LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗಂಭೀರ ಆರೋಗ್ಯ ಸಮಸ್ಯೆಯ ನಡುವೆ ಓದಿ ಮೊದಲು IRS, ಬಳಿಕ IAS ಅಧಿಕಾರಿಯಾದ ಪ್ರತಿಭಾ ವರ್ಮ

ಉತ್ತರ ಪ್ರದೇಶ : ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಪ್ರತಿಭಾ ವರ್ಮ ಮೊದಲು ಇಂಜಿನಿಯರ್‌ ಆಗಿ ನಂತರ ಐಆರ್‌ಎಸ್‌ ಅಧಿಕಾರಿಯಾದರು. ನಂತರದಲ್ಲಿಯೇ ಐಎಎಸ್‌ ಆದರು. ಐಎಎಸ್‌ ಪ್ರತಿಭಾ ವರ್ಮ ರ ಸಕ್ಸಸ್ ಜರ್ನಿ.

ಪ್ರತಿಭಾ ವರ್ಮ ಮೂಲತಃ ಉತ್ತರ ಪ್ರದೇಶ ರಾಜ್ಯದ ಸುಲ್ತಾನ್‌ಪುರ್‌ ಪಟ್ಟಣದವರು. 2019 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಲ್ ಇಂಡಿಯಾ 3ನೇ ರ‍್ಯಾಂಕ್ ಪಡೆಯುವುದರೊಂದಿಗೆ ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿದವರು.

10ನೇ ತರಗತಿ ಶಿಕ್ಷಣವನ್ನು ಉತ್ತರ ಪ್ರದೇಶ ಬೋರ್ಡ್‌ನಲ್ಲಿ 12ನೇ ತರಗತಿ ಶಿಕ್ಷಣವನ್ನು ಸಿಬಿಎಸ್‌ಇ ಬೋರ್ಡ್‌ನಲ್ಲಿ ಪಡೆದರು. ನಂತರ ವರ್ಮಾ ದೆಹಲಿಗೆ ಬಂದು ಬಿ.ಟೆಕ್ ಅನ್ನು ಐಐಟಿ ದೆಹಲಿ'ಯಲ್ಲಿ ಪೂರ್ಣಗೊಳಿಸಿದರು.

2014 ರಲ್ಲಿ ಬಿ.ಟೆಕ್‌ ಪಾಸ್ ಮಾಡುತ್ತಿದ್ದಂತೆ ಪ್ರತಿಭಾ ವರ್ಮ ದೊಡ್ಡ ಟೆಲಿಕಾಂ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಪಡೆದಿದ್ದರು. ಅಲ್ಲಿ ಎರಡು ವರ್ಷಗಳ ಕಾಲ ಜಾಬ್ ನಿರ್ವಹಿಸಿದ ನಂತರ, ಉದ್ಯೋಗ ಬಿಡಲು ನಿರ್ಧರಿಸಿದರು. ನಂತರ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಆರಂಭಿಸಿದರು.

2016ರಲ್ಲಿ ಕೆಲಸಕ್ಕೆ ಗುಡ್‌ಬೈ ಹೇಳಿದ ನಂತರ ಯುಪಿಎಸ್‌ಸಿ ತಯಾರಿಗಾಗಿ ದೆಹಲಿಯಲ್ಲಿಯೇ ಉಳಿದಿದ್ದರು. ತಮ್ಮ ಮೊದಲ ಪ್ರಯತ್ನದಲ್ಲಿ ಫೇಲ್‌ ಆಗಿದ್ದರು. ಎರಡನೇ ಪ್ರಯತ್ನದಲ್ಲಿ 489th ರ್‍ಯಾಂಕ್‌ ಪಡೆಯುವುದರೊಂದಿಗೆ ಭಾರತೀಯ ರೆವಿನ್ಯೂ ಸೇವೆಗೆ ಆಯ್ಕೆಯಾಗಿದ್ದರು. ಆದರೆ ಐಎಎಸ್‌ ಅಧಿಕಾರಿಯಾಗುವುದು ಇವರ ಗುರಿಯಾಗಿತ್ತು

ಐಆರ್‌ಎಸ್‌ ಸೇವೆಗೆ ತೃಪ್ತಿ ಪಡದೆ ಪ್ರತಿಭಾ ವರ್ಮ ರವರು ತಮ್ಮ ತಯಾರಿ ಮುಂದುವರೆಸಿದ್ದರು. ತಮ್ಮ ಮೂರನೇ ಪ್ರಯತ್ನದಲ್ಲಿ 2019 ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಅಖಿಲ ಭಾರತ 3ನೇ Rank ಪಡೆಯುವುದರೊಂದಿಗೆ ಐಎಎಸ್‌ ಅಧಿಕಾರಿಯಾಗಿದ್ದರು.

ಯುಪಿಎಸ್‌ಸಿ ಪರೀಕ್ಷೆ ತಯಾರಿ ವೇಳೆ ಪ್ರತಿಭಾ ವರ್ಮ ಗಂಭೀರ ಆರೋಗ್ಯ ಸಮಸ್ಯೆ ಎದುರಾಯಿತು. 2018 ರಲ್ಲಿ ಡೆಂಗ್ಯೂ ಸಮಸ್ಯೆ ಇತ್ತು. 2019 ರಲ್ಲಿ ಥೈರಾಯ್ಡ್‌ ಸಮಸ್ಯೆ ಇತ್ತು. ಈ ಆರೋಗ್ಯ ಸಮಸ್ಯೆಗಳ ನಡುವೆ ಇವರು ಯುಪಿಎಸ್‌ಸಿಗೆ ತಯಾರಿ ನಡೆಸುವುದು ಸುಲಭವಾಗಿರಲಿಲ್ಲ. ಈ ಸಮಸ್ಯೆಗಳು ಇದ್ದು ಓದಿನ ಕಡೆ ಗಮನಹರಿಸುವುದು ಎಂದರೆ ಕಷ್ಟವೇ. ಅದೃಷ್ಟವಶಾತ್ ಕೊರೊನಾ ಎದುರಾದ ಕಾರಣ ವ್ಯಕ್ತಿತ್ವ ಪರೀಕ್ಷೆಯು ಎರಡು ತಿಂಗಳು ಮುಂದಕ್ಕೆ ಹೋಗಿತ್ತು. ಈ ವೇಳೆ ಯೋಗ, ಧ್ಯಾನ ಮಾಡುವುದರೊಂದಿಗೆ, ವಿಶೇಷ ಕಾಳಜಿ ವಹಿಸಿದ್ದರು. ಅಲ್ಲದೇ ಸಮತೋಲನ ಆಹಾರ ಸೇವನೆಯೊಂದಿಗೆ ಆರೋಗ್ಯವನ್ನು ತಮ್ಮ ಹತೋಟಿಗೆ ತೆಗೆದುಕೊಂಡರು. ಈ ಪರಿಶ್ರಮಗಳೊಂದಿಗೆ ಇವರು ಯುಪಿಎಸ್‌ಸಿ AIR 3ನೇ ಸ್ಥಾನ ತೆಗೆದುಕೊಂಡರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026