LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ:-

ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ:-

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರಜ್ಯೋತಿಷ್ಯದ ಪ್ರತಿಬಿಂಬ 9945701882

ನಾರಾಯಣಬಲಿ

೧. ಉದ್ದೇಶ : ದುರ್ಮರಣ ಹೊಂದಿದ ಅಥವಾ ಆತ್ಮಹತ್ಯೆ ಮಾಡಿದ ಜೀವದ ಕ್ರಿಯಾಕರ್ಮಗಳು ಆಗದೇ ಇರುವುದರಿಂದ ಪ್ರೇತತ್ವವು ಮುಗಿದು ಪಿತೃತ್ವವು ಸಿಗದೇ ಇದ್ದುದರಿಂದ ಅದರ ಲಿಂಗದೇಹವು ಹಾಗೆಯೇ ಅಲೆದಾಡುತ್ತಿರುತ್ತದೆ. ಇಂತಹ ಲಿಂಗದೇಹವು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ. ಅದೇ ರೀತಿ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆ ಕೊಡುತ್ತದೆ. ಇಂತಹ ಲಿಂಗದೇಹಕ್ಕೆ ಗತಿಯನ್ನು ನೀಡಲು ನಾರಾಯಣಬಲಿ ವಿಧಿಯನ್ನು ಮಾಡಬೇಕಾಗುತ್ತದೆ.
೨. ವಿಧಿ
ಅ. ವಿಧಿಯನ್ನು ಮಾಡಲು ಯೋಗ್ಯ ಸಮಯ: ನಾರಾಯಣಬಲಿಯ ವಿಧಿಯನ್ನು ಮಾಡಲು ಯಾವುದೇ ತಿಂಗಳ ಶುಕ್ಲ ಏಕಾದಶಿ ಅಥವಾ ದ್ವಾದಶಿಯು ಯೋಗ್ಯವಾಗಿರುತ್ತದೆ. ಏಕಾದಶಿಯಂದು ಅಧಿವಾಸ (ದೇವರ ಸ್ಥಾಪನೆ) ಮಾಡಿ ದ್ವಾದಶಿಯಂದು ಶ್ರಾದ್ಧವನ್ನು ಮಾಡಬೇಕು (ಇತ್ತೀಚೆಗೆ ಹೆಚ್ಚಿನ ಜನರು ಒಂದೇ ದಿನ ವಿಧಿಯನ್ನು ಮಾಡುತ್ತಾರೆ). ಸಂತತಿ ಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದರೆ ದಂಪತಿಗಳು ಸ್ವತಃ ಈ ವಿಧಿಯನ್ನು ಮಾಡಬೇಕು. ಪುತ್ರಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದಲ್ಲ್ಲಿ ಶ್ರವಣ ನಕ್ಷತ್ರ, ಪಂಚಮಿ ಅಥವಾ ಪುತ್ರದಾ ಏಕಾದಶಿ ಇವುಗಳಲ್ಲಿನ ಯಾವುದಾದರೊಂದು ತಿಥಿಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ.
ಆ. ವಿಧಿ ಮಾಡಲು ಯೋಗ್ಯ ಸ್ಥಳ: ನದಿತೀರದಂತಹ ಪವಿತ್ರ ಸ್ಥಳದಲ್ಲಿ ಈ ವಿಧಿಯನ್ನು ಮಾಡಬೇಕು.
ಇ. ಪದ್ಧತಿ
ಮೊದಲನೆಯ ದಿನ : ಮೊದಲು ತೀರ್ಥದಲ್ಲಿ ಸ್ನಾನ ಮಾಡಿ ನಾರಾಯಣಬಲಿಯ ಸಂಕಲ್ಪವನ್ನು ಮಾಡಬೇಕು. ಎರಡು ಕಲಶಗಳ ಮೇಲೆ ಶ್ರೀವಿಷ್ಣು ಮತ್ತು ವೈವಸ್ತವ ಯಮ ಇವರ ಸುವರ್ಣಮೂರ್ತಿಗಳನ್ನು ಸ್ಥಾಪಿಸಿ ಅವುಗಳಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಅನಂತರ ಆ ಕಲಶಗಳ ಪೂರ್ವಕ್ಕೆ ದರ್ಭೆಯಿಂದ ಒಂದು ರೇಖೆಯನ್ನು ಎಳೆದು ದಕ್ಷಿಣದ ಕಡೆಗೆ ದರ್ಭೆಗಳನ್ನು (ಕುಶ) ಹರಡಬೇಕು. ಅದರ ಮೇಲೆ ‘ಶುಂಧಂತಾಂ ವಿಷ್ಣುರೂಪೀ ಪ್ರೇತಃ’ ಈ ಮಂತ್ರದಿಂದ ಹತ್ತು ಬಾರಿ ನೀರನ್ನು ಬಿಡಬೇಕು.
ಅನಂತರ ದಕ್ಷಿಣಕ್ಕೆ ಮುಖಮಾಡಿ ಅಪಸವ್ಯದಿಂದ ವಿಷ್ಣುರೂಪೀ ಪ್ರೇತದ ಧ್ಯಾನವನ್ನು ಮಾಡಬೇಕು. ಆ ಹರಡಿರುವ ದರ್ಭೆಗಳ ಮೇಲೆ ಜೇನುತುಪ್ಪ, ತುಪ್ಪ ಮತ್ತು ಎಳ್ಳುಗಳಿಂದ ತಯಾರಿಸಿದ ಹತ್ತು ಪಿಂಡಗಳನ್ನು ‘ಕಶ್ಯಪಗೋತ್ರ… ಇವರ ಪ್ರೇತ ವಿಷ್ಣುದೈವತ ಅಯಂ ತೆ ಪಿಂಡಃ’ ಎಂದು ಹೇಳಿಕೊಡಬೇಕು. ಪಿಂಡಗಳನ್ನು ಗಂಧಾದಿ ಉಪಚಾರಗಳಿಂದ ಪೂಜಿಸಿ ಅನಂತರ ಅವುಗಳನ್ನು ನದಿಯಲ್ಲಿ ಅಥವಾ ಜಲಾಶಯದಲ್ಲಿ ವಿಸರ್ಜಿಸಬೇಕು. ಇದು ಹಿಂದಿನ ದಿನದ ವಿಧಿಯಾಯಿತು.


ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರಜ್ಯೋತಿಷ್ಯದ ಪ್ರತಿಬಿಂಬ 9945701882

ಎರಡನೆಯ ದಿನ: ಮಧ್ಯಾಹ್ನದ ಸಮಯದಲ್ಲಿ ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ಅನಂತರ ೧, ೩ ಅಥವಾ ೫ ಹೀಗೆ ಬೆಸ ಸಂಖ್ಯೆಯಲ್ಲಿ ಬ್ರಾಹ್ಮಣರನ್ನು ಆಮಂತ್ರಿಸಿ ಏಕೋದ್ದಿಷ್ಟ ವಿಧಿಯಿಂದ ಆ ವಿಷ್ಣುರೂಪೀ ಪ್ರೇತದ ಶ್ರಾದ್ಧವನ್ನು ಮಾಡಬೇಕು. ಈ ಶ್ರಾದ್ಧವನ್ನು ಬ್ರಾಹ್ಮಣರ ಪಾದಪ್ರಕ್ಷಾಲನದಿಂದ ತೃಪ್ತಿಪ್ರಶ್ನೆಯ ತನಕ ಮಂತ್ರರಹಿತವಾಗಿ ಮಾಡಬೇಕು. ಶ್ರೀವಿಷ್ಣು, ಬ್ರಹ್ಮಾ, ಶಿವ ಮತ್ತು ಸಪರಿವಾರ ಯಮ ಇವರಿಗೆ ನಾಮಮಂತ್ರಗಳಿಂದ ನಾಲ್ಕು ಪಿಂಡಗಳನ್ನು ಕೊಡಬೇಕು. ವಿಷ್ಣುರೂಪೀ ಪ್ರೇತಕ್ಕಾಗಿ ಐದನೆಯ ಪಿಂಡವನ್ನು ಕೊಡಬೇಕು. ಪಿಂಡಪೂಜೆಯನ್ನು ಮಾಡಿ ಅವುಗಳ ವಿಸರ್ಜನೆಯಾದ ನಂತರ ಬ್ರಾಹ್ಮಣರಿಗೆ ದಕ್ಷಿಣೆಯನ್ನು ಕೊಡಬೇಕು. ಓರ್ವ ಬ್ರಾಹ್ಮಣರಿಗೆ ವಸ್ತ್ರಾಲಂಕಾರ, ಹಸು ಮತ್ತು ಚಿನ್ನ ಈ ವಸ್ತುಗಳನ್ನು ಕೊಡಬೇಕು. ಅನಂತರ ಪ್ರೇತಕ್ಕೆ ತಿಲಾಂಜಲಿ ನೀಡುವ ಬಗ್ಗೆ ಬ್ರಾಹ್ಮಣರಿಗೆ ಪ್ರಾರ್ಥನೆಯನ್ನು ಮಾಡಬೇಕು. ಬ್ರಾಹ್ಮಣರು ದರ್ಭೆ, ಎಳ್ಳು ಮತ್ತು ತುಳಸೀದಳಗಳಿಂದ ಭರಿತವಾದ ನೀರನ್ನು ಬೊಗಸೆಯಲ್ಲಿ ತೆಗೆದುಕೊಂಡು ಅದನ್ನು ಪ್ರೇತಕ್ಕೆ ನೀಡಬೇಕು. ಅನಂತರ ಶ್ರಾದ್ಧಕರ್ತನು ಸ್ನಾನ ಮಾಡಿ ಭೋಜನ ಮಾಡಬೇಕು. ಈ ವಿಧಿಯಿಂದ ಪ್ರೇತಾತ್ಮಕ್ಕೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
ಸ್ಮೃತಿಗ್ರಂಥದಲ್ಲಿ ನಾರಾಯಣಬಲಿ ಮತ್ತು ನಾಗಬಲಿ ಇವುಗಳನ್ನು ಒಂದೇ ಉದ್ದೇಶಕ್ಕಾಗಿ ಹೇಳಿರುವುದರಿಂದ ಎರಡೂ ವಿಧಿಗಳನ್ನು ಜೊತೆಯಲ್ಲಿ ಮಾಡುವ ಪರಂಪರೆಯಿದೆ. ನಾರಾಯಣ-ನಾಗಬಲಿ ಈ ಜೋಡಿಹೆಸರು ಇದೇ ಕಾರಣದಿಂದಾಗಿ ರೂಢಿಗೆ ಬಂದಿದೆ.
ನಾಗಬಲಿ
೧. ಉದ್ದೇಶ : ನಮ್ಮ ಮನೆತನದಲ್ಲಿ ಹಿಂದೆ ಯಾರಾದರೊಬ್ಬ ಪೂರ್ವಜರಿಂದ ನಾಗನ (ನಾಗರಹಾವಿನ) ಹತ್ಯೆಯಾಗಿದ್ದಲ್ಲಿ ಆ ನಾಗನಿಗೆ ಗತಿ ಸಿಗದೇ ಇದ್ದುದರಿಂದ ಅದು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ, ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆಗಳನ್ನು ಕೊಡುತ್ತದೆ. ಈ ದೋಷದ ನಿವಾರಣೆಗಾಗಿ ಈ ವಿಧಿಯನ್ನು ಮಾಡುತ್ತಾರೆ.
೨. ವಿಧಿ : ಸಂತತಿಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದರೆ ಆ ದಂಪತಿಗಳು ಸ್ವತಃ ಈ ವಿಧಿಯನ್ನು ಮಾಡಬೇಕು. ಪುತ್ರಪ್ರಾಪ್ತಿಗಾಗಿ ಮಾಡಬೇಕಾಗಿದ್ದಲ್ಲಿ ಶ್ರವಣ ನಕ್ಷತ್ರ, ಪಂಚಮಿ ಅಥವಾ ಪುತ್ರದಾ ಏಕಾದಶಿ ಇವುಗಳಲ್ಲಿನ ಯಾವುದಾದರೊಂದು ತಿಥಿಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ.’

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಧರ್ಮಶಾಸ್ತ್ರಜ್ಯೋತಿಷ್ಯದ ಪ್ರತಿಬಿಂಬ
9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026