LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕುರುಗೋಡು ಉತ್ಸವ: ಭರದ ಸಿದ್ಧತೆ


ಬಳ್ಳಾರಿ,ಫೆ.14

ಸಿಂದರ ರಾಜಧಾನಿಯಾಗಿದ್ದ ಕುರುಗೋಡು ಪಟ್ಟಣದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಕುರುಗೋಡು ಪಟ್ಟಣವು ತನ್ನ ಚೊಚ್ಚಲ ಉತ್ಸವ ಆಚರಣೆಯ ಸಂಭ್ರಮದಲ್ಲಿದೆ.

ಇದೇ ಫೆ.15 ಮತ್ತು 16 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಎರಡು ದಿನಗಳ ಕುರುಗೋಡು ಉತ್ಸವ ಆಯೋಜಿಸಿದೆ.

ಉತ್ಸವದ ಆಕರ್ಷಣೆಗೆ ಈಗಾಗಲೇ ಕುರುಗೋಡು ತಾಲ್ಲೂಕು ಆಡಳಿತವು ವಿದ್ಯುತ್ ದೀಪಗಳಿಂದ ಕುರುಗೋಡು ಪಟ್ಟಣದ ಮುಖ್ಯ ರಸ್ತೆಗಳ ಅಲಂಕಾರ, ವಿವಿಧೆಡೆ ಸ್ವಚ್ಛತಾ ಕಾರ್ಯ, ಪ್ರಚಾರ ಕಾರ್ಯ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಂಡಿದೆ.

ಉತ್ಸವವನ್ನು ಜನೋತ್ಸವವನ್ನಾಗಿಸಲು ತಾಲ್ಲೂಕು ಆಡಳಿತದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಿ ಉತ್ಸವಕ್ಕೆ ಆಹ್ವಾನ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಜನಾಕರ್ಷಣೆಗಾಗಿ ಉತ್ಸವದಲ್ಲಿ ಹಲವು ರೀತಿಯ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿದೆ.

*ಇತಿಹಾಸ:*

ಕುರುಗೋಡು ಪ್ರದೇಶದ ಇತಿಹಾಸವು ಶಿಲಾಯುಗದ ಕಾಲದಿಂದ ಪ್ರಾರಂಭವಾಗುತ್ತದೆ. ಶಿಲಾಯುಗದ ಕಾಲದ ಮಾನವರ ವಾಸದ ನೆಲೆಗಳು, ಬರೆದ ಗುಹಾಚಿತ್ರಗಳು ಮತ್ತು ಉಪಯೋಗಿಸುತ್ತಿದ್ದ ಶಿಲಾಯುಧಗಳನ್ನು ಶೋಧಿಸಲಾಗಿದೆ. ಮಹಾಭಾರತದ ಕಾಲದಲ್ಲಿ ಕುಂತಳ ರಾಜ್ಯದ ರಾಜಧಾನಿಯಾಗಿದ್ದ ಇಲ್ಲಿ, ಸುಪ್ರಸಿದ್ಧ ಅರಸ ಚಂದ್ರಹಾಸನು ರಾಜ್ಯಭಾರ ಮಾಡಿದ್ದಾನೆಂದು ಪ್ರತೀತಿ ಇದೆ.

ನಂತರ ಈ ಪ್ರದೇಶವು ಮೌರ್ಯರು, ಶಾತವಾಹನರು, ಬಾದಾಮಿ ಚಾಲುಕ್ಯರು ಮತ್ತು ಕಲ್ಯಾಣದ ಚಾಲುಕ್ಯರ ಆಡಳಿತಕ್ಕೊಳಪಟ್ಟಿತ್ತು. ಕಲ್ಯಾಣದ ಚಾಲುಕ್ಯರ ಸಾಮಾಂತರಾಗಿದ್ದ ಸಿಂದ ವಂಶದ 11 ಅರಸರು ಇಲ್ಲಿ ಕ್ರಿ.ಶ 950 ರಿಂದ 1200 ರ ವರೆಗೆ, ಸುಮಾರು 250 ವರ್ಷಗಳ ಕಾಲ ಸಂಪತ್ತು-ಸಮೃದ್ಧಿಯಿAದ “ಬಲ್ಲಕುಂದೆ 300 ನಾಡನ್ನು” ಆಳಿದ್ದಾರೆ ಎಂದು ತಿಳಿಯಬಹುದು.

ಈ ಸಿಂದ ಅರಸರು ಈ ನಾಡಿನ ರಾಜಧಾನಿಯನ್ನು ‘ಕುರುಗೋಡಿ’ನಲ್ಲಿ ಇಂದ್ರನ ಅಮರಾವತಿಯಂತೆ ಅತ್ಯಂತ ಸುಂದರವಾಗಿ ನಿರ್ಮಿಸಿ, ಬಂಧುರವಾದ ಕೋಟೆಯನ್ನು ಕಟ್ಟಿಸಿ, ಕಲ್ಲೇಶ್ವರ, ಸಂಗಮೇಶ್ವರ, ಉಜ್ಜಾಳೇಶ್ವರ, ತ್ರಿಕೂಟೇಶ್ವರ ಮೊದಲಾದ ಕಲಾತ್ಮಕವಾದ ಹಲವಾರು ದೇವಾಲಯಗಳನ್ನು ಮತ್ತು ಜೈನ ಬಸದಿಗಳನ್ನು ನಿರ್ಮಿಸಿರುವುದು ಪಟ್ಟಣದ ಸುತ್ತ-ಮುತ್ತ ಹಾಗೂ ಹೊರವಲಯ ಕಾಣಬಹುದಾಗಿದೆ.

*ಐತಿಹಾಸಿಕ ದೊಡ್ಡಬಸವೇಶ್ವರನ ಏಕಾಶಿಲಾ ಮೂರ್ತಿ:*

ಕ್ರಿ.ಶ.1336 ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಹಂಪಿಯಲ್ಲಿ ಸ್ಥಾಪಿಸಿದ ‘ಹರಿಹರ ಬುಕ್ಕ’ ಸಹೋದರ ಪಿತ ‘ಸಂಗಮನು’ ಕುರುಗೋಡು ಮೂಲದವನೆಂದು ಸಂಶೋಧನೆಯಿAದ ತಿಳಿಯಬಹುದಾಗಿದೆ. ಈತನೇ ಕುರುಗೋಡಿನಲ್ಲಿ ಭವ್ಯವಾದ ‘ಸಂಗಮೇಶ್ವರ’ ದೇವಾಲಯನ್ನು ನಿರ್ಮಿಸಿರುವನು.

ನಂತರ ವಿಜಯನಗರ ಸಾಮ್ರಾಜ್ಯದಲ್ಲಿ ವಿಲೀನವಾಗಿದ್ದ ಕುರುಗೋಡಿನಲ್ಲಿ, ಹಂಪೆಯ ಅಧಿಪತಿ ‘ಶ್ರೀ ಪಂಪಾ-ವಿರುಪಾಕ್ಷೇಶ್ವರ’ ಗೆ ಅಭಿಮುಖವಾಗಿ, ಎದುರು ಬಸವಣ್ಣನ ಸಂಕೇತಿಕವಾಗಿ 13 ಅಡಿ ಎತ್ತರದ ದಕ್ಷಿಣ ಭಾರತದಲ್ಲೇ ಎರಡನೇ ಅತಿದೊಡ್ಡದಾದ ‘ದೊಡ್ಡಬಸವೇಶ್ವರ’ನ ಬೃಹದ್ಧಾಕಾರದ ಏಕಶಿಲಾ ಮೂರ್ತಿಯನ್ನು ನಿರ್ಮಿಸಲಾಗಿದೆ. ಇದೇ ಕಾಲದಲ್ಲಿ ಈ ಪಟ್ಟಣದಲ್ಲಿ 10 ಅಡಿ ಮತ್ತು 20 ಅಡಿ ಎತ್ತರದ ಬೃಹದ್ಧಾಕಾರದ 2 ಗಣೇಶ ವಿಗ್ರಹಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಕಾಣಬಹುದಾಗಿದೆ.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿತವಾದ ದೊಡ್ಡ ಬಸವೇಶ್ವರ ದೇವಾಲಯ ಮತ್ತು ಹಲವು ಬೃಹದಾಕಾರದ ಮೂರ್ತಿ ಶಿಲ್ಪಗಳು ವಿಜಯನಗರದ ಶಿಲ್ಪಕಲೆಯ ಮಾದರಿಯಲ್ಲಿ ವೈಶಿಷ್ಟ ಪೂರ್ಣವಾಗಿ ನಿರ್ಮಿತವಾಗಿವೆ.

ವಿಶ್ವದಲ್ಲಿ ಎಲ್ಲಿಯೂ ಕಂಡು ಬರದ ಐದು ಮುಖಗಳೂ, ಹನ್ನೆರಡು ದಸ್ತಗಳೂ ಇರುವ “ಪಂಚಮುಖಿ ವೀರಭದ್ರ” ದೇವರ ಮೂರ್ತಿ ಈ ಊರಿನಲ್ಲಿರುವುದು ಒಂದು ಅತ್ಯಂತ ಹೆಮ್ಮೆಯ ವಿಷಯ. ಹಂಪೆ ಮತ್ತು ಕುರುಗೋಡಿನ ಈ ಸಾಂಸ್ಕೃತಿಕ ಸಂಬAಧದಿAದ ಈ ಸ್ಥಳವು ‘ದಕ್ಷಿಣಕಾಶಿ’ ಎಂಬುದಾಗಿ ಕರೆಯಲ್ಪಟ್ಟಿದೆ.

*ಮುಖ್ಯ ವೇದಿಕೆ ಸಿದ್ಧತೆ:*

ಫೆ.16 ರಂದು ನಡೆಯುವ ಕುರುಗೋಡು ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ತಾಲ್ಲೂಕು ಆಡಳಿತವು ಪಟ್ಟಣದ ಕಂಪ್ಲಿ ರಸ್ತೆಯ ಹೊರವಲಯದ ಖಾದರ್ ಲಿಂಗ ದರ್ಗಾ ಹತ್ತಿರ ಸ್ಥಳ ಪರಿಶೀನೆ ನಡೆಸಿದ್ದು, ಕಾರ್ಯಕ್ರಮ ಆಯೋಜನೆಗೆ ಸಿದ್ಧತಾ ಕಾರ್ಯ ಕೈಗೊಂಡಿದೆ.

*ಹೆಲಿಪ್ಯಾಡ್ ಸ್ಥಳ ಪರಿಶೀಲನೆ:*

ಇತಿಹಾಸ ಪ್ರಸಿದ್ಧ ಕುರುಗೋಡು ಪಟ್ಟಣದಲ್ಲಿ ಕಲ್ಲಿನ ಗುಡ್ಡದ ಸಾಲುಗಳು ಸಾಲುಗಳು, ಹೊರವಲಯದಲ್ಲಿ ಪುರಾತನ ದೇವಾಲಯಗಳು, ಕಾಲುವೆ ಮಾರ್ಗ ಸೇರಿದಂತೆ ಸುತ್ತ-ಮುತ್ತಲಿನ ಪರಿಸರ ವಾತಾವರಣ ಕಣ್ತುಂಬಿಕೊಳ್ಳಲು ತಾಲ್ಲೂಕು ಆಡಳಿತವು ಬೈ-ಸ್ಕೆöÊ ಆಯೋಜನೆ ಮಾಡಿದ್ದು, ಪಟ್ಟಣದ ನಾಡಗೌಡರ ಮರಿಬಸವನಗೌಡ ಸ್ಮಾರಕ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಸ್ಥಳ ಪರಿಶೀಲನೆ ಮಾಡಿದೆ.

ಈ ವೇಳೆ ಕುರುಗೋಡು ಪುರಸಭೆ ಅಧ್ಯಕ್ಷ ಶೇಕಣ್ಣ, ಕುರುಗೋಡು ತಾಲ್ಲೂಕು ತಹಶೀಲ್ದಾರ್ ನರಸಪ್ಪ, ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ, ಕುರುಗೋಡು ವೃತ್ತ ಸಿಪಿಐ ವಿಶ್ವನಾಥ್ ಹಿರೇಗೌಡರ್, ಜೆಸ್ಕಾಂ ಅಧಿಕಾರಿ ಶೇಕ್ಷಾವಲಿ ಹಾಗೂ ಇತರರು ಹಾಜರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು