Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Karnataka

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

​ಬೆಂಗಳೂರು, ಅಕ್ಟೋಬರ್ 16, (ಕರ್ನಾಟಕ ವಾರ್ತೆ) : ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ ವರದಿಗಾರಿಕೆಯನ್ನು ಉತ್ತೇಜಿಸಲು ಹಾಗೂ ಮಾಧ್ಯಮ ಸಿಬ್ಬಂದಿ ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಮೂಡಿಸಲು ಭಾರತೀಯ ಪ್ರೆಸ್ ಕೌನ್ಸಿಲ್ (PCI) ನೂತನ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ.2026ರ ಅಕ್ಟೋಬರ್ 14ರಂದು ನಡೆದ ಸಭೆಯಲ್ಲಿ ಈ ಸಮ್ಮತಿಯನ್ನು ಪಡೆದುಕೊಂಡಿದ್ದು, ಅಕ್ಟೋಬರ್ 15ರಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.  

ಮಾರ್ಗದರ್ಶಿ ಸೂತ್ರಗಳ ಪ್ರಮುಖ ಅಂಶಗಳು :
​
ಗುರುತಿಸುವಿಕೆ ಮತ್ತು ವೃತ್ತಿಪರ ನಡವಳಿಕೆ:

​ಪತ್ರಕರ್ತರು ತಮ್ಮ ಸಂಸ್ಥೆ ನೀಡಿದ ಮಾನ್ಯತೆ ಪಡೆದ ಗುರುತಿನ ಚೀಟಿಯನ್ನು (ID card) ಅಥವಾ PIB/DIP ಗುರುತಿನ ಚೀಟಿಯನ್ನು ಸ್ಪಷ್ಟವಾಗಿ ಕಾಣಿಸುವಂತೆ ಧರಿಸಿರಬೇಕು.  

​ಪೋಲೀಸರು ವಿಚಾರಿಸಿದಾಗ ಶಾಂತಿಯುತವಾಗಿ ತಮ್ಮ ಪತ್ರಕರ್ತ ಗುರುತನ್ನು ತಿಳಿಸಬೇಕು.  
​ವರದಿಗಾರಿಕೆಯಲ್ಲಿ ತಟಸ್ಥತೆ ಮತ್ತು ವೃತ್ತಿಪರತೆಯನ್ನು ಕಾಯ್ದುಕೊಳ್ಳಬೇಕು.

ಪ್ರತಿಭಟನೆಗಳಲ್ಲಿ ಭಾಗವಹಿಸುವುದು, ಪ್ರಚೋದನೆ ನೀಡುವುದು ಅಥವಾ ಪೋಲೀಸ್ ಕಾರ್ಯಾಚರಣೆಗೆ ಅಡ್ಡಿಪಡಿಸುವುದನ್ನು ಮಾಡಬಾರದು.  

ಸ್ಥಳಾವಕಾಶ ಮತ್ತು ಜನಸಂದಣಿಯಲ್ಲಿ ಸುರಕ್ಷತೆ:

​ಸಂಘರ್ಷ ನಡೆಯುವ ಸ್ಥಳಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು.  

​ಕ್ಯಾಮೆರಾ ಅಥವಾ ರೆಕಾರ್ಡಿಂಗ್ ಉಪಕರಣಗಳನ್ನು ಪೋಲೀಸ್ ಬ್ಯಾರಿಕೇಡ್‌ಗಳಿಗೆ ಅಥವಾ ವಾಹನಗಳಿಗೆ ಅಳವಡಿಸಿ ಸಂಚಾರಕ್ಕೆ ಅಡ್ಡಿಪಡಿಸಬಾರದು.  

​ಕಾಲ್ತುಳಿತ ತಪ್ಪಿಸಲು ಸಣ್ಣ ಹೆಜ್ಜೆಗಳನ್ನಿಡುತ್ತಾ ಎಚ್ಚರಿಕೆಯಿಂದ ಚಲಿಸಬೇಕು.  

ಪರಿಸ್ಥಿತಿಯ ಜಾಗೃತಿ ಮತ್ತು ನಿರ್ಗಮನ ಯೋಜನೆ:

​ಜನಸಂದಣಿಯ ನಡವಳಿಕೆ, ಗಲಾಟೆ ಹಾಗೂ ಆಸುಪಾಸಿನ ಅಪಾಯಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು.
  
​ಆಕಸ್ಮಿಕವಾಗಿ ಸ್ಥಳದಿಂದ ಹೊರಹೋಗಲು ತುರ್ತು ನಿರ್ಗಮನ ಮಾರ್ಗಗಳನ್ನು (Escape routes) ಸದಾ ಸಿದ್ಧವಾಗಿಟ್ಟುಕೊಳ್ಳಬೇಕು.
  
ವ್ಯಕ್ತಿಗತ ಸುರಕ್ಷತಾ ಕ್ರಮಗಳು ಮತ್ತು ಪ್ರಥಮ ಚಿಕಿತ್ಸೆ:

​ಪತ್ರಕರ್ತರು ತಮ್ಮ ಬಳಿ ಪ್ರಥಮ ಚಿಕಿತ್ಸಾ ಕಿಟ್, ನಿತ್ಯದ ಔಷಧಗಳು, ಕುಡಿಯುವ ನೀರು, ಪ್ರೋಟೀನ್ ಆಹಾರ, ಟಾರ್ಚ್, ಮುಖ ಒರೆಸುವ ಬಟ್ಟೆ ಮತ್ತು ಕಣ್ಣಿನ ರಕ್ಷಣಾ ಗ್ಲಾಸ್‌ಗಳನ್ನು ಒಳಗೊಂಡ 'ಎಮರ್ಜೆನ್ಸಿ ಕಿಟ್' ಇಟ್ಟುಕೊಳ್ಳಬೇಕು.  

​ಕಣ್ಣೀರು ಅನಿಲ (Tear-gas) ಅಥವಾ ಹೊಗೆಬಾಂಬ್‌ಗಳನ್ನು ಕೈಯಿಂದ ಮುಟ್ಟುವುದು ಅಥವಾ ಎಸೆಯಲು ಯತ್ನಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  

ಸಮನ್ವಯ ಮತ್ತು ಸಂಪರ್ಕ:

​ವರದಿಗಾರರು ತಮ್ಮ ಸುದ್ದಿ ಸಂಸ್ಥೆಗಳ (Newsrooms) ಜೊತೆ ನಿರಂತರ ಸಂಪರ್ಕದಲ್ಲಿರಬೇಕು.  

​ಫ್ರೀಲ್ಯಾನ್ಸ್ ಪತ್ರಕರ್ತರು ತಮ್ಮ ಕಾರ್ಯಯೋಜನೆ ಮತ್ತು ಕೆಲಸ ಮಾಡುವ ಸ್ಥಳದ ಮಾಹಿತಿಯನ್ನು ಸಂಪಾದಕರಿಗೆ ಅಥವಾ ಆಪ್ತರಿಗೆ ತಿಳಿಸಿರಬೇಕು. 
 
​ಸಹೋದ್ಯೋಗಿ ಪತ್ರಕರ್ತರ ಸುರಕ್ಷತೆಯ ಬಗ್ಗೆಯೂ ಗಮನಹರಿಸಬೇಕು.  

ನೈತಿಕ ಮತ್ತು ಜವಾಬ್ದಾರಿಯುತ ವರದಿಗಾರಿಕೆ:

​ಘಟನೆಗಳನ್ನು ನಿಖರವಾಗಿ, ವಸ್ತುನಿಷ್ಠವಾಗಿ ಮತ್ತು ನಿಷ್ಪಕ್ಷಪಾತವಾಗಿ ವರದಿ ಮಾಡಬೇಕು.  

​ಸಂತ್ರಸ್ತರು, ಅಪ್ರಾಪ್ತ ವಯಸ್ಕರು ಹಾಗೂ ಗಾಯಗೊಂಡವರ ಫೋಟೋ ಅಥವಾ ವೀಡಿಯೊ ಪ್ರಸಾರ ಮಾಡುವಾಗ ಅವರ ಖಾಸಗಿತನ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು.  

​ಪೋಲೀಸರ ರಹಸ್ಯ ಕಾರ್ಯಾಚರಣೆ, ಸಾಗುವ ಮಾರ್ಗಗಳು ಅಥವಾ ತಂತ್ರಗಳನ್ನು ರಿಯಲ್-ಟೈಮ್‌ನಲ್ಲಿ ಪ್ರಸಾರ ಮಾಡಬಾರದು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!