Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಳಗಾವಿಯಲ್ಲಿ ಹೆಣದ ಮೇಲೆ ಹಣದ ವ್ಯವಹಾರ ನಡೆಸುತ್ತಿರುವ ಬಾಗೇವಾಡಿ ಪೊಲೀಸಪ್ಪ..?

ಹೆಣದ ಮೇಲೆ ಹಣದ ವ್ಯವಹಾರ ನಡೆಸುತ್ತಿರುವ ಬಾಗೇವಾಡಿ ಪೊಲೀಸಪ್ಪ..?

ಈ ತರಾತುರಿ "ಮರಿ"ಗೆ ಸುಂದರವಾಗಿ ಹೊಳೆಯುವರಿಂದ ಸದಾ ಸಾಥ್..?

ಕಮೀಷನರಗೆ ಕಂಡೀಷನ್ ಹಾಕತ್ತನಂತೆ ಈ ಹವಾಲ್ದಾರ್..?

ಬೆಳಗಾವಿ: ಕೊಲೆ, ದರೋಡೆ, ಅತ್ಯಾಚಾರ ಮತ್ತು ಸಾಮಾಜಿಕ ಸ್ವಾಸ್ಥ್ಯ ಹದಗೆಡುವಂತಹ ಪ್ರಕರಣಗಳಲ್ಲಿ ಪೊಲೀಸರು ಭಾಗಿಯಾಗಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಬೆಳಗಾವಿ ಪೊಲೀಸರು ಒಂದು ಹೆಜ್ಜೆ ಮೇಲೆ ಮುಂದೆ ಹೋಗಿ ಹೆಣದ ಮೇಲೆ ಹಣದ ವ್ಯವಹಾರ ನಡೆಸುತ್ತಿರುವ ಆರೋಪ ಕೇಳಿಬರುತ್ತಿದೆ.

ದೊಂಬಿ, ಗಲಾಟೆ ಹಾಗೂ ಅಪಘಾತ,  ಅಪರಾಧಿಕ ಕೃತ್ಯಗಳಂತಹ ಪ್ರಕರಣಗಳಲ್ಲಿ ಸಮರ್ಪಕ ತನಿಖೆ ನಡೆಸಿ ನೊಂದವರಿಗೆ ಅಥವಾ ಅವರ ಕುಟುಂಬಕ್ಕೆ ನ್ಯಾಯಕೊಡಿಸಬೇಕಿರುವುದು ಪೊಲೀಸರ ಕರ್ತವ್ಯ. ಆದರೆ ಇದೆಲ್ಲವನ್ನೂ ಬದಿಗೊತ್ತಿ ನೊಂದವರ ಕಣ್ಣೀರನಲ್ಲಿ ಹಣದ ದಾಹ ತೀರಿಸಿಕೊಳ್ಳಲು ಹಿರೇಬಾಗೇವಾಡಿ ಠಾಣೆಯ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಬಹುತೇಕ ಪೊಲೀಸರು ಈ ದಿನ ಯಾವುದೇ ಗಲಾಟೆ, ಅಪರಾಧ ಕೃತ್ಯ ಹಾಗೂ ಅಪಘಾತಗಳು ನಡೆಯದಿರಲಿ ಎಂದು ದೇವರಲ್ಲಿ ಕೈ ಮುಗಿದು ಬೇಡಿಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿರುವುದನ್ನು ಪ್ರತಿನಿತ್ಯ ಕೇಳುತ್ತೆವೆ. ಆದರೆ ಇದಕ್ಕೆ ತದ್ವಿರುದ್ಧವಾಗಿರುವ ಬಾಗೇವಾಡಿ ಪೊಲೀಸರು ಅಪಘಾತ ನಡೆದರೆ ನಮಗೆ ಇಂತಿಷ್ಟು ಪರ್ಸೆಂಟಿಸ್ ಸಿಗುತ್ತದೆ ಎಂದು ಮನದಲ್ಲೇ ಬೇಡಿಕೊಳ್ಳುತ್ತಿದ್ದಾರೆ ಎಂದು ಅಪಘಾತ ಪ್ರಕರಣಗಳಲ್ಲಿ ನೊಂದ ಕುಟುಂಬಗಳು ಹಿಡಿಶಾಪ ಹಾಕುತ್ತಿದ್ದಾರೆ.

'ತುರ'ಕೆಗಿಂತ ಹೆಚ್ಚು ಕೆರೆದುಕೊಳ್ಳುತ್ತಿರುವ 'ಮರಿ'!

ಬಾಗೇವಾಡಿ ಠಾಣೆಯಲ್ಲಿ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆಯೋರ್ವ ನನಗೆ ಸಂಬಂದ ಇಲ್ಲದಿದ್ದರೂ ಅಪಘಾತ ನಡೆದರೆ ಸಾಕು ಶ್ರೀ ಕೃಷ್ಣನಂತೆ ಪ್ರತ್ಯೇಕ್ಷನಾಗಿ ನಾವು ತಿಳಿಸಿದ ವಕೀಲರಿಗೆ ಕೇಸ್ ಕೊಡಬೇಕು. ಇಲ್ಲವಾದಲ್ಲಿ ವಿಮೆ ಪಾವತಿ ಆಗದಂತೆ ರಿಪೋರ್ಟ್ ಸಿದ್ದಪಡಿಸುವುದಾಗಿ ನೊಂದ ಕುಟುಂಬಸ್ಥರಿಗೆ ಬೇದರಿಕೆ ಹಾಕುವ ಕೆಲಸ ಮಾಡುತ್ತಿರುವ ದೂರುಗಳು ಕೇಳಿ‌ ಬರುತ್ತಿವೆ. ಈತನ ಮಾತಿಗೆ ಸಮ್ಮತಿಸದಿದ್ದಲ್ಲಿ ಮೇಲಾಧಿಕಾರಿಗಳು ನಾನು ಹೇಳಿದಂತೆ ಕೇಳುತ್ತಾರೆ ನೋಡಿ ಈಗಲೇ ಹೇಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಠಾಣೆ ವ್ಯಾಪ್ತಿಯಲ್ಲಿ ಒಂದಿಲ್ಲೊಂದು ಅಪಘಾತ ನಡೆಯುತ್ತಲೆ ಇರುತ್ತವೆ. ಅದರಲ್ಲೂ ಅಂತರರಾಜ್ಯ ನೊಂದಣಿ ವಾಹನಗಳು ಅಪಘಾತ ನಡೆದರೆ ಈ ಒಏದೆ ಬಾಡೂಟ ಸವಿದಂತೆ. ಬೇರೆ ರಾಜ್ಯದ ವಾಹನ ಮಾಲೀಕರಿಗೆ ಮತ್ತು ಚಾಲಕರಿಗೆ ಇಲ್ಲಿನ ವ್ಯವಸ್ಥೆಯ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಳ್ಳುವ ಈತ ಇನ್ನಿಲ್ಲದ ಬೆದರಿಕೆ ಹಾಕಿ ನನಗೆ ಬೇಕಿರುವವರೆಗೆ ಕೇಸ್ ಕೊಡಲು ಒಪ್ಪಿಸುವ ಕರಗತ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಹೆಣದ ಮೇಲೆ ವ್ಯವಹಾರ? :

ಅಪಘಾತದಲ್ಲಿ ಮೃತಪಟ್ಟವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ನ ಶವಾಗಾರಕ್ಕೆ ತರಲಾಗುತ್ತದೆ. ಈ 'ಮರಿ' ಅಲ್ಲಿಯೇ ವ್ಯವಹಾರ ಕುದುರಿಸುತ್ತಿರುವ ಆರೋಪವೂ ಇದೆ. ಈತನ ಪ್ರತಿ ಮಾತಿಗೂ ಠಾಣಾಧಿಕಾರಿ ಕೊಲೆ ಬಸವನಂತೆ  ತಲೆ ಅಲ್ಲಾಡುಸುತ್ತಿರುವುದು. ಇನ್ನೂಳಿದ ಸಿಬ್ಬಂದಿಗೆ ಮುಜುಗರವನ್ನುಂಟು ಮಾಡುತ್ತಿದೆ. ಈತ ಈ ಮೊದಲು ಇದೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಇಂತಹ ಕೃತ್ಯಗಳಲ್ಲಿ ಭಾಗವಹಿಸುತ್ತಿರುವದರಿಂದ ಬೇರೆ ಠಾಣೆಗೆ ಕಳುಹಿಸಿದ್ದರು. ಇದೀಗ ಮತ್ತೆ ಇದೇ ಠಾಣೆಗೆ  ವಕ್ಕರಿಸಿಕೊಂಡಿರುವ ಈತನ ಕಾಟಕ್ಕೆ ಬೇಸತ್ತಿರುವ ಸ್ಥಳೀಯರು ಗೃಹ ಇಲಾಖೆಗೆ, ಗೃಹ ‌ಸಚಿವರಿಗೆ ಹಾಗೂ ಡಿಜಿ ಮತ್ತು ಐಜಿಪಿ ಅವರಿಗೆ ದೂರು ಕೊಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ