Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Karnataka

ಬೆಂಗಳೂರಿನ ಪುಲಕೇಶಿನಗರ ಬಾಂಬ್ ಸ್ಫೋಟ ಪ್ರಕರಣ ಭೇದಿಸಿದ ಪೊಲೀಸರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭೀಕರ ಬಾಂಬ್ ಸ್ಫೋಟ ಪ್ರಕರಣವನ್ನು ಪೂರ್ವ ವಿಭಾಗದ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕೇವಲ ವೈಯಕ್ತಿಕ ಹಗೇವು ಮತ್ತು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿತ್ತು ಎಂಬ ಶಾಕಿಂಗ್ ಸತ್ಯ ತನಿಖೆಯಲ್ಲಿ ಬಯಲಾಗಿದ್ದು, ಅಸ್ಸಾಂ ಮೂಲದ ಮೂವರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.

ದಸರಾ ಹಬ್ಬದ ಸಮಯದಲ್ಲಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದ ಈ ಪ್ರಕರಣ ತಾರ್ಕಿಕ ಅಂತ್ಯ ಕಂಡಿದ್ದು, ಆರೋಪಿಗಳಾದ ಜಾಯಿದ್ ವುಲ್ ಹುಸೇನ್, ಸಾಜಿದ್ ವುಲ್ ಇಸ್ಲಾಂ ಹಾಗೂ ಬುರ್ಹಾನ್ ಅಹಮದ್ ಬಂಧಿತ ಖದೀಮರಾಗಿದ್ದಾರೆ.

ಮದುವೆ ಮುರಿದಿದ್ದಕ್ಕೆ ಬಾಂಬ್ ಸ್ಕೆಚ್!

ಪೊಲೀಸ್ ತನಿಖೆಯ ವಿವರಗಳ ಪ್ರಕಾರ, ಕಟ್ಟಡದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಅಲ್ಲಾವುದ್ದೀನ್ ಎಂಬಾತನೇ ಈ ಸ್ಫೋಟದ ಮುಖ್ಯ ಟಾರ್ಗೆಟ್ ಆಗಿದ್ದ. ಪ್ರಮುಖ ಆರೋಪಿ ಜಾಯಿದ್ ವುಲ್ ಹುಸೇನ್ ಹಾಗೂ ಅಲ್ಲಾವುದ್ದೀನ್ ದಾಯಾದಿ ಸಂಬಂಧಿಗಳಾಗಿದ್ದು, ಇಬ್ಬರ ನಡುವೆ ಜಮೀನು ಹಾಗೂ ಹಣಕಾಸಿನ ವಿಚಾರವಾಗಿ ತೀವ್ರ ವೈಷಮ್ಯವಿತ್ತು.

ಇದರ ಜೊತೆಗೆ, ಜಾಯಿದ್ ವುಲ್ ತಂಗಿಯ ಮದುವೆಯನ್ನು ಅಲ್ಲಾವುದ್ದೀನ್ ಮುರಿದಿದ್ದ ಎಂಬ ತೀವ್ರ ಕೋಪವೂ ಆರೋಪಿಗಿತ್ತು. "ಹುಡುಗ ಸರಿಯಿಲ್ಲ" ಎಂದು ಹುಡುಗಿಯ ಮನೆಯವರಿಗೆ ಹೇಳಿ ಮದುವೆ ತಪ್ಪಿಸಿದ್ದ ಅಲ್ಲಾವುದ್ದೀನ್‌ನನ್ನು ಜೀವಂತವಾಗಿ ಮುಗಿಸಲು ಜಾಯಿದ್ ವುಲ್ ನಿರ್ಧರಿಸಿದ್ದ. ಈ ದ್ವೇಷದ ಕಿಚ್ಚಿನಿಂದಲೇ ಆತ ತನ್ನ ಸ್ನೇಹಿತರಾದ ಸಾಜಿದ್ ವುಲ್ ಇಸ್ಲಾಂ ಹಾಗೂ ಬುರ್ಹಾನ್ ಅಹಮದ್ ಜೊತೆ ಸೇರಿ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಕೃತ್ಯಕ್ಕೆ ಸ್ಕೆಚ್ ಹಾಕಿದ್ದ.

ಎಐ ಮತ್ತು ಚಾಟ್ ಜಿಪಿಟಿ ಬಳಸಿ ಐಇಡಿ ಬಾಂಬ್ ಸಿದ್ಧತೆ

ಈ ಕೃತ್ಯದ ತಾಂತ್ರಿಕ ಸೂತ್ರಧಾರ 8ನೇ ತರಗತಿ ಮಾತ್ರ ಓದಿದ್ದ ಬುರ್ಹಾನ್ ಅಹಮದ್. ಈತ ರಾಯಚೂರಿನ ಮಸ್ಕಿಯಲ್ಲಿ ವೆಲ್ಡಿಂಗ್ ಹಾಗೂ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ. ಚಾಟ್ ಜಿಪಿಟಿ, ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್ ಟೆಕ್ ತಂತ್ರಜ್ಞಾನ ಬಳಸಿ ಮಾಹಿತಿ ಕಲೆಹಾಕಿದ್ದ ಈತ, ಮನೆಯಲ್ಲೇ ಐಇಡಿ (IED) ಬಾಂಬ್ ತಯಾರಿಸಲು ಕಲಿತ್ತಿದ್ದ.

ಪಟಾಕಿ ಮದ್ದು, ಬ್ಯಾಟರಿ, ಎಲೆಕ್ಟ್ರಾನಿಕ್ ಸರ್ಕ್ಯೂಟ್ ಹಾಗೂ ಬಟನ್ ಫಿಕ್ಸ್ ಮಾಡಿ ಅತ್ಯಂತ ಅಪಾಯಕಾರಿ ಸ್ಫೋಟಕ ಪಾರ್ಸೆಲ್ ಅನ್ನು ಮಸ್ಕಿಯಲ್ಲೇ ಸಿದ್ಧಪಡಿಸಿದ್ದ. ಬಳಿಕ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಈ ಪಾರ್ಸೆಲ್ ಅನ್ನು ಬೆಂಗಳೂರಿಗೆ ತಂದಿದ್ದ. ಸಾಜಿದ್ ನೀಡಿದ ಆಶ್ರಯದಲ್ಲಿದ್ದುಕೊಂಡು, ಕೃತ್ಯದ ದಿನ ನಿರ್ಮಾಣ ಹಂತದ ಕಟ್ಟಡದ ಬಳಿ ಬಂದು ಆ ಪಾರ್ಸೆಲ್ ಇಟ್ಟು ಪರಾರಿಯಾಗಿದ್ದ.

ಪಾರ್ಸೆಲ್ ಬ್ಲಾಸ್ಟ್: ಅಮಾಯಕ ಪೇಂಟರ್‌ಗೆ ತೀವ್ರ ಗಾಯ

ಬಾಂಬ್ ಪಾರ್ಸೆಲ್ ಇಟ್ಟ ಬಳಿಕ ಆರೋಪಿಗಳು ಸಾರ್ವಜನಿಕ ಲ್ಯಾಂಡ್‌ಲೈನ್ ಫೋನ್ ಬಳಸಿ ಅಲ್ಲಾವುದ್ದೀನ್‌ಗೆ ಕರೆ ಮಾಡಿ, "ನಿಮಗೊಂದು ಪಾರ್ಸೆಲ್ ಬಂದಿದೆ, ಅದನ್ನು ಸ್ವೀಕರಿಸಿ" ಎಂದು ತಿಳಿಸಿದ್ದರು. ಅಲ್ಲಾವುದ್ದೀನ್ ಆ ಪಾರ್ಸೆಲ್ ಪಡೆದು, ಕಟ್ಟಡದಲ್ಲಿದ್ದ ಪೇಂಟರ್ ಸೂರಜ್ ಎಂಬಾತನಿಗೆ ನೀಡಿದ್ದ.

ಮಾರನೇ ದಿನ ಕುತೂಹಲದಿಂದ ಸೂರಜ್ ಆ ಪಾರ್ಸೆಲ್ ತೆರೆಯಲು ಯತ್ನಿಸಿದಾಗ ತಕ್ಷಣ ಭೀಕರ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಪೇಂಟರ್ ಸೂರಜ್ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

1500 ಸಿಸಿಟಿವಿ ಪರಿಶೀಲನೆ: ನಗರ ಪೊಲೀಸ್ ಆಯುಕ್ತರಿಂದ 3 ಲಕ್ಷ ಬಹುಮಾನ

ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೂರ್ವ ವಿಭಾಗದ ಪೊಲೀಸರು, 10 ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು. ಕಾರ್ಯಾಚರಣೆಯ ಭಾಗವಾಗಿ ಬರೋಬ್ಬರಿ 1500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಅಹೋರಾತ್ರಿ ಪರಿಶೀಲಿಸಲಾಯಿತು.

ಅಸ್ಸಾಂ ರಾಜ್ಯ ಪೊಲೀಸರು, ರಾಯಚೂರು ಪೊಲೀಸರು ಹಾಗೂ ಎಟಿಎಸ್ (ATS) ಅಧಿಕಾರಿಗಳ ಜಂಟಿ ನೆರವಿನಿಂದ ಅಂತಿಮವಾಗಿ ಮೂವರೂ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಭೀಕರ ಹಾಗೂ ಸಂಕೀರ್ಣ ಪ್ರಕರಣವನ್ನು ಅತ್ಯಂತ ಕ್ಷಿಪ್ರವಾಗಿ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಮೆಚ್ಚಿ, ನಗರ ಪೊಲೀಸ್ ಆಯುಕ್ತರು ತನಿಖಾ ತಂಡಕ್ಕೆ 3 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!