E-PAPER
20 Nov 2026, 12:17:43 AM|
Gold₹13023/gGold24K ₹13,023/g - 22K ₹11,927/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಜ್ಯದಲ್ಲಿ ಹೊಸದಾಗಿ ‘ಪ್ರಜಾಸೇವಾ ಆಯುಕ್ತಾಲಯ’ ಸ್ಥಾಪನೆಗೆ ಸರಕಾರದ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಹೊಸದಾಗಿ ‘ಪ್ರಜಾಸೇವಾ ಆಯುಕ್ತಾಲಯ’ ಸ್ಥಾಪಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಆಯುಕ್ತರ ಹುದ್ದೆ ಮರುಪದನಾಮೀಕರಣ :

ಈವರೆಗೆ ಇದ್ದ ‘ಅಪರ ನಿರ್ದೇಶಕರು, ಸಕಾಲ ಮಿಷನ್’ ಹುದ್ದೆಯನ್ನು ಇನ್ನು ಮುಂದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ ಎಂದು ಮರುಪದನಾಮೀಕರಣ ಮಾಡಲಾಗಿದೆ. ಇವರು ನೂತನ ಪ್ರಜಾಸೇವಾ ಆಯುಕ್ತಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಶೇಷ ಆಯುಕ್ತರ ಹುದ್ದೆ ಸೃಜನೆ :

ಆಯುಕ್ತಾಲಯದ ಕಾರ್ಯಭಾರವನ್ನು ಸುಗಮವಾಗಿ ನಿರ್ವಹಿಸುವ ಉದ್ದೇಶದಿಂದ ‘ವಿಶೇಷ ಆಯುಕ್ತರು, ಪ್ರಜಾಸೇವಾ ಆಯುಕ್ತಾಲಯ’ ಎಂಬ ಹೊಸ ಹುದ್ದೆಯನ್ನು ಸೃಜಿಸಲಾಗಿದೆ. ಈ ಹುದ್ದೆಗೆ ಕಿರಿಯ ಶ್ರೇಣಿಯ ಐಎಎಸ್ ಅಥವಾ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಕೆಎಎಸ್ ಹುದ್ದೆಗಳ ಪೈಕಿ ಯೋಜನಾ ನಿರ್ದೇಶಕರು–ಇ-ಕಚೇರಿ, ಐಪಿಜಿಆರ್‌ಎಸ್, ಸಿಸಿಎಂಎಸ್ ಹಾಗೂ ಆಡಳಿತಾಧಿಕಾರಿ–ಸಕಾಲ ಹುದ್ದೆಗಳಲ್ಲಿ ಎರಡು ಹುದ್ದೆಗಳನ್ನು ಪ್ರಜಾಸೇವಾ ಇಲಾಖೆಯಲ್ಲಿಯೇ ಉಳಿಸಿಕೊಂಡು, ಉಳಿದ ಎರಡು ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಗೆ ವರ್ಗಾಯಿಸಲಾಗಿದೆ.

ಪ್ರಜಾಸೇವಾ ಇಲಾಖೆಯ ಆಡಳಿತಾತ್ಮಕ ಬಲವರ್ಧನೆಗಾಗಿ ಹೆಚ್ಚುವರಿಯಾಗಿ ಎರಡು ಕಿರಿಯ ಶ್ರೇಣಿಯ ಕೆಎಎಸ್ ಹುದ್ದೆಗಳನ್ನು ಹೊಸದಾಗಿ ಸೃಜಿಸಲಾಗಿದೆ.

ಪ್ರಮುಖ ಸೇವೆಗಳ ನಿರ್ವಹಣೆ :

2026ರ ಜೂ.24ರಂದು ಸ್ಥಾಪನೆಯಾದ ಪ್ರಜಾಸೇವಾ ಇಲಾಖೆಯು ಸಕಾಲ ಸೇವೆಗಳ ಖಾತರಿಯ ವಿತರಣೆ, ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್), ಮಾಹಿತಿ ಹಕ್ಕು (ಆರ್‌ಟಿಐ) ಆನ್‌ಲೈನ್ ವ್ಯವಸ್ಥೆ, ಸರ್ಕಾರಿ ಪ್ರಕ್ರಿಯೆಗಳ ಮರು ವಿನ್ಯಾಸ (ಬಿಸಿನೆಸ್ ಪ್ರೊಸೆಸ್ ರೀ-ಎಂಜಿನಿಯರಿಂಗ್) ಹಾಗೂ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನದ ಜವಾಬ್ದಾರಿ ನಿರ್ವಹಿಸಲಿದೆ.

ಇದರೊಂದಿಗೆ ಸಚಿವಾಲಯ ಕಚೇರಿ ಕೈಪಿಡಿ, ಇ-ಕಚೇರಿ, ನ್ಯಾಯಾಲಯ ಪ್ರಕರಣಗಳ ಮೇಲ್ವಿಚಾರಣಾ ವ್ಯವಸ್ಥೆ (ಸಿಸಿಎಂಎಸ್), ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ (ಇಡಿಸಿಎಸ್), ತರಬೇತಿ ಹಾಗೂ ಪ್ರಜಾಸೇವಾ ಅಭಿಯಾನದಂತಹ ಪ್ರಮುಖ ನಾಗರಿಕ ಸೇವೆಗಳು ಮತ್ತು ಆಡಳಿತ ಸುಧಾರಣಾ ಕಾರ್ಯಗಳನ್ನು ಇಲಾಖೆ ನಿರ್ವಹಿಸಲಿದೆ.

ನೂತನ ಆಯುಕ್ತಾಲಯದ ಸ್ಥಾಪನೆಯಿಂದ ರಾಜ್ಯದ ಜನತೆಗೆ ಸರ್ಕಾರಿ ಸೇವೆಗಳು ಮತ್ತಷ್ಟು ಪಾರದರ್ಶಕವಾಗಿ ಹಾಗೂ ಕಾಲಮಿತಿಯೊಳಗೆ ಲಭ್ಯವಾಗಲಿವೆ ಎಂದು ಸರ್ಕಾರ ಆಶಿಸಿದೆ.

ಮುಖ್ಯಮಂತ್ರಿಯವರ ಅನುಮೋದನೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಹನ ದಟ್ಟಣೆ ನಿಯಂತ್ರಣಕ್ಕೆ ʼನೂತನ ರಸ್ತೆ ಗ್ರಿಡ್ ವ್ಯವಸ್ಥೆʼ : ಸಿಎಂ ಡಿ.ಕೆ.ಶಿವಕುಮಾರ್ʼಬಸವ ಮಂಟಪ’ ಕೃತಿ ವಿವಾದ; ಲೇಖಕ ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಎಫ್‍ಐಆರ್ ದಾಖಲುಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆ ಪ್ರಶ್ನಿಸಿ ಗಿರೀಶ್ ಮಟ್ಟಣ್ಣವರ್ ಸಲ್ಲಿಸಿದ್ದ ಅರ್ಜಿ ವಜಾ2,321 ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರು ರಸ್ತೆಗಳ ವೈಟ್ ಟ್ಯಾಪಿಂಗ್ : ಸಂಪುಟ ತೀರ್ಮಾನ‘ಬಸವ ಮಂಟಪ’ ಕೃತಿ ಮುಟ್ಟುಗೋಲು; ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ : ಸಂಪುಟ ಸಭೆ ನಿರ್ಣಯಸಿಸಿಬಿಗೆ ರೌಡಿ ನಿಗ್ರಹ ದಳ ಎಂದು ಮರುನಾಮಕರಣಎಸಿ ರೂಂನಲ್ಲಿದ್ದ ಹಲವು ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಿ ರಾಹುಲ್ ಗಾಂಧಿ ಬೀದಿಗೆ ತಂದಿದ್ದಾರೆ : ವಿನಯ್ ಕುಮಾರ್ ಸೊರಕೆತಾ.ಪಂ, ಜಿ.ಪಂ ಕ್ಷೇತ್ರ ಮೀಸಲು ಅಂತಿಮ ಅಧಿಸೂಚನೆ ಶುಕ್ರವಾರ ಪ್ರಕಟ : ಸಚಿವ ಈಶ್ವರ್ ಖಂಡ್ರೆʼSIRʼ ಅಂತಿಮ ಪಟ್ಟಿ ತಿರಸ್ಕರಿಸಿ ಸಾಮಾಜಿಕ ಪರಿಶೋಧನೆ ನಡೆಸಿ : ಎಸ್‍ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟಬಸವ ಮಂಟಪ ಕೃತಿ ಮುಟ್ಟುಗೋಲಿಗೆ ಸಂಪುಟ ಸಮ್ಮತಿ : ಸಚಿವ ಈಶ್ವರ್‌ ಖಂಡ್ರೆ