LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೊಸ ತಂತ್ರಜ್ಞಾನಕ್ಕೆ ಮುನ್ನುಡಿ- ರೇರ್ ಅರ್ಥ್ ಎಲಿಮೆಂಟ್ ಗಳು

 

ರೇರ್ ಅರ್ಥ್ ಎಲಿಮೆಂಟ್ಸ್ ಅಂದರೆ ಭೂಮಿಯೊಳಗಿನ ಅಪರೂಪ ಖನಿಜಗಳು ,ಅವು ಇತ್ತೀಚಿಗೆ ಭಾರೀ ಸುದ್ದಿಯಲ್ಲಿದೆ.ಎಲೆಕ್ಟ್ರಾನಿಕ್ಸ್ ಮತ್ತು ಡಿಜಿಟಲ್ ತಂತ್ರಜ್ಞಾನದ ವಸ್ತುಗಳ ಚಿಪ್ ನ ಹೃದಯದಲ್ಲಿರುವುದೇ ರೇರ್ ಅರ್ಥ್ ಮೆಟಲ್ ಗಳು.ಡಿಜಿಟಲ್ ತಂತ್ರಜ್ಞಾನದ ಬಹು ಮುಖ್ಯವಾದ ಸೆಮಿಕಂಡಕ್ಟರ್ ಗಳಿಗೆ ಬುನಾದಿಯಾಗಲಿರುವ ರೇರ್ ಅರ್ಥ್ ಎಲಿಮೆಂಟ್ ಗಳು ಇಂದು ತುಂಬಾ ಹೆಸರು ಮಾಡಿವೆ.
ಈ ಎಲಿಮೆಂಟ್ ಗಳು ವಿಶಿಷ್ಟವಾದ ಕಾಂತೀಯ,ಪ್ರಕಾಶಕ ಮತ್ತು ಎಲೆಕ್ಟ್ರೋ ಕೆಮಿಕಲ್ ಗುಣಲಕ್ಷಣಗಳನ್ನು ಹೊಂದಿವೆ.ಆದ್ದರಿಂದ ಗ್ರಾಹಕ ಎಲೆಕ್ಟ್ರಾನಿಕ್ ಕಂಪ್ಯೂಟರ್ ಗಳು,ನೆಟ್ವರ್ಕ್ ಗಳು, ಸಂವಹನ,ಆರೋಗ್ಯ ರಕ್ಷಣೆ,ರಾಷ್ಟ್ರೀಯ ರಕ್ಷಣೆ,ಶುದ್ಧ ಇಂಧನ-ತಂತ್ರಜ್ಞಾನ ಸೇರಿದಂತೆ ಅನೇಕ ತಂತ್ರಜ್ಞಾನದಲ್ಲಿ ಇವುಗಳನ್ನು ಬಳಸಲಾಗುತ್ತದೆ ಮಾತ್ರವಲ್ಲದೆ ಭವಿಷ್ಯದ ತಂತ್ರಜ್ಞಾನದಲ್ಲಿ ಇವುಗಳ ಬಳಕೆ ಅನಿವಾರ್ಯವಾಗಲಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.



ರೇರ್ ಅರ್ಥ್ ಎಲಿಮೆಂಟ್ಸ್ ಪರಿಚಯ

ರೇರ್ ಅರ್ಥ್ ಎಲಿಮೆಂಟ್ಸ್ /ಅಪರೂಪದ ಭೂಮಿಯ ಲೋಹಗಳು ಲ್ಯಾಂಥನೈಡ್ ಸರಣಿ ಎಂದು ಕರೆಯಲ್ಪಡುವ ಆವರ್ತಕ ಕೋಷ್ಟಕದಲ್ಲಿನ 15 ಅಂಶಗಳ ಗುಂಪಾಗಿದೆ. ಅಪರೂಪದ ಭೂಮಿಗಳನ್ನು ಲಘು ಅಪರೂಪದ ಭೂಮಿಗಳು (ಲ್ಯಾಂಥನಮ್ ನಿಂದ ಸಮಾರಿಯಮ್) ಮತ್ತು ಭಾರವಾದ ಅಪರೂಪದ ಭೂಮಿಗಳು (ಯುರೋಪಿಯಂ ನಿಂದ ಲುಟೆಟಿಯಮ್) ಎಂದು ವರ್ಗೀಕರಿಸಲಾಗಿದೆ.
ಭೂಮಿಯ ಹೊರಪದರಿನಲ್ಲಿ ಹೇರಳವಾಗಿ ಸಿಗುವ ಇವು ತಮ್ಮ ಭೂರಾಸಾಯನಿಕ ಲಕ್ಷಣಗಳಿಂದಾಗಿ ವಿಶೇಷವಿದ್ದರು, ಭೂಮಿಯ ಎಲ್ಲೆಡೆ ಚದುರಿಹೋಗಿರುತ್ತವೆ.ಇವುಗಳನ್ನು ಗಣಿಗಾರಿಕೆ ಮಾಡುವುದೂ ಕೂಡ ಕಷ್ಟ, ಅದಕ್ಕಾಗಿ ಇವುಗಳನ್ನು ಅಪರೂಪದ ಭೂಮಿಗಳು (Rare earth) ಎಂದು ಕರೆಯುತ್ತಾರೆ.
ಭೂಮಿಯ ಮೇಲೆ ಲಭ್ಯವಾಗುವ ಇದುವರೆಗಿನ ಮಾಹಿತಿ ಪ್ರಕಾರ ಆಸ್ಟ್ರೇಲಿಯಾದಲ್ಲಿ ಸಿಗುವ ಮೌಲ್ಟ್ ವೆಲ್ ಎಂಬ ಖನಿಜ ಅತ್ಯುತ್ತಮ ಎಂದು ಭಾವಿಸಲಾಗಿದೆ. ರೇರ್ ಅರ್ಥ್ ಮೆಟಲ್ ಎಂಬುವವು ಹೊರಸೂಸುವಿಕೆಯನ್ನು ಕಡಿಮೆ ಮಾಡಲು,ಶಕ್ತಿಯ ಬಳಕೆ ಕಡಿಮೆ ಮಾಡಲು,ದಕ್ಷತೆ,ಕಾರ್ಯಕ್ಷಮತೆ,ವೇಗ ಹೆಚ್ಚಿಸುವಿಕೆ,ಬಾಳಿಕೆ ಮತ್ತು ಉಷ್ಣ ಸ್ಥಿರತೆಯನ್ನು ಸುಧಾರಿಸಲು ಬಯಸುವ ತಂತ್ರಜ್ಞಾನಗಳಿಗೆ ಬಳಸಲು ಇವು ಸೂಕ್ತ ಮಾತ್ರವಲ್ಲ ಉತ್ಪನ್ನಗಳು ಹಗುರ ಮತ್ತು ಚಿಕ್ಕದಾಗಿ ಮಾಡಲು ಇವು ಸಹಕಾರಿ.

ಅಪರೂಪದ ಭೂಮಿಗಳು ಇತರ ಲೋಹೀಯ ಮತ್ತು ಲೋಹವಲ್ಲದ ಅಂಶಗಳೊಂದಿಗೆ ಪ್ರತಿಕ್ರಿಯಿಸಿ ಸಂಯುಕ್ತಗಳನ್ನು ರೂಪಿಸುತ್ತವೆ, ಅವು ಪ್ರತಿಯೊಂದೂ ನಿರ್ದಿಷ್ಟ ರಾಸಾಯನಿಕ ನಡವಳಿಕೆಗಳನ್ನು ಹೊಂದಿರುತ್ತದೆ. ಇವು ಅನೇಕ ವಿದ್ಯುತ್, ಆಪ್ಟಿಕಲ್, ಕಾಂತೀಯ ಮತ್ತು ವೇಗವರ್ಧಕ ಅನ್ವಯಿಕೆಗಳಲ್ಲಿ ಅವುಗಳ ಬಳಕೆ ಅನಿವಾರ್ಯ ಮತ್ತು ಪರ್ಯಾಯವಾಗಿ ಮತ್ತೊಂದು ಇಲ್ಲ ಎಂಬಂತೆ ಮಾಡಲಿವೆ.

ರೇರ್ ಅರ್ಥ್ ಮೆಟಲ್ ಗಳ ಬಳಕೆ:


ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲಿ, ಪವನ ಶಕ್ತಿ ಉತ್ಪಾದಿಸುವ ಯಂತ್ರಗಳಲ್ಲಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ.
ಇವು ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗತ್ಯವೆನಿಸುವಷ್ಟು ಅನಿವಾರ್ಯವಾಗಿದೆ.
ಅತಿ ಹೆಚ್ಚು ಸಾಮರ್ಥ್ಯ ತೋರುವ ಪರ್ಮನೆಂಟ್ ಮ್ಯಾಗ್ನೆಟ್ ಮೋಟರ್ ನಲ್ಲಿ ರೇರ್ ಅರ್ಥ್ ಬಳಸಲಾಗುತ್ತದೆ. ರೇರ್ ಅರ್ಥ್ ಮ್ಯಾಗ್ನೆಟಿಕ್ ಮೋಟರ್ಸ್ ನಲ್ಲಿ ಸಂಗ್ರಹವಾಗುವ ವಿದ್ಯುತ್ ಶಕ್ತಿಯನ್ನು ಚಲನೆಯಾಗಿ ಪರಿವರ್ತಿಸುತ್ತದೆ.ಈ ವ್ಯವಸ್ಥೆಯನ್ನು ಎಲೆಕ್ಟ್ರಿಕ್ ವಾಹನಗಳು ಮತ್ತು ಗಾಳಿ ಟರ್ಬೈನ್ ಗಳಲ್ಲಿ ಬಳಸಲಾಗುತ್ತದೆ.
ವಾಹನಗಳಲ್ಲಿ ಇದು ಕೆಲಸ ಮಾಡುವ ಪರಿ:
ರೇರ್ ಅರ್ಥ್ ಎಲಿಮೆಂಟ್ ಗಳಾದ ನಿಯೋಡುಯೋಮಿಮ್- ಐರನ್-ಬೋರಾನ್ ( NdFeB)

ಬಲವಾದ ಕಾಂತವಾಗಿ ಕೆಲಸಮಾಡುತ್ತವೆ, ಆ ಕಾಂತಗಳು ಬಹು ಸಾಮರ್ಥ್ಯದ ಮತ್ತು ಸುಸ್ಥಿರ ಕಾಂತಕ್ಷೇತ್ರ ಸೃಷ್ಟಿಸುತ್ತವೆ.ಈ ಕಾಂತಗಳು ವಾಹನ ಚಲಿಸುವಾಗ ಉಂಟಾಗುವ ಹೆಚ್ಚು ಉಷ್ಣ ತಡೆಯಲು ಮತ್ತು ಬಲಿಷ್ಠವಾಗಿರಲು ಡಿಸ್ಪ್ರೋಜಿಯಮ್ ಮತ್ತು ಟೆರ್ಬಿಯಮ್ ಸೇರಿಸುತ್ತಾರೆ.
ರೇರ್ ಅರ್ಥ್ ಎಲಿಮೆಂಟ್ ಉಪಯೋಗ:
1. ಸ್ಮಾರ್ಟ್ ಫೋನ್ ಒಂದರಲ್ಲಿ ಸುಮಾರು 8 ವಿಭಿನ್ನ ಅಪರೂಪದ ಭೂಮಿ ವಸ್ತುಗಳ (ರೇರ್ ಅರ್ಥ ಎಲಿಮೆಂಟ್) ನ್ನು ಬಳಸಲಾಗುತ್ತದೆ.
2.ರೈಲುಗಳು, ಎಲೆಕ್ಟ್ರಾನಿಕ್ ವಾಹನಗಳು, ಟ್ರಾಲಿ ಬಸ್ ಗಳಂತಹ ವಾಹನಗಳನ್ನು ಚಲಿಸುವಂತೆ ಮಾಡುವ ಎಲೆಕ್ಟ್ರಿಕ್ ಮೋಟರ್ ತಯಾರಿಕೆಯಲ್ಲಿ ರೇರ್ ಅರ್ಥ್ ಎಲಿಮೆಂಟ್ ಗಳನ್ನು ಬಳಸಲಾಗುತ್ತದೆ.
3.ಗಾಳಿಯ ಚಲನೆಯಿಂದ ವಿದ್ಯುತ್ ತಯಾರಿಸುವ ವಿಂಡ್ ಮಿಲ್ ನ ರೆಕ್ಕೆಗಳು ತಿರುಗಲು ಬಳಸುವ ಮೋಟಾರ್ ಗಳಲ್ಲಿ ರೇರ್ ಅರ್ಥ್ ಎಲಿಮೆಂಟ್ಸ್ ಗಳನ್ನು ಬಳಸಲಾಗುತ್ತದೆ.
4.ಅಯಸ್ಕಾಂತ,ಬ್ಯಾಟರಿಗಳು, ಕ್ಯಾಟಲಿಟಿಕ್ ಕನ್ವರ್ಟರ್, ಪವರ್ ಸ್ಟೇರಿಂಗ್, ಒಟ್ಟಾರೆ ಚಿಕ್ಕ ಮೊಬೈಲ್ ಫೋನ್ ನಿಂದ ಹಿಡಿದು ಕಾರ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.
5.ಕ್ಯಾಟಲಿಕ್ ಕನ್ವರ್ಟರ್ ಎಂದರೆ ವಾಹನಗಳಿಂದ ಹೊರಬರುವ ಹೊಗೆಯಲ್ಲಿನ ಹಾನಿಕಾರಕ ಅನಿಲಗಳಾದ ಕಾರ್ಬನ್ ಮಾನಾಕ್ಸೈಡ್, ಹೈಡ್ರೋ ಕಾರ್ಬನ್ಸ್, ನೈಟ್ರೋಜನ್ ಆಕ್ಸೈಡ್ ಗಳನ್ನು ಫಿಲ್ಟರ್ ಮಾಡಿ ಪರಿಸರ ಮಾಲಿನ್ಯ ತಡೆಯುತ್ತದೆ.ಅಂದರೆ ಪರಿಸರ ಸ್ನೇಹಿ ವಾಹನಗಳ ತಯಾರಿಸಲು ಇವು ಉಪಯುಕ್ತ.
6.ವಿಶೇಷವಾಗಿ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ರಾಕೇಟ್, ಕೃತಕ ಉಪಗ್ರಹ,ಹಾರುವ ತಂತ್ರಜ್ಞಾನದ ಉಪಕರಣಗಳಲ್ಲಿ,ಸೆನ್ಸಾರ್ ಗಳಲ್ಲಿ ರೇರ್ ಅರ್ಥ್ ಎಲಿಮೆಂಟ್ ಗಳಲ್ಲಿ ಬಳಸುತ್ತಾರೆ.
7. ರೇಡಾರ್, ಸೂಪರ್ ಕಂಡಕ್ಟರ್ ಗಳಲ್ಲಿ ಬಳಸಲಾಗುತ್ತದೆ.
8.ಖಗೋಲದ ದೂರದರ್ಶಕದ ಗಾಜು ತಯಾರಿಸಲು,ಸೋಲಾರ್ ಪ್ಯಾನೆಲ್ ,ಆಪ್ಟಿಕಲ್ ಫೈಬರ್ ಗಳಲ್ಲಿ ಬಳಸಲಾಗುತ್ತದೆ.



ರೇರ್ ಅರ್ಥ್ ಎಲಿಮೆಂಟ್ ಗಳು ಏಕೆ ಸುದ್ದಿಯಲ್ಲಿವೆ?
ಭಾರತ ದೇಶವು ಸದರಿ ಎಲಿಮೆಂಟ್ ಪಡೆಯಲು ಚೀನಾ ದೇಶದ ಮೇಲೆ ಅವಲಂಬಿಸಿದೆ, ಅದಕ್ಕಾಗಿ ಭಾರತೀಯ ಕೈಗಾರಿಕಾ ಒಕ್ಕೂಟ (CII) ಸರ್ಕಾರವನ್ನು ಭಾರತದಲ್ಲೇ ಗಣಿಕಾರಿಕೆ ಮಾಡಲು ಒತ್ತಾಯಿಸಿದೆ.ಭಾರತವು ವಿಶ್ವದ ರೇರ್ ಅರ್ಥ್ ಎಲಿಮೆಂಟ್ಸ್ ನಿಕ್ಷೇಪಗಳಲ್ಲಿ 6% ಹೊಂದಿದ್ದರು ಕೇವಲ1% ಮಾತ್ರ ಉತ್ಪಾದಿಸುತ್ತದೆ.ಅದಕ್ಕಾಗಿ ಭಾರತ್ ಸೆಮಿಕಂಡಕ್ಟರ್ ಮಿಷನ್ ನಂತೆ "ಇಂಡಿಯಾ ರೇರ್ ಅರ್ಥ್ ಮಿಷನ್" ಸ್ಥಾಪಿಸಲು ವಿನಂತಿಸಿದೆ. ಅದು ಸಾಧ್ಯವಾದಾಗ ನಮ್ಮ ದೇಶವೂ ಈ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಲಿದೆ.

 

ಡಾ.ಯು.ಶ್ರೀನಿವಾಸ ಮೂರ್ತಿ ಬಳ್ಳಾರಿ
ವಿಜ್ಞಾನ ಸಾಹಿತ್ಯ ಲೇಖಕ
ವಿಚಾರ ಕುಟೀರ
ರಾಮನಗರ1ನೇ ಕ್ರಾಸ್, ಹವಂಬಾವಿ
ಬಳ್ಳಾರಿ-583101
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು