LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಎಯಿಂದ IPS ವರೆಗಿನ ಪ್ರೇಮ್ ಸುಖ್ ಜರ್ನಿ

ರಾಜಸ್ಥಾನ : ತಾಳ್ಮೆ ಹಾಗೂ ಕಠಿಣ ಪರಿಶ್ರಮ, ಓದಿನಲ್ಲಿ ಆಸಕ್ತಿ ಹಿಡಿದಿಟ್ಟುಕೊಂಡವರು ಇನ್ನೇನೆಲ್ಲಾ ಸಾಧಿಸಬಹುದು ಎಂಬುದಕ್ಕೆ ರಾಜಸ್ತಾನ ಮೂಲದ ಪ್ರೇಮ್‌ ಸುಖ್ ದೇಲು ಎಂಬುವರು ಅತಿದೊಡ್ಡ ಸ್ಫೂರ್ತಿ. ಐಪಿಎಸ್‌ ಅಧಿಕಾರಿಯೊಬ್ಬರು ಮೊದಲು ಪಡೆದಿದ್ದು ದ್ವಿತೀಯ ಪಿಯುಸಿ ಆಧಾರಿತ ವಿಲೇಜ್‌ ಅಕೌಂಟಂಟ್‌ (ಪಥ್ವಾರಿ) ಹುದ್ದೆ. ಕೊನೆಗೆ ಅವರು ತಮ್ಮ ಗುರಿ ಮುಟ್ಟಿದ್ದು ಐಪಿಎಸ್‌ ಆಗುವವರೆಗೆ. 6 ವರ್ಷದಲ್ಲಿ ಒಟ್ಟು 12 ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿದ್ದ ಪ್ರೇಮ್‌ ಸುಖ್ ದೇಲು ಅವರ ಸಕ್ಸಸ್ ಜರ್ನಿ.

ಪ್ರೇಮ್‌ ಸುಖ್‌ ದೇಲು, ರಾಜಸ್ಥಾನ ರಾಜ್ಯದ ಬಿಕನೆರ್ ಮೂಲದವರು. ಒಂದು ರೈತ ಕುಟುಂಬದಲ್ಲಿ ಇವರು ಜನಿಸಿದರು. ಮೊದಲಿಗೆ ತಮ್ಮ ಕಠಿಣ ಶ್ರಮ ದಿಂದ ಪಥ್ವಾರಿ ಎಂದರೆ ಗ್ರಾಮ ಲೆಕ್ಕಿಗ ಹುದ್ದೆ. ಅವರು ಆ ಹುದ್ದೆಗೆ ತೃಪ್ತಿಪಟ್ಟುಕೊಂಡವರಲ್ಲ. ಅವರ ಕನಸು ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡುವುದಾಗಿತ್ತು. ಹಾಗೂ ಐಪಿಎಸ್‌ ಆಗುವುದಾಗಿತ್ತು.

ಪ್ರೇಮ್‌ ಸುಖ್‌ ತಂದೆ ಒಬ್ಬ ರೈತರು. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಆದ್ದರಿಂದ ಅವರ ತಂದೆ ವ್ಯವಸಾಯದ ಜತೆಗೆ ಒಂಟೆ ಕಾರ್ಟ್‌ ಅನ್ನು ನಡೆಸುತ್ತಿದ್ದರು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಂಟೆ ಮೇಲೆ ಜನರನ್ನು ಸಾಗುತ್ತಿದ್ದರು. ಇದನ್ನೆಲ್ಲಾ ಗಮನಿಸುತ್ತಿದ್ದ ಪ್ರೇಮ್‌ ಆರ್ಥಿಕ ಪರಿಸ್ಥಿತಿ ಇಂದ ತಮ್ಮ ಕುಟುಂಬವನ್ನು ಮೇಲೆತ್ತುವ ಜತೆಗೆ ಸಾಧನೆ ಮಾಡುವ ಕನಸು ಕಟ್ಟಿಕೊಂಡರು.

ಪ್ರೇಮ್‌ ಸುಖ್ ದೇಲು 10ನೇ ತರಗತಿವರೆಗೂ ಸಹ ಸರ್ಕಾರಿ ಶಾಲೆಯಲ್ಲಿಯೇ ತಮ್ಮ ಸ್ವಂತ ಗ್ರಾಮದಲ್ಲಿ ಓದಿದವರು. ನಂತರದಲ್ಲಿ ಬಿಕನೆರ್‌ನ ಸರ್ಕಾರಿ ದುಂಗರ್ ಕಾಲೇಜಿನಲ್ಲಿ ಓದಿದರು. ಸ್ನಾತಕೋತ್ತರ ಪದವಿ (ಎಂಎ) ಅನ್ನು ಇತಿಹಾಸ ವಿಷಯದಲ್ಲಿ ವ್ಯಾಸಂಗ ಮಾಡಿ ಗೋಲ್ಡ್‌ ಮೆಡಲ್ ಸಹ ಪಡೆದಿದ್ದರು. ಎಂಎ ಮುಗಿಸಿದ ವರ್ಷದಲ್ಲೇ ಯುಜಿಸಿ ಎನ್‌ಇಟಿ ಪಾಸ್‌ ಜತೆಗೆ ಜೆಆರ್‌ಎಫ್‌ ಅರ್ಹತೆ ಪಡೆದಿದ್ದರು.

ಪ್ರೇಮ್‌ ಸುಖ್ ಹಿರಿಯ ಅಣ್ಣ ರಾಜಸ್ತಾನದಲ್ಲಿ ಕಾನ್ಸ್‌ಟೇಬಲ್‌ ಆಗಿದ್ದರು. ಇವರಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಸ್ಫೂರ್ತಿಗೊಂಡಿದ್ದ ಪ್ರೇಮ್‌ ರವರು, 2010 ರಲ್ಲಿ ಪದವಿ ಮುಗಿಸುತ್ತಿದ್ದಂತೆ ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆ ಹುದ್ದೆ ಗಿಟ್ಟಿಸಿದ್ದರು ಸಹ. ನಂತರ ತಮ್ಮ ಸಾಮರ್ಥ್ಯ ಅರಿತ ಅವರು ಗ್ರಾಮ ಲೆಕ್ಕಿಗ ಹುದ್ದೆ ಕರ್ತವ್ಯ ನಿರ್ವಹಿಸುತ್ತಲೇ ಮಾಸ್ಟರ್‌ ಡಿಗ್ರಿ ಪಾಸ್‌ ಮಾಡಿದ್ದು, ಎನ್‌ಇಟಿ ಪಾಸ್‌ ಮಾಡಿದರು.

ನಂತರದಲ್ಲಿ, ಪ್ರೇಮ್‌ ಸುಖ್ ರಾಜಸ್ಥಾನ ಗ್ರಾಮ ಸೇವಕ್ ಪರೀಕ್ಷೆ ಬರೆದು ಎರಡನೇ ರ್‍ಯಾಂಕ್‌ ಪಡೆದರಂತೆ. ನಂತರ ಅಸಿಸ್ಟಂಟ್ ಜೈಲರ್ ಪರೀಕ್ಷೆಯನ್ನು ಪಾಸ್ ಮಾಡಿದರಂತೆ. ಈ ಹುದ್ದೆಗೆ ನಿಯೋಜನೆಗೊಳ್ಳುವ ಮುಂಚಿತವಾಗಿಯೇ ರಾಜಸ್ಥಾನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆ ಪರೀಕ್ಷೆ ಫಲಿತಾಂಶ ಪ್ರಕಟಗೊಂಡು, ಅದರಲ್ಲೂ ಇವರು ಆಯ್ಕೆಯಾಗಿದ್ದರು.

ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಲೇ ಯುಪಿಎಸ್‌ಸಿ'ಗೆ ಓದುತ್ತಿದ್ದ ಪ್ರೇಮ್‌, ರಾಜಸ್ತಾನ ಪಬ್ಲಿಕ್ ಸರ್ವೀಸ್ ಕಮಿಷನ್‌ ಪರೀಕ್ಷೆ ಪಾಸ್‌ ಮಾಡಿ ತಾಹಶೀಲ್ದಾರ್‌ ಆಗಿ ಆಯ್ಕೆಯಾಗಿದ್ದರು. ಆದರೂ ಸಹ ಯುಪಿಎಸ್‌ಸಿ'ಗೆ ಓದುವುದನ್ನು ನಿಲ್ಲಿಸಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿ 170 Rank ನೊಂದಿಗೆ ಐಪಿಎಸ್‌ ಅಧಿಕಾರಿ ಆದರು.

ಗುಜರಾತ್‌ ಕೇಡರ್‌ ಅನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಅಮ್‌ರೇಲಿ ಅಲ್ಲಿ ಅಸಿಸ್ಟೆಂಟ್ ಕಮಿಷನರ್ ಆಫ್‌ ಪೊಲೀಸ್‌ (ಎಸಿಪಿ) ಆಗಿ ಅಧಿಕಾರ ವಹಿಸಿಕೊಂಡರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026