ಪ್ರತೀಕ್ಷ ಸಿ.ಟಿ. ಇವರಿಗೆ ಪಿ.ಎಚ್.ಡಿ. ಪದವಿ.!
ಚಿತ್ರದುರ್ಗ : ಬಾಗಲಕೋಟೆ ತೋಟಗಾರಿಕಾ ಮಹಾವಿದ್ಯಾಲಯದ ಪುಷ್ಪಕೃಷಿ ಮತ್ತು ಉದ್ಯಾನ ವಿನ್ಯಾಸ ವಿಭಾಗದಲ್ಲಿ ಸಂಶೋಧನೆ ಕೈಗೊಂಡು ಫ್ರೆಂಚ್ ಚಂಡು ಹೂವಿನ ತಳಿಗಳ ಅನುವಂಶಿಕ ವೈವಿದ್ಯತೆಯ ಅಧ್ಯಯನ ಅಂತರ ತಳಿಗಳ ಅಭಿವೃದ್ದಿ ಮತ್ತು ಕೃಷಿ ತಂತ್ರಜ್ಞಾನಗಳ ಪ್ರಮಾಣೀಕರಣ ಎಂಬ ವಿಷಯದ ಬಗ್ಗೆ ಮಹಾ ಪ್ರಬಂಧ ಮಂಡಿಸಿರುವ ನಗರದ ಮುನ್ಸಿಪಲ್ ಕಾಲೋನಿ ನಿವಾಸಿ ಪ್ರತೀಕ್ಷ ಸಿ.ಟಿ. ಇವರಿಗೆ ಪಿ.ಎಚ್.ಡಿ. ಪದವಿ ಲಭಿಸಿದೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ 14 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಪ್ರತೀಕ್ಷ ಸಿ.ಟಿ.ರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಡಾ.ಬಾಲಾಜಿ ಎಸ್.ಕುಲಕರ್ಣಿರವರ ಮಾರ್ಗದರ್ಶನದಲ್ಲಿ ಪ್ರತೀಕ್ಷ ಸಿ.ಟಿ. ಮಹಾ ಪ್ರಬಂಧ ಮಂಡಿಸಿದ್ದರು.
ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ಉಪ ಕುಲಪತಿ ಡಾ.ವಿಷ್ಣುವರ್ಧನ, ಅರೆ ಶುಷ್ಕ ಉಷ್ಣ ವಲಯದ ಅಂತರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶಕ ಡಾ.ಹಿಮಾಂಶು ಪಾಠಕ್ ಪದವಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.