LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಬಾಹುಬಲಿ 2' ದಾಖಲೆ ಉಡೀಸ್ ಮಾಡಲು ತಯಾರಾದ 'ಪುಷ್ಪ 2'

ಹೈದರಾಬಾದ್ : ಡಿಸೆಂಬರ್ 5 ರಂದು ಬಿಡುಗಡೆಯಾದ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಈ ಚಿತ್ರ 1719.5 ಕೋಟಿ ರೂ. ಗಳಿಸಿದೆ. ಈ ಮೂಲಕ 'ಪುಷ್ಪ 2' ಸಿನಿಮಾ 'ಬಾಹುಬಲಿ 2' ದಾಖಲೆಯನ್ನು ಉಡೀಸ್ ಮಾಡಲು ತಯಾರಾಗಿದೆ.

ನಿತೀಶ್ ತಿವಾರಿ ನಿರ್ದೇಶನದ ಆಮಿರ್ ಖಾನ್ ನಟನೆಯ 'ದಂಗಲ್' ಸಿನಿಮಾವು ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿತ್ತು. ಈ ಚಿತ್ರ ವಿಶ್ವದಾದ್ಯಂತ 2024.6 ಕೋಟಿ ರೂ. ಸಂಗ್ರಹಿಸಿತ್ತು. ಆದರೆ ಈ ದಾಖಲೆಯನ್ನು ಇದುವರೆಗೂ ಯಾವ ಸಿನಿಮಾದಿಂದ ಮುರಿಯಲಾಗಿಲ್ಲ.

ಇನ್ನು ದಂಗಲ್ ಸಿನಿಮಾ ಬಳಿಕ 'ಬಾಹುಬಲಿ 2' ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಎರಡನೇ ಸ್ಥಾನದಲ್ಲಿದೆ. 'ಬಾಹುಬಲಿ 2' ಚಿತ್ರ ವಿಶ್ವದಾದ್ಯಂತ ರೂ. 1742.3 ಕೋಟಿ ಗಳಿಸಿತ್ತು. ಇದೀಗ 'ಪುಷ್ಪ 2' ಸಿನಿಮಾ ಈ ದಾಖಲೆ ಮುರಿಯಲು ರೆಡಿಯಾಗಿದೆ.

'ಪುಷ್ಪ 2' ಈಗ ಮೂರನೇ ಸ್ಥಾನದಲ್ಲಿದೆ. ಈ ಚಿತ್ರ ಈಗಾಗಲೇ ರೂ. 1719.5 ಕೋಟಿ ಸಂಗ್ರಹಿಸಿರುವುದರಿಂದ ಶೀಘ್ರದಲ್ಲೇ 'ಬಾಹುಬಲಿ 2' ದಾಖಲೆಯನ್ನು ಮುರಿಯಲಿದೆ.

ನಾಲ್ಕನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾ ಇದ್ದು, ಈ ಚಿತ್ರವು ವಿಶ್ವಾದ್ಯಂತ 1250.9 ಕೋಟಿ ರೂ. ಗಳಿಸಿತ್ತು. ಈ ಸಿನಿಮಾದ ಬಳಿಕ ಯಶ್ ನಟನೆಯ 'ಕೆಜಿಎಫ್ 2' ಸಿನಿಮಾವಿದ್ದು, ಈ ಚಿತ್ರ 1176.5 ಕೋಟಿ ರೂ. ಸಂಗ್ರಹಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ ..! 30-07-2025.!ನಿಮಗೆ ಕೆಲಸದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ವಿಘ್ನಗಳು, ದರಿದ್ರ ತನ ಕಂಡು ಬರುತ್ತದೆಯೇ?ವಚನ: -ಅಮುಗೆ ರಾಯಮ್ಮ .!ಧರ್ಮಸ್ಥಳ ಪ್ರಕರಣ: ಮಣ್ಣು ಅಗೆದಂತೆ ನೀರು ತುಂಬುತ್ತಿದ್ದು, ಜೆಸಿಬಿ ಬಳಸಿ ಅಗೆಯಲು ಮುಂದಾದ ಎಸ್ಐಟಿ'ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕ್‌ಗೆ ಆಗದಿದ್ರೆ, ಸಹಾಯ ಮಾಡಲು ನಾವು ಸಿದ್ಧ'- ರಾಜನಾಥ್ ಸಿಂಗ್ಜಿಲ್ಲೆಯಲ್ಲಿ 1485 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ರೈತರಿಗೆ ಆತಂಕ ಬೇಡ: ಬಿ.ಮಂಜುನಾಥ.!ವಿದ್ಯಾರ್ಥಿ ವೇತನ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ: ನಟ ಶಿವರಾಜ್ ಕುಮಾರ್ಮಳೆ ಹಾನಿ ಕುಟುಂಬಸ್ಥರ ನೆರವಿಗೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ವೈಯಕ್ತಿವಾಗಿ ಆರ್ಥಿಕ ನೆರವು.!ರೈತ ವಿರೋಧಿ ಕಾಂಗ್ರಸ್ ಸರ್ಕಾರ: ಡಾ.ವಿನಯ ಕುಮಾರ್ ಆರೋಪ.!