LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಸಾಗರದಲ್ಲಿ ನಿಷೇಧಿತ MDMA ಮಾದಕ ವಸ್ತು ಮಾರಾಟ ಜಾಲ ಭೇದಿಸಿದ ಪೊಲೀಸರು: ಓರ್ವ ಅರೆಸ್ಟ್, ಡ್ರಗ್ಸ್ ಜಪ್ತಿ

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ಅಕ್ರಮವಾಗಿ ನಿಷೇಧಿತ ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲವನ್ನು ಸಾಗರ ಟೌನ್ ಠಾಣಾ ಪೊಲೀಸರು ಪತ್ತೆಹಚ್ಚಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಹಫೀಜ್ ಉರ್ ರೆಹಮಾನ್ (27) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ

ಸಾಗರ ನಗರದ ಎಸ್.ಎನ್. ನಗರದ ಸಂತೆ ಮಾರುಕಟ್ಟೆ ಆವರಣದ ಬಳಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಲಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಸಾಗರ ಟೌನ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ಸ್ಥಳದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅಕ್ರಮ ಮಾದಕ ವಸ್ತು ಪತ್ತೆಯಾಗಿದೆ.

₹20,000 ಮೌಲ್ಯದ ಎಂಡಿಎಂಎ ಜಪ್ತಿ

ಬಂಧಿತನಿಂದ ಅಂದಾಜು ₹20,000 ಮೌಲ್ಯದ 6 ಗ್ರಾಂ 77 ಮಿಲಿಗ್ರಾಂ ಎಂಡಿಎಂಎ (MDMA) ಮಾದಕ ವಸ್ತುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ (ಕ್ರೈಂ ನಂ. 163/2026) ದಾಖಲಾಗಿದೆ.

ಈ ಮಾದಕ ವಸ್ತುವನ್ನು ಎಲ್ಲಿಂದ ತರಲಾಗಿತ್ತು ಮತ್ತು ಸಾಗರ ನಗರದಲ್ಲಿ ಇದರ ಜಾಲ ಯಾರ ಜೊತೆಗೆ ನಂಟು ಹೊಂದಿದೆ ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಾಮರಾಜನಗರ ಶೂಟೌಟ್: ಅರಣ್ಯಾಧಿಕಾರಿಗಳ ವಿರುದ್ಧ FIR ದಾಖಲು, ತನಿಖೆಯಿಂದಷ್ಟೇ ಸತ್ಯಾಂಶವೆಂದ IGPಮೋದಿ ಮಾದರಿಯಲ್ಲಿ ಸಿಎಂ ಡಿಕೆಶಿ ಭಾಷಣ: ರಾಜ್ಯದಲ್ಲಿ ಮೊದಲ ಬಾರಿಗೆ ಟೆಲಿಪ್ರಾಮ್ಟರ್ ಮೊರೆBIG NEWS: ಬ್ಯಾಂಕ್ ಖಾತೆ ಫ್ರೀಜ್ ಮಾಡಲು ಪೊಲೀಸರು ಕೋರ್ಟ್ ಅನುಮತಿ ಪಡೆಯುವುದು ಕಡ್ಡಾಯವಲ್ಲ: ಹೈಕೋರ್ಟ್ ಮಹತ್ವದ ಆದೇಶಕಾವೇರಿ ವನ್ಯಧಾಮದಲ್ಲಿ ಎನ್ ಕೌಂಟರ್ ಬಗ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು ಗೊತ್ತಾ?ಸಾಗರದಲ್ಲಿ ಫಲಾನುಭವಿ ರೈತರಿಗೆ ಸಬ್ಸಿಡಿ ದರದಲ್ಲಿ ಪವರ್ ಟಿಲ್ಲರ್ ವಿತರಣೆ: ಕೃಷಿ ಯಾಂತ್ರೀಕರಣಕ್ಕೆ ಶಾಸಕ ಬೇಳೂರು ಕರೆ2028ಕ್ಕೂ ಡಿ.ಕೆ.ಶಿವಕುಮಾರ್‌ ಅವರೇ ಮುಖ್ಯಮಂತ್ರಿ: ಸಚಿವ ಶಿವರಾಜ್ ತಂಗಡಗಿ ಭವಿಷ್ಯಭ್ರಷ್ಟಾಚಾರ ಮುಕ್ತ, ಸ್ವಚ್ಛ ಮತ್ತು ಸಮೃದ್ಧ ಭಾರತ ನಿರ್ಮಾಣಕ್ಕೆ ಹೆಚ್.ಎಂ.ರಮೇಶ್ ಗೌಡ ಕರೆನಾಗರ ಪಂಚಮಿ ಆಚರಣೆ ಹೇಗೆ? ವಿಧಾನ ಏನು? ಇಲ್ಲಿದೆ ಮಾಹಿತಿನಾನು ಮೊದಲು ಭಾರತೀಯ, ನಂತರ ಕನ್ನಡಿಗ: ಬಿಜೆಪಿ ವಿರುದ್ಧ ಸಚಿವ ಜಮೀರ್ ಅಹ್ಮದ್ ತಿರುಗೇಟುBIG NEWS: ರಾಜ್ಯದಲ್ಲಿ 'ಸಾರಿಗೆ ಬಸ್ ದರ ಹೆಚ್ಚಳ'ಕ್ಕೆ ಸಚಿವ ಬೈರತಿ ಸುರೇಶ್ ಸಮಿತಿ ರಚನೆ: ಶೀಘ್ರವೇ 'ಟಿಕೆಟ್ ದರ ಏರಿಕೆ' ಫಿಕ್ಸ್