LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ, ನಾಳೆ ಪ್ರದಾನ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 70 ಗಣ್ಯರಿಗೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. 70ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ.

ಇದೇ ಮೊದಲ‌ ಬಾರಿಗೆ ಯಾವುದೇ ಅರ್ಜಿ ಆಹ್ವಾನಿಸದೆ 70 ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಈ ಪೈಕಿ‌ ಕೆಲವರು ಸ್ವಯಂ ಮನವಿ ನೀಡಿದ್ದರು. ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಂಸ್ಕೃತಿ ಸಚಿವ ಶಿಚಾರಜ ತಂಗಡಗಿ ಹೇಳಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸು ಮಾಡಿದವರನ್ನು ಬಹುತೇಕ‌ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೊದಲೇ ನಿರ್ಧರಿಸಿದಂತೆ‌ ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ.

ಈ ಬಾರಿ 12 ಮಹಿಳೆಯರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನು ಒಳಗೊಂಡಿದೆ. ನವೆಂಬರ್ 1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಾಹಿತ್ಯ ಪ್ರೊ. ರಾಜೇಂದ್ರ ಚೆನ್ನಿ, ಶಿವಮೊಗ್ಗ, ತುಂಬಾಡಿ ರಾಮಯ್ಯ, ತುಮಕೂರು, ಪ್ರೊ. ಆರ್. ಸುನಂದಮ್ಮ, ಚಿಕ್ಕಬಳ್ಳಾಪುರ ಡಾ.ಎಚ್.ಎಲ್ ಪುಷ್ಪ, ತುಮಕೂರು, ರಹಮತ್ ತರೀಕೆರೆ, ಚಿಕ್ಕಮಗಳೂರು, ಹ.ಮ. ಪೂಜಾರ, ವಿಜಯಪುರ. ಜಾನಪದ ಬಸಪ್ಪ ಭರಮಪ್ಪ ಚೌಡ್ಕಿ- ಕೊಪ್ಪಳ, ಬಿ. ಟಾಕಪ್ಪ ಕಣ್ಣೂರು, ಶಿವಮೊಗ್ಗ, ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ, ಬೆಳಗಾವಿ, ಹನುಮಂತಪ್ಪ, ಮಾರಪ್ಪ, ಚೀಳಂಗಿ, ಚಿತ್ರದುರ್ಗ, ಎಂ. ತೋಪಣ್ಣ, ಕೋಲಾರ, ಸೋಮಣ್ಣ ದುಂಡಪ್ಪ ಧನಗೊಂಡ, ವಿಜಯಪುರ, ಸಿಂಧು ಗುಜರನ್, ದಕ್ಷಿಣ ಕನ್ನಡ, ಎಲ್. ಮಹದೇವಪ್ಪ ಉಡಿಗಾಲ, ಮೈಸೂರು‌ ಸಂಗೀತ ದೇವೆಂದ್ರಕುಮಾರ ಪತ್ತಾರ್, ಕೊಪ್ಪಳ, ಮಡಿವಾಳಯ್ಯ ಸಾಲಿ, ಬೀದರ್‌ ನೃತ್ಯ ಪ್ರೊ.ಕೆ. ರಾಮಮೂರ್ತಿ ರಾವ್, ಮೈಸೂರು‌. ಚಲನಚಿತ್ರ /ಕಿರುತೆರೆ ಪ್ರಕಾಶ್ ರಾಜ್, ದಕ್ಷಿಣ ಕನ್ನಡ, ವಿಜಯಲಕ್ಷ್ಮೀ ಸಿಂಗ್, ಕೊಡಗು. ಆಡಳಿತ ಹೆಚ್. ಸಿದ್ದಯ್ಯ ಐಎಎಸ್ (ನಿ), ಬೆಂಗಳೂರು ದಕ್ಷಿಣ (ರಾಮನಗರ). ವೈದ್ಯಕೀಯ ಡಾ. ಆಲಮ್ಮ ಮಾರಣ್ಣ, ತುಮಕೂರು, ಡಾ. ಜಯರಂಗನಾಥ್, ಬೆಂಗಳೂರು ಗ್ರಾಮಾಂತರ. ಸಮಾಜ ಸೇವೆ ಸೂಲಗಿತ್ತಿ ಈರಮ್ಮ, ವಿಜಯನಗರ, ಫಕ್ಕೀರಿ, ಬೆಂಗಳೂರು ಗ್ರಾಮಾಂತರ, ಕೋರಿನ್ ಆಂಟೊನಿಯಟ್ ರಸ್ಕೀನಾ, ದಕ್ಷಿಣ ಕನ್ನಡ, ಡಾ. ಎನ್. ಸೀತಾರಾಮ ಶೆಟ್ಟಿ, ಉಡುಪಿ, ಕೋಣಂದೂರು ಲಿಂಗಪ್ಪ, ಶಿವಮೊಗ್ಗ ಉಮೇಶ ಪಂಬದ, ದಕ್ಷಿಣ ಕನ್ನಡ ಡಾ. ರವೀಂದ್ರ ಕೋರಿಶೆಟ್ಟಿರ್, ಧಾರವಾ ಕೆ.ದಿನೇಶ್, ಬೆಂಗಳೂರು ಶಾಂತರಾಜು, ತುಮಕೂರು ಜಾಫರ್ ಮೊಹಿಯುದ್ದೀನ್, ರಾಯಚೂರು ಪೆನ್ನ ಓಬಳಯ್ಯ, ಬೆಂಯಳಳಗಳೂರು ಗ್ರಾಮಾಂತರ ಶಾಂತಿ ಬಾಯಿ, ಬಳ್ಳಾರಿ ಪುಂಡಲೀಕ ಶಾಸ್ತ್ರೀ(ಬುಡಬುಡಕೆ), ಬೆಳಗಾವಿ ಹೊರನಾಡು/ ಹೊರದೇಶ ಜಕರಿಯ ಬಜಪೆ (ಸೌದಿ), ಹೊರನಾಡು/ ಹೊರದೇಶ ಪಿ ವಿ ಶೆಟ್ಟಿ (ಮುಂಬೈ), ಹೊರನಾಡು/ ಹೊರದೇಶ ಪರಿಸರ ರಾಮೇಗೌಡ, ಚಾಮರಾಜನಗರ ಮಲ್ಲಿಕಾರ್ಜುನ ನಿಂಗಪ್ಪ, ಯಾದಗಿರಿ ಕೃಷಿ ಡಾ.ಎಸ್.ವಿ.ಹಿತ್ತಲಮನಿ, ಹಾವೇರಿ ಎಂ ಸಿ ರಂಗಸ್ವಾಮಿ, ಹಾಸನ ಮಾಧ್ಯಮ ಕೆ.ಸುಬ್ರಮಣ್ಯ, ಬೆಂಗಳೂರು ಅಂಶಿ ಪ್ರಸನ್ನಕುಮಾರ್, ಮೈಸೂರು ಬಿ.ಎಂ ಹನೀಫ್, ದಕ್ಷಿಣ ಕನ್ನಡ ಎಂ ಸಿದ್ಧರಾಜು, ಮಂಡ್ಯ ವಿಜ್ಞಾನ ಮತ್ತು ತಂತ್ರಜ್ಞಾನ ರಾಮಯ್ಯ, ಚಿಕ್ಕಬಳ್ಳಾಪುರ ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್, ದಾವಣಗೆರೆ ಡಾ. ಆರ್. ವಿ. ನಾಡಗೌಡ, ಗದಗ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026