Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಪತ್ರಿಕಾ ವಿತರಕರಿಗೆ ಪಿಂಚಣಿ ವ್ಯವಸ್ಥೆ ಜಾರಿಯಾಗಲಿ- ಸರ್ಕಾರಕ್ಕೆ ವಿತರಕರ ಒತ್ತಾಯ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಪತ್ರಿಕೆ ಹಂಚುವ ಮೂಲಕ ಬದುಕು ಕಟ್ಟಿಕೊಳ್ಳುತ್ತೇವೆ ಎಂದರೆ ಅದು ಪ್ರಸ್ತುತ ಕಾಲಮಾನದಲ್ಲಿ ಕಷ್ಟ ಸಾಧ್ಯವೇ ಸರಿ
, ಅನೇಕ ಸವಾಲುಗಳನ್ನು ಎದುರಿಸಿ ಪತ್ರಿಕೆಗಳ ವಿತರಣೆ ಮಾಡುವ ಕಾರ್ಯದಲ್ಲಿ ನಿರತರಾಗಿರುವ ಪತ್ರಿಕಾ ವಿತರಕರಿಗೆ ಸರ್ಕಾರಿ ಸೌಲಭ್ಯ ಸಿಗುವಂತಗಬೇಕು ಎಂದು ಆರ್‌.ಎಲ್ ಜಾಲಪ್ಪ ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ ಆರ್ ರವಿಕಿರಣ್ ತಿಳಿಸಿದರು. 

ನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ತಾಲೂಕು ದಿನಪತ್ರಿಕೆ ವಿತರಕರ ಕ್ಷೇಮಾಭಿವೃದ್ದಿ ಸಂಘ ಇವರ ಆಶ್ರಯದಲ್ಲಿ ನಡೆದ  ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಲಕ್ರಮೇಣ ಸುದ್ದಿ ಪತ್ರಿಕೆಗಳ ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಇದರ ಪರಿಣಾಮ ನೇರವಾಗಿ ಪತ್ರಿಕಾ ವಿತರಕರ ಮೇಲೆ ಬೀಳಲಿದೆ.  ಪತ್ರಿಕಾ ವಿತರಕರು ಯಾವುದೇ ರಜೆಯಿಲ್ಲದೆ, ಸೌಲಭ್ಯಗಳಿಲ್ಲದೇ, ಪ್ರತಿನಿತ್ಯ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಕೆಲಸ ಮಾಡುತ್ತಾರೆ.

ಪತ್ರಿಕೆ ವಿತರಣೆ ಎಂದರೇ ನಿತ್ಯ ನಿರಂತರ ಸಂವೇದನೆ ಎಂಬಂತಾಗಿದೆ. ಇವರಿಗೆ ರಜೆಯೇ ಇಲ್ಲ. ಜೀವನದ ಭದ್ರತೆ ವಿಚಾರದಲ್ಲಿ ಏನು ಇಲ್ಲ. ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ ಯಾವುದೇ ಸವಲತ್ತುಗಳು ದೊರೆತ್ತಿಲ್ಲ. ಪತ್ರಿಕಾ ವಿತರಕರಿಗೆ ನಿವೃತ್ತಿ ನಂತರ ಪಿಂಚಣಿ ವ್ಯವಸ್ಥೆ ಜಾರಿ ತರಲು ಮನವಿ ಸಲ್ಲಿಸಲಾಗಿದೆ. ಅದರ ಬಗ್ಗೆ ಈಗಾಗಲೇ ಪ್ರಸ್ತಾವನೆ ಕೂಡ ಸಲ್ಲಿಕೆಯಾಗಿದೆ ಎಂದರು.

  ಈ ಹಿಂದೆ ಪತ್ರಿಕೆಗಳಿಗೆ ದೊಡ್ಡ ಬೇಡಿಕೆಯಿತ್ತು. ಆದರೆ ಈಗ ಬೇಡಿಕೆ ಕುಸಿತವಾಗಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಳವಾಗಿದ್ದರೂ ಕೂಡ ಓದುಗರ ಸಂಖ್ಯೆ ಹೆಚ್ಚಳವಾಗಿಲ್ಲ. ಕಾಲ ಬದಲಾದಂತೆ ಪತ್ರಿಕಾ ವಿತರಣೆಗೂ ದೊಡ್ಡ ಹೊಡೆತ ಬಿದ್ದಿದೆ ಎಂದರು.

 ತಾಲೂಕು ದಿನಪತ್ರಿಕೆ ವಿತರಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ರವೀಂದ್ರ   ಮಾತನಾಡಿ, ೨೦೦೬-೭ರಲ್ಲಿ ವಿತರಕರ ಸಂಘ ಸ್ಥಾಪನೆ ಮಾಡಲಾಯಿತು. ರಾಜ್ಯ ಒಕ್ಕೂಟದಿಂದ ೫ ನೇ ಸಮ್ಮೇಳನ ಮಾಡುವ ಮೂಲಕ ಸರಕಾರವನ್ನು ಮುಟ್ಟುವ ಕೆಲಸ ಮಾಡಿದ್ದಾರೆ.

ಇತ್ತೀಚೆಗೆ  ಕೇಂದ್ರ ಸರಕಾರದಿಂದ ಪತ್ರಿಕಾ ವಿತರಕರಿಗೆ  ಇ ಶ್ರಮ್ ಕಾರ್ಡ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಕಾರ್ಡ್ಗಳನ್ನು ಪಡೆಯುವ ಮೂಲಕ ಸರ್ಕಾರಿ ಸೌಲಭ್ಯವನ್ನು  ಸದ್ಬಳಕೆ ಮಾಡಿಕೊಳ್ಳಬೇಕು . ವಿತರಕರ ಸೌಲಭ್ಯಗಳನ್ನು ಪಡೆಯುವ ಕುರಿತು ರಾಜ್ಯ ಮಟ್ಟದಲ್ಲಿ ನಡೆಯುವ ಹೋರಾಟದಲ್ಲಿ ಕೈಜೋಡಿಸಿ ಕೆಲಸ ಮಾಡಬೇಕು ಎಂದರು.

ಈ ವೇಳೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಡಿ ಉಪ್ಪಾರ, ವಿತರಕರಾದ ರಾಘವೇಂದ್ರ, ದೇವಿನಾಥ್ ಹೆಚ್.ಎ, ಮೂರ್ತಿ ಆರ್, ರಮೇಶ್ ಆರ್, ಗಂಗರಾಜು, ಶಿವರಾಜು, ಚೇತನ್, ನವೀನ್ ಸೇರಿದಂತೆ ಅನೇಕರು ಹಾಜರಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ