LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಸಂಘಟನೆಗಳ ಬೇಡಿಕೆ ಕುರಿತು ಸದನದಲ್ಲಿ ಪ್ರಸ್ತಾಪ'-ವಿಜಯೇಂದ್ರ ಭರವಸೆ

ಬೆಳಗಾವಿ:  ಇಲ್ಲಿ ವಿವಿಧ ಬೇಡಿಕೆ ಮುಂದಿಟ್ಟು ಹೋರಾಟ ಮಾಡುತ್ತಿರುವ ಸಂಘಟನೆಗಳ ಅಹವಾಲು, ಬೇಡಿಕೆ ಕುರಿತ ಮನವಿಪತ್ರಗಳನ್ನು ಸ್ವೀಕರಿಸಿದ್ದು, ಇವುಗಳ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಲು ಪ್ರಯತ್ನಿಸುವುದಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಸಮಾಜದ ಸ್ವಾಮೀಜಿಗಳು, ಮುಖಂಡರು ಬಂದಿದ್ದಾರೆ. ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ವಿಕಲಚೇತನರು, ಕಿವುಡರೂ ಬಂದಿದ್ದರು. ಅವರ ಮನವಿಯನ್ನೂ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.ಪಿಯುಸಿ ಅತಿಥಿ ಉಪನ್ಯಾಸಕರಲ್ಲಿ ನೋವಿದೆ. 20-30 ವರ್ಷಗಳಿಂದ ಸೇವೆ ಮಾಡುತ್ತಿದ್ದರೂ ಅತಿಥಿ ಉಪನ್ಯಾಸಕರಿಗೆ ಭದ್ರತೆ ಇಲ್ಲ; ಕನಿಷ್ಠ 25 ಸಾವಿರದಿಂದ 30 ಸಾವಿರ ಗೌರವಧನ ಸಿಗಬೇಕೆಂಬ ಬೇಡಿಕೆ ಅವರದೂ ಇದೆ ಎಂದು ವಿವರಿಸಿದರು.

ಕೂಡು ಒಕ್ಕಲಿಗರ ಸಮುದಾಯದ ಬೇಡಿಕೆಗಳನ್ನು ಕುರಿತ ಮನವಿಯನ್ನೂ ಸ್ವೀಕರಿಸಿದ್ದೇನೆ. ಚರ್ಮಗಾರ ಸಮಾಜದ ಮನವಿಯನ್ನೂ ಸ್ವೀಕರಿಸಿದ್ದೇನೆ. ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ಶಾಸಕರಾದ ಹರೀಶ್ ಪೂಂಜ, ಶೈಲೇಂದ್ರ ಬೆಲ್ದಾಳೆ ಅವರು ಸೇರಿ ಬಂದಿದ್ದೇವೆ. ಇವರೆಲ್ಲರ ಧ್ವನಿಯಾಗಿ ಸದನದಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಅನ್ವರ್ ಮಾಣಿಪ್ಪಾಡಿ ಅವರು ನನ್ನ ಬಗ್ಗೆ ಹೇಳಿದ್ದನ್ನು ಒಪ್ಪಿ, ಆದರೆ, ಅವರ ವರದಿ ಒಪ್ಪುವುದಿಲ್ಲ ಎಂದರೆ ಅದು ದ್ವಿಮುಖ ನೀತಿಯಲ್ಲವೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದ್ದೇನೆ ಎಂದು ನುಡಿದರು.

ನನ್ನ ಮೇಲಿನ ಆರೋಪ, ಅನ್ವರ್ ಮಾಣಿಪ್ಪಾಡಿ ವರದಿ, ಯಾರ್ಯಾರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೋ, ಅದೆಲ್ಲದರ ಸಮಗ್ರ ತನಿಖೆ ಆಗಬೇಕು. ವಕ್ಫ್‍ನಲ್ಲಿ ಲೂಟಿ ಹೊಡೆದವರು ಕಾಂಗ್ರೆಸ್ ಮುಖಂಡರು. ಸಿಬಿಐನಿಂದ ಇದೆಲ್ಲದರ ಸಮಗ್ರ ತನಿಖೆ ಆಗಬೇಕೆಂದು ನಾವು ಕೂಡ ಒತ್ತಾಯ ಮಾಡಿದ್ದೇವೆ ಎಂದು ಹೇಳಿದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಂತೆ ಕಂತೆ ಹಣ ಪತ್ತೆ ಕೇಸ್: ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿ ವಜಾಸಾವಿಗೆ ಸಂಸದ ಡಾ. ಕೆ ಸುಧಾಕರ್ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಕಾರು ಚಾಲಕ ಆತ್ಮಹತ್ಯೆಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆ - ದೆಹಲಿ ಸರ್ಕಾರದಿಂದ ಎಚ್ಚರಿಕೆಉತ್ತರಾಖಂಡ ಮೇಘಸ್ಫೋಟ - ನಾಪತ್ತೆಯಾಗಿದ್ದ ಕೇರಳ ಮೂಲದ 28 ಪ್ರವಾಸಿಗರ ತಂಡ ಸುರಕ್ಷಿತಮೃತಪಟ್ಟ ತಾಯಿ ಖಾತೆಯಲ್ಲಿದ್ದ ಹಣ ಕಂಡು ಮೂರ್ಛೆ ಹೋದ ಮಗ!! ಶಾರುಖ್ ಖಾನ್ ಆಸ್ತಿಗೂ ಮೀರಿದ ಮೊತ್ತಕಂದಕಕ್ಕೆ ಉರುಳಿದ ಸಿಆರ್‌ಪಿಎಫ್ ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿದ್ದ ವಾಹನ; ಮೂವರು ಸಾವುಧರ್ಮಸ್ಥಳ: ಯುವತಿ ನೇಣು ಬಿಗಿದು ಆತ್ಮಹತ್ಯೆ..!!'ಭಾರತ ಎಂದಿಗೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ'- ಟ್ರಂಪ್‌ಗೆ ಮೋದಿ ತಿರುಗೇಟುಸ್ಟೇಟ್‌ಬ್ಯಾಂಕ್ ಆಫ್‌ ಇಂಡಿಯಾದಲ್ಲಿ 5180 ಹುದ್ದೆ- ಈಗಲೇ ಅರ್ಜಿ ಸಲ್ಲಿಸಿಭಯೋತ್ಪಾದಕ ದಾಳಿಯಿಂದ ಸಾವು, ಹಸಿವು ಹೆಚ್ಚುತ್ತಿದ್ದಂತೆ ಗಾಜಾದಲ್ಲಿ ತೀವ್ರ ರಕ್ತದ ಕೊರತೆ