ಅತ್ಯುತ್ತಮ ಅಧಿಕಾರಿಯಾಗಿ ಜನಮನ್ನಣೆ ಗಳಿಸಿರುವ ಪರಶುರಾಮ ಪೂಜಾರಿ ಈಗ ಬೆಳಗಾವಿಗೆ ವರ್ಗಾವಣೆ
ಬೆಳಗಾವಿ : ಜನ ಜೀವಾಳ ಜಾಲ: ಖಾನಾಪುರ ಪೊಲೀಸ್ ತರಬೇತಿ ಶಾಲೆಯ ಸಿಪಿಐ ಪರಶುರಾಮ ಪೂಜಾರಿ ಅವರು ವರ್ಗಾವಣೆಗೊಂಡಿದ್ದು, ಬೆಳಗಾವಿ ಟಿಳಕವಾಡಿ ಪೋಲಿಸ್ ಠಾಣೆಯ ಪೊಲೀಸ್ ಅಧಿಕಾರಿಯಾಗಿ ಅವರನ್ನು ನೇಮಕ ಮಾಡಲಾಗಿದೆ.
ಕಳೆದ ಎರಡು ವರ್ಷಗಳ ಕಾಲ ಖಾನಾಪುರ ಪೋಲಿಸ್ ತರಬೇತಿ ಶಾಲೆಯಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸಿದ ಅವರು ಖಾನಾಪುರ ಪೋಲಿಸ್ ಠಾಣೆಯಲ್ಲಿ ಪಿಎಸ್‌ಐ ಆಗಿಯೂ ಸೇವೆ ಸಲ್ಲಿಸಿದ್ದಾರೆ.
161 ಹಳ್ಳಿಗಳನ್ನೊಳಗೊಂಡಿರುವ ಖಾನಾಪುರ ತಾಲೂಕಿನಲ್ಲಿ ಬೀಟ್ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿಗೊಳಿಸಿ ಜನಸಾಮಾನ್ಯರು ಹಾಗೂ ಪೊಲೀಸ್ ಇಲಾಖೆಯ ಮನೆಗೆದ್ದಿದ್ದರು.
18 ವರುಷಗಳ ಸೇವೆಯಲ್ಲಿ ಕೊಪ್ಪಳ, ಧಾರವಾಡ, ಬಾಗಲಕೋಟೆ, ಖಾನಾಪುರ, ಸವದತ್ತಿ ಪೊಲೀಸ್ ಠಾಣೆಗಳಲ್ಲಿ ಅವರು ಅತ್ಯುತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.
ಇವರ ಕರ್ತವ್ಯ ನಿಷ್ಠೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾಡಿದ ಸೇವೆಯನ್ನು ಪೋಲಿಸ್ ಇಲಾಖೆ ಹಾಗೂ ರಾಜ್ಯ ಸರಕಾರ ಗುರುತಿಸಿತ್ತು. ಹೀಗಾಗಿ
ಪೊಲೀಸ್ ಇಲಾಖೆಯಲ್ಲಿ ಅವರು ಸಲ್ಲಿಸಿದ ಅನುಪಮ ಸೇವೆಗಾಗಿ ರಾಜ್ಯ ಸರಕಾರ ಅವರಿಗೆ ಮುಖ್ಯಮಂತ್ರಿಯ ಪದಕ ನೀಡಿ ಗೌರವಿಸಿತ್ತು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.