LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜಾಜಿನಗರ ಕಾಮಾಕ್ಷಿಪಾಳ್ಯ:ಕಿರು ಅರಣ್ಯ ಮತ್ತು ಮಕ್ಕಳ ಉದ್ಯಾನವನ ಲೋಕಾರ್ಪಣೆ

ಬೆಂಗಳೂರು: ಒಬ್ಬ ಮನುಷ್ಯರಿಗೆ 7ಮರಗಳು  ಇರಬೇಕು, ಮರಗಿಂದ ಉತ್ತಮ ಅಮ್ಲಜನಕ ಸಿಗುತ್ತದೆ, ಸ್ಥಳೀಯ  ಜನರ ಆಶಯದಂತೆ ಕಿರು ಅರಣ್ಯ ಸ್ಥಾಪನೆ ಮಾಡಲಾಗಿದೆ ಎಂದು ಶಾಸಕ ಎಸ್.ಸುರೇಶ್ ಕುಮಾರ್ ತಿಳಿಸಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಕಾಮಾಕ್ಷ್ಮಿಪಾಳ್ಯ, ಕೆ.ಹೆಚ್.ಬಿ. ಕಾಲೋನಿಯಲ್ಲಿ ನೂತನವಾಗಿ ಅಭಿವೃದ್ದಿಗೊಂಡಿರುವ ಕಿರು ಅರಣ್ಯ ಉದ್ಯಾನವನ ಮತ್ತು ಮಕ್ಕಳ ಉದ್ಯಾನವನ ದೀಪ ಬೆಳಗಿಸಿ ಲೋಕಾರ್ಪಣೆ ಮಾಡಿ ಮಾತನಾಡಿ,.ಇದು ಸಾರ್ವಜನಿಕರ ಸ್ವತ್ತು.ಮೈದಾನ ಅಥವಾ ಉದ್ಯಾನವನ ಮಾಡೋಣ ಎಂದು ನಿರ್ಧಾರ ಮಾಡಲಾಯಿತು ಅದರೆ ಸ್ಥಳೀಯ ಜನರ ಒತ್ತಾಯದ ಮೇರೆಗೆ ಉದ್ಯಾನವನ ಮಾಡಲಾಗಿದೆ.ಈ ಪಾರ್ಕ್ ನಲ್ಲಿ 50ಕ್ಕೂ ಹೆಚ್ಚು ಮರಗಳನ್ನು ಬೆಳಲಾಗಿದೆ ಇದರಿಂದ ಅಮ್ಲಜನಕ ಹೇರಳವಾಗಿ ಸಿಗಲಿದೆ ಎಂದರು.



ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್* ರವರು ಮಾತನಾಡಿ, ಸಾರ್ವಜನಿಕರು ಒಂದು ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರೆ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಇದ್ದಾಗ ಮಾತ್ರ. ಇಂತಹ ಜಾಗ ಬೇರೆ ಕಡೆ ಇದ್ದಿದ್ದರೆ, ಭೂಕಬಳಿಕೆ ಮಾಡುತ್ತಿದ್ದರು , ಅದರೆ ಶಾಸಕ ಸುರೇಶ್ ಕುಮಾರ್ ರವರ ಇರುವುದರಿಂದ ಈ ಜಾಗ ಉಳಿದು , ಸುಂದರವಾದ ಉದ್ಯಾನ ನಿರ್ಮಾಣ ಮಾಡಿದ್ದಾರೆ.

ಉದ್ಯಾನವನದಲ್ಲಿ ಹ್ಯಾಂಪಿ ಥೀಯಟರ್, ರೇಡಿಯೊ ಮತ್ತು ಸಿ.ಸಿ.ಕ್ಯಾಮರ, ವಿಶ್ರಾಂತಿ ತಾಣ ಮಾಡಿ ಪರಿಸರ ಕಾಳಜಿಯಿಂದ ಉದ್ಯಾನವನ ನಿರ್ಮಾಣವಾಗಿದೆ ಶಾಸಕ ಸುರೇಶ್ ಕುಮಾರ್ ರವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.



ಸುತ್ತಮುತ್ತಲು ಪ್ರದೇಶದಲ್ಲಿ ಉತ್ತಮ ಅಮ್ಲಜನಕ ಸಿಗಲಿದೆ, ಆರೋಗ್ಯ ವೃದ್ದಿಸಲಿದೆ. ಈ ಉದ್ಯಾನವನಕ್ಕೆ ನಿಸರ್ಗಧಾಮ ಎಂದು ನಾಮಕರಣ ಮಾಡಲಾಗಿದೆ, ಜನರಿಗೆ ನೆಮ್ಮದ್ದಿ, ಶಾಂತಿ ಮತ್ತು ಆರೋಗ್ಯವೃದ್ದಿಸುವ ಉದ್ಯಾನವನವಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಮಾಜಿ ಉಪಮಹಾಪೌರರಾದ ರಂಗಣ್ಣರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಶ್ರೀಮತಿ ಪ್ರತಿಮಾ, ಸಾವಿತ್ರಿ ಸುರೇಶ್ ಕುಮಾರ್, ಮಾಜಿ ಪಾಲಿಕೆ ಸದಸ್ಯ ಎಂ.ಮುನಿರಾಜು, ಮಂಡಲ ಅಧ್ಯಕ್ಷ ಸುದರ್ಶನ್, ರಾಘವೇಂದ್ರರಾವ್ ಗಿರೀಶ್ ಗೌಡ, ಅನಿಲ್ ರಂಗಣ್ಣ , ಮರಿಯಪ್ಪ, ಜೋಗಯ್ಯ, ಶಿವಾನಂದ್ , ವಿರುಪಾಕ್ಷಯ್ಯ, ಹನುಮಯ್ಯ, ಶ್ರೀಮತಿ ವೇದ ಸಚ್ಚಿದಾನಂದ, ಆರ್.ಗಿರೀಶ್ ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ