LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

PSI ಪರಶುರಾಮ್ ಆತ್ಮಹತ್ಯೆ ಕೇಸ್, ಗೃಹ ಸಚಿವರನ್ನ ಕದ್ದು ಮುಚ್ಚಿ ಭೇಟಿಯಾದ ಶಾಸಕ ಚನ್ನಾರೆಡ್ಡಿ..!

ಬೆಂಗಳೂರು : ಯಾದಗಿರಿ PSI ಪರುಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ರನ್ನ ಶಾಸಕ ಚನ್ನಾರೆಡ್ಡಿ ಗೌಪ್ಯವಾಗಿ ಭೇಟಿಯಾಗಿದ್ದಾರೆ‌. ಸದಾಶಿವನಗರದ ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ಗೃಹ ಸಚಿವರ ಭೇಟಿ ನಂತರ ಮಾಧ್ಯಮಗಳ ಕಣ್ಣು ತಪ್ಪಿಸಿ ಹಿಂಬದಿ ಗೇಟ್ ನಿಂದ ಪರಾರಿಯಾಗಿದ್ದಾರೆ. ಮುಂಬದಿ ಗೇಟ್ ನಲ್ಲಿ ಮಾಧ್ಯಮಗಳು ಪ್ರಶ್ನೆ ಮಾಡುತ್ತಾರೆ ಎಂದು ಹಿಂಬದಿಯ ಗೇಟ್ ನಿಂದ ತೆರಳಿದ್ದಾರೆ ಎನ್ನಲಾಗಿದೆ. PSI ಪರುಶುರಾಮ್ ಸಾವು ಪ್ರಕರಣದಲ್ಲಿ ಶಾಸಕ ಚನ್ನಾರೆಡ್ಡಿ ಮತ್ತು ಅವರ ಪುತ್ರನ ವಿರುದ್ಧ ಆರೋಪಗಳು ಕೇಳಿ ಬಂದಿತ್ತು. ಅದೂ ಅಲ್ಲದೇ ಶಾಸಕರ ವಿರುದ್ಧ ಸ್ಪೀಕರ್ ಯುಟಿ ಖಾದರ್ ಗೆ ಸಾಮಾಜಿಕ ಕಾರ್ಯಕರ್ತ ಪತ್ರ ಸಹ ಬರೆದಿದ್ದರು‌‌.

ಇದೆಲ್ಲದರ ನಡುವೆ ಇಂದು ಬೆಳಗ್ಗೆ ಕದ್ದು ಮುಚ್ಚಿ ಗೃಹ ಸಚಿವರನ್ನ ಭೇಟಿಯಾಗಿರೋದು ಕುತೂಹಲ ಮೂಡಿಸಿದೆ. ಇನ್ನೂ ಶಾಸಕ ಚನ್ನಾರೆಡ್ಡಿ ತಮ್ಮನ್ನ ಭೇಟಿಯಾಗಿರೋದಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್ ಅವರು ನನ್ನ ಹುಟ್ಟು ಹಬ್ಬದ ದಿನ ಸಿಕ್ಕಿರಲಿಲ್ಲ ಹೀಗಾಗಿ ನನ್ನ ಭೇಟಿಗೆ ಬಂದಿದ್ದರು ಅಷ್ಟೇ. PSI ಪರುಶುರಾಮ್ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಅದರ ಬಗ್ಗೆ ಯಾವುದೇ ಚರ್ಚೆ ಇವತ್ತು ನಡೆದಿಲ್ಲ ಎಂದು ಸಬೂಬು ನೀಡಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST