ಬೆಳಗಾವಿ :
ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ 131 ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ನಗರದ ಕೋಟೆ ರಾಮಕೃಷ್ಣ ಮಿಶನ್ ಆಶ್ರಮದಲ್ಲಿ ಅಕ್ಟೋಬರ್ 29 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1:45 ರವರೆಗೆ ಶ್ರೇಷ್ಠ ಮಕ್ಕಳ ನಿರ್ಮಾಣ ವಿಷಯವಾಗಿ ಪೋಷಕರ ಕಾರ್ಯಾಗಾರ ಏರ್ಪಡಿಸಲಾಗಿದೆ.
ಪೋಷಕರ ಗುರಿ-ಶ್ರೇಷ್ಠ ಮಕ್ಕಳ ನಿರ್ಮಾಣ ವಿಷಯವಾಗಿ ರಾಮಕೃಷ್ಣ ಮಿಶನ್ ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದ ಮಾತನಾಡುವರು. ಮಕ್ಕಳ ಪಾಲನಾ ಶೈಲಿಗಳು ಮತ್ತು ಅವುಗಳ ಪರಿಣಾಮ ವಿಷಯವಾಗಿ ಬೆಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಡಾ.ಚಂದ್ರಶೇಖರ ಎಚ್. ಬಿ.ಹಾಗೂ ಮಕ್ಕಳ ಸಾಮರ್ಥ್ಯಗಳ ವಿಕಸನದಲ್ಲಿ ಪೋಷಕರ ಪಾತ್ರ ವಿಷಯವಾಗಿ
ಹೈದರಾಬಾದ್ ಐಐಟಿ ಪೂರ್ವ ಪ್ರಾಧ್ಯಾಪಕ ಡಾ.ರವೀಂದ್ರ ಗುರುವಣ್ಣವರ ಮಾತನಾಡುವರು. ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಪೋಷಕರು ಆಶ್ರಮದಲ್ಲಿ ತಮ್ಮ ಹೆಸರು ನೋಂದಾಯಿಸಿ ಕೊಳ್ಳುವಂತೆ ರಾಮಕೃಷ್ಣ ಮಿಷನ್ ಆಶ್ರಮದ ಪ್ರಕಟಣೆ ತಿಳಿಸಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.