ಬೆಳಗಾವಿ :
ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ವತಿಯಿಂದ ಜೂನ್ 25 ರಂದು ಬೆಳಗ್ಗೆ 10 ಗಂಟೆಗೆ ನಗರದ ಕಾಳಿ ಅಂಬ್ರಾಯಿ ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಸಭಾಗೃಹದಲ್ಲಿ ವಿಶ್ವಕರ್ಮ ಸಮಾಜದ 2023 ನೇ ಸಾಲಿನ ಪ್ರತಿಭಾವಂತ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ. ಹುಬ್ಬಳ್ಳಿಯ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ (ಪಂಡಿತ್) ಸಾನ್ನಿಧ್ಯ ವಹಿಸುವರು. ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಬಡಿಗೇರ ಅಧ್ಯಕ್ಷತೆ ವಹಿಸುವರು. ಶಿರಸಂಗಿಯ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಉಪಾಧ್ಯಕ್ಷ ಮೋಹನ ಪತ್ತಾರ, ಧಾರವಾಡ ಪೊಲೀಸ್ ತರಬೇತಿ ಕೇಂದ್ರದ ಪೊಲೀಸ್ ನಿರೀಕ್ಷಕ ಮೌನೇಶ ದೇಶನೂರ, ಬೆಳಗಾವಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಪಿಐ ವಿನಾಯಕ ಬಡಿಗೇರ, ಮಹಾಂತೇಶ ನಗರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ನಿರ್ಮಲಾ ಬಟ್ಟಲ ಉಪಸ್ಥಿತರಿರುವರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.