಎಂದುಕೊಂಡಿದ್ದ ಅವರು, ಪ್ರತಿದಿನ 8 ಗಂಟೆಗಳನ್ನು ಓದಲು ಮೀಸಲಿಟ್ಟಿದ್ದರು. ಕಠಿಣ ಸವಾಲುಗಳನ್ನು ಸಹ ಅಸಾಧಾರಣ ಸಾಧನೆಗಳಾಗಿ ಪರಿವರ್ತಿಸುತ್ತದೆ ಎಂಬುದನ್ನು ಅವರು ಉದಾಹರಣೆಯಾಗಿ ತೋರಿಸಿಕೊಟ್ಟಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026