Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

'ಕರ್ನಾಟಕ ಹನಿಟ್ರ್ಯಾಪ್' ಯೂಟ್ಯೂಬ್ ಚಾನೆಲ್‌ನ 54 ಸಬ್‌ಸ್ಕ್ರೈಬರ್‌ಗಳಿಗೆ ಪೊಲೀಸ್ ನೋಟಿಸ್?

ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಹಾಗೂ ವಿವಾದ ಸೃಷ್ಟಿಸಿರುವ ಬಹುಚರ್ಚಿತ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ತನಿಖೆಯ ವೇಳೆ ಲಭ್ಯವಾಗಿರುವ ಪ್ರಮುಖ ಸುಳಿವುಗಳ ಆಧಾರದ ಮೇಲೆ, ಪ್ರಕರಣದ ಸೂತ್ರಧಾರ (ಮಾಸ್ಟರ್‌ಮೈಂಡ್) ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ.

ವಿಡಿಯೋ ಪ್ರಸಾರಕ್ಕಾಗಿಯೇ ಹೊಸ ಚಾನೆಲ್ ಸೃಷ್ಟಿ!:
ಪ್ರಕರಣದ ತನಿಖೆ ನಡೆಸುತ್ತಿರುವ ಸೈಬರ್ ಕ್ರೈಂ ತಂಡಕ್ಕೆ ಲಭ್ಯವಾಗಿರುವ ಮಾಹಿತಿಯಂತೆ, ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಏಕೈಕ ಉದ್ದೇಶದಿಂದ ‘ಕರ್ನಾಟಕ ಹನಿಟ್ರ್ಯಾಪ್’ ಎಂಬ ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸಲಾಗಿತ್ತು. ಚಾನೆಲ್ ತೆರೆದ ಕೆಲವೇ ಕ್ಷಣಗಳಲ್ಲಿ ಆಕ್ಷೇಪಾರ್ಹ ಹಾಗೂ ಸ್ಪೋಟಕ ಸ್ವರೂಪದ ನಾಲ್ಕು ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿತ್ತು ಎಂಬುದು ಪತ್ತೆಯಾಗಿದೆ.

54 ಸಬ್‌ಸ್ಕ್ರೈಬರ್‌ಗಳ ಹಿನ್ನೆಲೆ ಪರಿಶೀಲನೆ, ವಿಚಾರಣೆಗೆ ಸಿದ್ಧತೆ: ವಿಶೇಷವೆಂದರೆ, ಚಾನೆಲ್ ಪ್ರಾರಂಭವಾದ ಕೆಲವೇ ಸಮಯದಲ್ಲಿ 54 ಜನರು ಅದಕ್ಕೆ ಸಬ್‌ಸ್ಕ್ರೈಬ್ ಆಗಿದ್ದರು. ಈ ಸಡನ್ ಸಬ್‌ಸ್ಕ್ರಿಪ್ಷನ್ ಸೈಬರ್ ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ 54 ಸಬ್‌ಸ್ಕ್ರೈಬರ್‌ಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿರುವ ಪೊಲೀಸರು, ಅವರ ಹಿನ್ನೆಲೆಯನ್ನು ಜಾಲಾಡುತ್ತಿದ್ದಾರೆ. ವಿಡಿಯೋ ವೀಕ್ಷಿಸಲು ಅಥವಾ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಲು ಯಾರಾದರೂ ಇವರಿಗೆ ಮುಂಚಿತವಾಗಿ ಸೂಚನೆ ನೀಡಿದ್ದರೇ? ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ.

ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಇದೀಗ ಈ 54 ಸಬ್‌ಸ್ಕ್ರೈಬರ್‌ಗಳಲ್ಲಿ ಅನುಮಾನಾಸ್ಪದವಾಗಿ ಕಂಡುಬರುವ ವ್ಯಕ್ತಿಗಳನ್ನು ನೇರವಾಗಿ ವಿಚಾರಣೆಗೆ ಕರೆಸಲು ಸೈಬರ್ ಕ್ರೈಂ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಮಾಸ್ಟರ್‌ಮೈಂಡ್ ಪತ್ತೆಗೆ ಬಿಗಿಬಲೆ:
ಅಕ್ಟೋಬರ್ 6ರಂದು ಈ ಸಂಬಂಧ ದೂರು ದಾಖಲಾಗಿದ್ದರೂ, ಪ್ರಕರಣದ ಹಿಂದಿರುವ ಪ್ರಮುಖ ಸೂತ್ರಧಾರ ಯಾರು ಎಂಬುದು ಇಂದಿಗೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಯೂಟ್ಯೂಬ್ ಚಾನೆಲ್ ತೆರೆದ ಐಪಿ ಅಡ್ರೆಸ್, ವಿಡಿಯೋ ಅಪ್‌ಲೋಡ್ ಮಾಡಿದ ವ್ಯಕ್ತಿ ಹಾಗೂ ಇದರ ಹಿಂದೆ ಕೆಲಸ ಮಾಡಿದ ಶಕ್ತಿಗಳ ಜಾಡು ಹಿಡಿದು ತನಿಖಾಧಿಕಾರಿಗಳು ಮುನ್ನುಗ್ಗುತ್ತಿದ್ದಾರೆ. ಶೀಘ್ರದಲ್ಲೇ ಪ್ರಕರಣದ ಅಸಲಿ ರೂವಾರಿಯನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗದ ದಸರಾ: ಶರಣ ಸಂಸ್ಕೃತಿಯ ಜನೋತ್ಸವ:ಮಂಗಳೂರಿನ ದಸರಾ; ಶಾರದಾ ಮಹೋತ್ಸವದಿಂದ ಜನೋತ್ಸವದವರೆಗೆ:… ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ-ರಮೇಶ್ ಬಾಬುನವರಾತ್ರಿ ಪ್ರಯುಕ್ತ ಅಂಭಾ ಭವಾನಿ ದೇವಿಗೆ ವಿಶೇಷ ಅಲಂಕಾರಹಾಡುಹಗಲೆ ವೃದ್ದೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಕಳ್ಳಛಲವಾದಿ ಗುರುಪೀಠದಲ್ಲಿ ಪ್ರತಿ ತಿಂಗಳ ಮೂರನೆ ಶನಿವಾರದಂದು ಆರೋಗ್ಯ ತಪಾಸಣೆ ಶಿಬಿರ ಆಗ್ನೇಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿಕಾಂತ್ ಎಸ್.ಯಾದವ್ ಮತ ನೀಡಲು ಮನವಿಸಂವಿಧಾನದ ಮೌಲ್ಯ ಎತ್ತಿಹಿಡಿಯಲು ಸಿಜೆಐ ಸೂರ್ಯಕಾಂತ್ ಹಾಗೂ ಡಿಕೆಶಿ ಕರೆಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್' ಸಂಚಿಗೆ ರಕ್ತ ಕುದಿಯುತ್ತಿಲ್ಲವೇ?: ಹೆಚ್.ಡಿ. ಕುಮಾರಸ್ವಾಮಿ