LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅರ್ಚಕನೊಂದಿಗೆ ಅಶ್ಲೀಲ ಚ್ಯಾಟ್ ಮಾಡಿ 10 ಲಕ್ಷ ದೋಖಾ - ಯಕ್ಷಗಾನದ ಸ್ತ್ರೀವೇಷಧಾರಿ ಯುವಕ ಅರೆಸ್ಟ್

ಕಾಸರಗೋಡು: ಅರ್ಚಕರೊಬ್ಬರನ್ನು ಎಫ್‌ಬಿಯಲ್ಲಿ ಫ್ರೆಂಡ್ ಮಾಡಿಕೊಂಡು ಲೈಂಗಿಕವಾಗಿ ಆಕರ್ಷಿಸಿ ಪರಸ್ಪರ ಶೇರ್ ಮಾಡಿಕೊಂಡ ಫೋಟೋ, ವಿಡಿಯೋವನ್ನೇ ಮುಂದಿಟ್ಟುಕೊಂಡು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ ಆರೋಪದಲ್ಲಿ ಮಂಗಳೂರಿನ ಯಕ್ಷಗಾನ ಕಲಾವಿದನನ್ನು ಕಾಸರಗೋಡಿನ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಕೊಳಂಬೆ ನಿವಾಸಿ ಅಶ್ವಥ್ ಆಚಾರ್ಯ (33) ಬಂಧಿತ ವ್ಯಕ್ತಿ.

ಅಶ್ವತ್ಥ್ ಆಚಾರ್ಯ ಫೇಸ್ ಬುಕ್‌ನಲ್ಲಿ ಕಾಸರಗೋಡು ಮೂಲದ ಅರ್ಚಕರೊಬ್ಬರೊಂದಿಗೆ ತಾನು ಯಕ್ಷಗಾನ ಕಲಾವಿದ ಎಂದು ಪರಿಚಯಿಸಿಕೊಂಡು ಫ್ರೆಂಡ್ ಆಗಿದ್ದ. ಬಳಿಕ ಇಬ್ಬರೂ ಆನ್‌ಲೈನ್‌ನಲ್ಲಿ ಸಂಪರ್ಕದಲ್ಲಿದ್ದು, ಲೈಂಗಿಕವಾಗಿ ಆಕರ್ಷಿಸಿ ಸೆಕ್ಸ್ ಸಂಬಂಧಿಸಿ ಇಬ್ಬರೂ ಚಾಟ್ ಮಾಡುತ್ತಿದ್ದರು. ಇದೇ ವೇಳೆ ಒಬ್ಬರಿಗೊಬ್ಬರು ಫೋಟೋ, ವಿಡಿಯೋ ಷೇರ್ ಮಾಡಿಕೊಂಡಿದ್ದು, ಇದನ್ನೇ ಮುಂದಿಟ್ಟು ಅರ್ಚಕನನ್ನು ಅಶ್ವಥ್ ಆಚಾರ್ಯ ಬ್ಲಾಕೇಲ್ ಮಾಡಿದ್ದಾನೆ ಎನ್ನಲಾಗಿದೆ.

ಅಲ್ಲದೆ, ತಾನು ಯುವತಿಯಾಗಿ ಲಿಂಗ ಬದಲಾಯಿಸಿಕೊಳ್ಳುತ್ತೇನೆ, ಅದಕ್ಕಾಗಿ ಅಗತ್ಯವಿದೆ ಎಂದೂ ನಂಬಿಸಿದ್ದಾನೆ. ಹಣದ ಬ್ಲಾಕ್ಮೇಲ್ ಒಳಗಾದ ಅರ್ಚಕ ಕಳೆದ ನವೆಂಬರ್ ತಿಂಗಳಿನಿಂದ 10.50 ಲಕ್ಷ ರೂ. ಹಣವನ್ನು ಮೊಬೈಲ್ ಆ್ಯಪ್ ಮತ್ತು ಬ್ಯಾಂಕ್ ಮೂಲಕ ಆರೋಪಿ ಖಾತೆಗೆ ಪಾವತಿಸಿದ್ದರು. ಪೌರೋಹಿತ್ಯ ನಡೆಸುತ್ತಿದ್ದ ಅರ್ಚಕನಲ್ಲಿ ಮತ್ತಷ್ಟು ಹಣ ನೀಡದಿದ್ದರೆ ವಿಡಿಯೋ, ಫೋಟೊ ಜಾಲತಾಣದಲ್ಲಿ ಹಾಕುತ್ತೇನೆಂದು ಬೆದರಿಸಿದ್ದಾನೆ.

ಇದರಿಂದ ಬೇಸತ್ತ ಅರ್ಚಕ ಫೆ.5ರಂದು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ಆರೋಪಿಯನ್ನು ಮಂಗಳೂರಿನ ಮನೆಯಿಂದಲೇ ನಡುರಾತ್ರಿಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ. ಅರ್ಚಕ 3 ಲಕ್ಷವನ್ನು ಗೂಗಲ್ ಪೇಯಲ್ಲಿ ಪಾವತಿಸಿದ್ದರೆ, 7.5 ಲಕ್ಷವನ್ನು ಹಂತಹಂತವಾಗಿ ಮೂರು ಬಾರಿ ಬ್ಯಾಂಕ್‌ ಖಾತೆ ಮೂಲಕ ಪಾವತಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಬೇರೆಯವರನ್ನೂ ಬ್ಲಾಕ್ಮೇಲ್ ಮಾಡಿದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು'- ಸುಪ್ರೀಂ ಕೋರ್ಟ್‌ ಆದೇಶದೇಶದ ವಿವಿಧ ಬ್ಯಾಂಕ್ ಗಳಲ್ಲಿ 150 ಕೋಟಿ ರೂ. ಕಳ್ಳತನ : ದಾವಣಗೆರೆಯಲ್ಲಿ ಖತರ್ನಾಕ್ ವಂಚಕ ಅರೆಸ್ಟ್!ಅನಿಲ್ ಅಂಬಾನಿ ಆಪ್ತ ಸಹಾಯಕ ಅಶೋಕ್ ಕುಮಾರ್ ಅರೆಸ್ಟ್ಅ.17ಕ್ಕೆ ಭಾರತದ ಸ್ವದೇಶಿ ನಿರ್ಮಿತ ತೇಜಸ್ ಎಂಕೆ1ಎ ಫೈಟರ್ ಜೆಟ್ ಮೊದಲ ಹಾರಾಟಪಿಎಫ್ಐ ಪರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ: ಮುಸ್ಲಿಂ ಧರ್ಮಗುರು ಬಂಧನ..!!ಮದುವೆಯಾದ ಪುರುಷರು ಪರ ಸ್ತ್ರೀಯರ ಮೇಲೆ ವ್ಯಾಮೋಹ ಹೊಂದಲು ಅಕ್ರಮ ಸಂಬಂಧಗಳ ಸುಳಿಯಲ್ಲಿ ಸಿಲುಕಲು ಕಾರಣವೇನು ತಿಳಿಯಿರಿ!ಸೈಕಲ್ ರಿಪೇರಿ ಮಾಡುತ್ತಿದ್ದ ವರುಣ್ ಬರನ್ವಾಲ್ ಐಎಎಸ್ ಅಧಿಕಾರಿಯಾದ ಕಥೆ'ನಮ್ಮಂತೆ ಪಾಕ್ ಕೂಡ ಭಯೋತ್ಪಾದನೆ ನಿರ್ನಾಮ ಮಾಡ್ಬೇಕು'- ಭಾರತದಿಂದ ತಾಲಿಬಾನ್ ಸಚಿವ ಸಲಹೆಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಯಡಿಯೂರಪ್ಪರಿಗೆ ತಪ್ಪದ ಸಂಕಷ್ಟ.!ಬೆಂಗಳೂರು ಸೇರಿದಂತೆ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯಲಿದೆ ಈ ಜಿಲ್ಲೆಗಳಲ್ಲಿ.!