[caption id="attachment_4356" align="alignnone" width="300"]
Oplus_131072[/caption]

ಬೆಳಗಾವಿ ; ಬೆಳಗಾವಿ ; ಬೆಳಗಾವಿ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮೇಯರ್ ಸ್ಥಾನಕ್ಕೆ ಪ್ರೀತಿ ಕಾಮಕರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಹನುಮಂತ ಕೊಂಗಾಲಿ ಅವರನ್ನು ಆಯ್ಕೆ ಮಾಡಲಾಗಿದೆ.
ನೇಕಾರ ಸಮಾಜಕ್ಕೆ ಸೇರಿದ ಪ್ರೀತಿ ಕಾಮಕರ್ ಅವರು ಮೇಯರ್ ಸ್ಥಾನಕ್ಕೇರಿರುವುದು ರಾಜ್ಯದಲ್ಲೇ ಮೊದಲ ಬಾರಿಗೆ ಎನ್ನಲಾಗಿದೆ. ಲಿಂಗಾಯತ ಸಮಾಜದ ಹನುಮಂತ ಕೊಂಗಾಲಿ ಅವರು ಉಪಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಮೇಯರ ಸ್ಥಾನಕ್ಕೆ ಖುರ್ಶಿದಾ ದಾದಾಪೀರ್ ಮುಲ್ಲಾ ಮತ್ತು ಪ್ರೀತಿ ಕಾಮಕರ್ ಅವರು ನಾಮಪತ್ರ ಸಲ್ಲಿಸಿದ್ದರು. ಪ್ರೀತಿ ಕಾಮಕರ ಅವರ ಪರವಾಗಿ 39 ಮತಗಳು ಮತ್ತು ಖುರ್ಶಿದಾ ದಾದಾಪೀರ್ ಮುಲ್ಲಾ 18 ಪರವಾಗಿ ಮತಗಳು ಕೈ ಎತ್ತುವ ಮೂಲಕ ಚಲಾಯಿಸಲ್ಪಟ್ಟವು. ಇಬ್ಚರು ತಟಸ್ಥ ರಾಗಿದ್ದರು .ಆರು ಜನರು ಗೈರು ಹಾಜರಾಗಿದ್ದರು.ಒಟ್ಟು 59 ಸದಸ್ಯರು ಹಾಜರಿದ್ದರು . ಪ್ರಾದೇಶಿಕ ಆಯುಕ್ತರಾದ ಚುನಾವಣಾ ಅಧಿಕಾರಿ ಕೆ ಜಾನಕಿ ಅವರು ಪ್ರೀತಿ ಕಾಮಕರ ಅವರು ಮೇಯರ ಆಗಿ ಆಯ್ಕೆಯಾಗಿದ್ದರೆ ಎಂದು ಘೋಷಿಸಿದರು.
ಉಪಮೇಯರ ಸ್ಥಾನಕ್ಕೆ ಮೋದೀನಸಾಬ ಮತವಲ್ಲಿ ಮತ್ತು ಹಣಮಂತ ಕೊಂಗಾಲಿ ಅವರು ನಾಮಪತ್ರ ಸಲ್ಲಿಸಿದ್ದರು. ಹಣಮಂತ ಕೊಂಗಾಲಿ ಅವರ ಪರವಾಗಿ 39 ಮತಗಳು ಮತ್ತು ಮೋದೀನಸಾಬ ಮತವಲ್ಲಿ ಪರವಾಗಿ 20 ಮತಗಳು ಕೈ ಎತ್ತುವ ಮೂಲಕ ಚಲಾಯಿಸಲ್ಪಟ್ಟವು . ಆರು ಜನರು ಗೈರು ಹಾಜರಾಗಿದ್ದರು.ಒಟ್ಟು 59 ಸದಸ್ಯರು ಹಾಜರಿದ್ದರು . ಪ್ರಾದೇಶಿಕ ಆಯುಕ್ತರಾದ ಚುನಾವಣಾ ಅಧಿಕಾರಿ ಕೆ ಜಾನಕಿ ಅವರು ಅವರು ಅತಿ ಹೆಚ್ಚು ಮತ ಪಡೆದು ಹಣಮಂತ ಕೊಂಗಾಲಿ ಅವರು ಉಪಮೇಯರ ಆಗಿ ಆಯ್ಕೆಯಾಗಿದ್ದರೆ ಎಂದು ಘೋಷಿಸಿದರು.
ವಿಧಾನ ಪರಿಷತ್ ಸದಸ್ಯರು ಸಾಬಣ್ಣ ತಳವಾರ್ ಉಪಸ್ಥಿತರಿದ್ದರು. ಚುನಾವಣೆಗೆ ಮುನ್ನ ಪತ್ರಕರ್ತರೊಂದಿಗೆ ಶಾಸಕ ಅಭಯ್ ಪಾಟೀಲ ಮಾತನಾಡಿ, ಪಕ್ಷದ ನಿರ್ಧಾರಕ್ಕೆ ಅನುಗುಣವಾಗಿ ಇಬ್ಬರನ್ನೂ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮೇಯರ್ ಸ್ಥಾನಕ್ಕೆ ಏಳು ಮಂದಿ ಹಾಗೂ ಉಪಮೇಯರ್ ಸ್ಥಾನಕ್ಕೆ ಆರು ಮಂದಿ ಪೈಪೋಟಿ ನಡೆಸಿದರೂ, ಅಂತಿಮವಾಗಿ ಕೋರ ಕಮಿಟಿಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 40 ಸದಸ್ಯರೊಂದಿಗೆ ಸ್ಪಷ್ಟ ಬಹುಮತ ಹೊಂದಿದ್ದು, ಕಾಂಗ್ರೆಸ್ 24 ಸದಸ್ಯರನ್ನು ಹೊಂದಿದೆ. ವಿರೋಧ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಮಾತ್ರ ಚುನಾವಣೆ ನಡೆಯಲಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದರು ಆದರೆ ಚುನಾವಣೆ ನಡೆಯಿತು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 100 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಒಂದು ಬಾರಿಯೂ ಸಮರ್ಪಕ ಅನುದಾನ ದೊರಕಿಲ್ಲ ಎಂದು ಆರೋಪಿಸಿದರು. ಕಳೆದ ಎರಡೂವರೆ ವರ್ಷಗಳಿಂದ 100 ಕೋಟಿ ಅನುದಾನ ಬಾಕಿಯಿದ್ದು, ಕೇಂದ್ರ ಸರ್ಕಾರದ ‘ಸ್ಮಾರ್ಟ್ ಸಿಟಿ 2’ ಯೋಜನೆಯಲ್ಲೂ 75 ಕೋಟಿ ಕಡಿತಗೊಂಡಿರುವುದಕ್ಕೆ ಕಾಂಗ್ರೆಸ್ ಕಾರಣ ಎಂದು ದೂರಿದರು.
ಮಹಾನಗರ ಪಾಲಿಕೆಗೆ ಅಗತ್ಯ ಅನುದಾನವನ್ನು ರಾಜ್ಯ ಸರ್ಕಾರವೇ ಬಿಡುಗಡೆ ಮಾಡಬೇಕು ಎಂದು ಅಭಯ್ ಪಾಟೀಲ ಆಗ್ರಹಿಸಿದರು.