
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಿಎಸ್‌ಡಿ ಸಂಸ್ಥೆ ಆಯೋಜಿಸಿದ್ದ ಒಂದು ದಿನದ ಶೂನ್ಯ ಮಾಲಿನ್ಯ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ವಾಯು, ಜಲ ಮತ್ತು ಮಣ್ಣಿನ ಮಾಲಿನ್ಯಗಳು ಸಾರ್ವಜನಿಕ ಸ್ವಾಸ್ಥ್ಯಕ್ಕೆ ದೊಡ್ಡ ಸವಾಲೊಡ್ಡುತ್ತಿವೆ. ವಾಯು ಮಾಲಿನ್ಯದಿಂದ ಶ್ವಾಸಕೋಶದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಅದಷ್ಟೇ ಅಲ್ಲ. 2.5 ಮಿಲಿಗ್ರಾಂಗಿಂತ ಕಡಿಮೆ ಇರುವ ಧೂಳಿನ ಕಣಗಳು ಹೃದ್ರೋಗಗಳಿಗೆ ಮತ್ತು ಮೆದುಳು ಆಘಾತಗಳಿಗೆ ಕಾರಣವಾಗುತ್ತವೆ ಎಂದು ಅಧ್ಯಯನಗಳು ಸಾಬೀತು ಪಡಿಸಿವೆ. ಹಾಗಾಗಿ ಮಾಲಿನ್ಯ ಮುಕ್ತ ವಾತಾವರಣವನ್ನು ಹೊಂದುವುದು ಆರೋಗ್ಯಕಾರಿ ಬದಕಲು ಅನಿವಾರ್ಯ ಎಂದು ಅವರು ನುಡಿದರು.
ದೊಡ್ಡ ನಗರಗಳಲ್ಲಿ ವಾಸಿಸುವುದು ಈಗ ಸಂತೋಷದ ವಿಷಯವಾಗಿ ಉಳಿದಿಲ್ಲ. ಮಿತಿಮೀರಿದ ಮಾಲಿನ್ಯದಿಂದಾಗಿ ಅನೇಕರು ಅನೇಕ ರೀತಿಯ ಅನಾರೋಗ್ಯದಲ್ಲಿದ್ದಾರೆ. ವಾಯುಮಾಲಿನ್ಯವು ಹೃದಯಾಘಾತಗಳಂಥ ಮಾರಣಾಂತಿಕ ಸಮಸ್ಯೆಗಳಲ್ಲದೇ ಹೃದಯಸ್ತಂಭನಕ್ಕೆ ಕಾರಣವಾಗಲ್ಲ ಅನಿಯಮಿತ ಹೃದಯಬಡಿತಕ್ಕೆ ಮತ್ತು ಮಹಿಳೆಯರಲ್ಲಿ ಗರ್ಭಪಾತ ಮತ್ತು ಹುಟ್ಟುವ ಮಕ್ಕಳೂ ಸದೃಢತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಅವರು ಎಚ್ಚರಿಸಿದರು.

ಇದಕ್ಕೆ ಮೊದಲು ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿಗಳಾದ ಕೆ. ಶ್ರೀನಿವಾಸುಲು ಅವರು “ಸುಸ್ಥಿರ ಪದದ ವ್ಯಾಖ್ಯಾನವನ್ನು ಬದಲಿಸಬೇಕಾದ ಸಂದರ್ಭ ಬಂದಿದೆ. 40 ವರ್ಷಗಳಿಂದ ನಾವು ಈ ಪದವನ್ನು ಬಳಸುತ್ತ ಬಂದಿದ್ದರೂ ಪರಿಸರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಮಾಜದ ಶ್ವಾಸಕೋಶದಂತಿರುವ ಅರಣ್ಯಗಳ ನಾಶ ಮುಂದುವರೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಇಂಟರ್‌ನ್ಯಾಷನಲ್ ಸೋಲಾರ್ ಅಲಯನ್ಸ್‌ನ ಮೊದಲ ಮಹಾನಿರ್ದೇಶಕರಾದ ರಾಜ್ಯದ ಮಾಜಿ ಐಎಎಸ್ ಅಧಿಕಾರಿಗಳಾದ ಉಪೇಂದ್ರ ತ್ರಿಪಾಠಿ ಅವರಿಗೆ ಈ ಸಂದರ್ಭದಲ್ಲಿ ಸುಸ್ಥಿರ ನಾಯಕತ್ವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮಾಜಿ ಐಎಎಸ್ ಅಧಿಕಾರಿಗಳಾದ ಕೆ. ಜೈರಾಜ್, ಸಿಎಸ್‌ಡಿ ಸಂಸ್ಥೆಯ ಅಧ್ಯಕ್ಷರು ಮತ್ತು ಮಾಜಿ ಮುಖ್ಯ ಕಾರ್ಯದರ್ಶಿಗಳಾದ ಡಾ.ಎ.ರವೀಂದ್ರ, ಸಂಸ್ಥೆಯ ನಿರ್ದೇಶಕರಾದ ಡಾ. ಆರ್.ಶ್ರೀನಿವಾಸ ಉಪಸ್ಥಿತರಿದ್ದರು.
ಶೃಂಗಸಭೆಯ ವಿವಿಧ ಗೋಷ್ಠಿಗಳಲ್ಲಿ ತಜ್ಞರು ಮಾಲಿನ್ಯ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯ ಮಂಡಿಸಿದರು. ಕೊನೆಯಲ್ಲಿ ಶೂನ್ಯ ಮಾಲಿನ್ಯದ ಕುರಿತು ಬೆಂಗಳೂರು ಘೋಷಣೆಯನ್ನು ಹೊರಡಿಸಲಾಯಿತು.
ಸುಪ್ರೀಂ ಕೋರ್ಟಿನ ತೀರ್ಪಿನಂತೆ ಹಮಾವಾನ ಕಾಯ್ದೆಗಾಗಿ ಚೌಕಟ್ಟು ರೂಪಿಸಲು ಸರಕಾರವನ್ನು ಒತ್ತಾಯಿಸಲಾಯಿತು. ಉದ್ಯಮಗಳು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ನಿಭಾಯಿಸಲು ದೇಶೀಯ ತಂತ್ರಜ್ಞಾನ ಮತ್ತು ಮಾರ್ಗೋಪಾಯಗಳನ್ನು ರೂಪಿಸಲು ಸಂಶೋಧನೆಯನ್ನು ಪ್ರೋತ್ಸಾಹಿಸಲು ತಮ್ಮ ಸಿಎಸ್‌ಆರ್ ನಿಧಿಯ ಶೇ 25ರಷ್ಟು ಅನುದಾನವನ್ನು ಮೀಸಲಿಡಲು ಸಭೆ ಕೋರಿತು.

ಸಿಎಸ್‌ಡಿ ಸಂಸ್ಥೆ ಆಯೋಜಿಸಿದ್ದ ದಿನದ ಶೂನ್ಯ ಮಾಲಿನ್ಯ ಶೃಂಗಸಭೆಯಲ್ಲಿ ಸಂಸತ್ ಸದಸ್ಯ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್. ಮಾಜಿ ಐಎಎಸ್ ಅಧಿಕಾರಿಗಳಾದ ಉಪೇಂದ್ರ ತ್ರಿಪಾಠಿ, ಕೆ. ಜೈರಾಜ್, ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಸಿಎಸ್‌ಡಿ ಅಧ್ಯಕ್ಷರಾದ ಡಾ.ಎ.ರವೀಂದ್ರ ಮತ್ತು ಸಿಎಸ್‌ಡಿ ನಿರ್ದೇಶಕರಾದ ಡಾ. ಆರ್.ಶ್ರೀನಿವಾಸ ಉಪಸ್ಥಿತರಿದ್ದರು.