ಸರಕಾರ ಕೊಡುವ ಭಾಗ್ಯ ಯೋಜನೆಗಳ ಬಗ್ಗೆ ರಂಭಾಪುರಿ ಶ್ರೀ ಹೇಳಿದ್ದು ಹೀಗೆ.!
ಬೆಳಗಾವಿ: ಸರಕಾರ ಬಿಟ್ಟಿ ಭಾಗ್ಯ ಯೋಜನೆಗಳಿಂದ ಜನರ ಬದುಕು ಉಜ್ವಲವಾಗುವುದಿಲ್ಲ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲೂಕಿನ ಚಿಕ್ಬಲಕಟ್ಟೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುಕ್ಸಟ್ಟೆ ಸ್ಕೀಮ್ ನಿಂದ ಜನರಲ್ಲಿ ದುಡಿಯುವ ಮನೋಭಾವ ಕ್ಷೀಣಿಸಿದೆ. ಸೋಮಾರಿತನ ಹೆಚ್ಚಳವಾಗುತ್ತಿರುವುದು ಬೇಸರದ ವಿಷಯವಾಗಿದೆ.
ದೇಶದಲ್ಲಿ ರೈತ ಹಾಗೂ ಯೋಧ ಎರಡು ಕಣ್ಣುಗಳಿದ್ದಂತೆ. ಯೋಧರು ದೇಶ ಕಾಯ್ದರೆ ರೈತರು ನಮಗೆ ಅನ್ನ ನೀಡುತ್ತಾರೆ. ಕಷ್ಟಪಟ್ಟು ದುಡಿದರೆ ಭೂತಾಯಿ ನಮ್ಮನೆಂದು ಕೈಬಿಡುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.