ಆಂಟಿಮೈಕ್ರೋಬಿಯಲ್ ಕುರಿತ ಜಾಗೃತಿ ಜಾಥಾ: ರಂಜಿತ್ ಕುಮಾರ್ ಬಂಡಾರು ಚಾಲನೆ
ಚಿತ್ರದುರ್ಗ: ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಎಸ್ಜೆಎಂ ಫಾರ್ಮಸಿ ಕಾಲೇಜು ಮತ್ತು ಐಎಂಎ ಸಹಯೋಗದಲ್ಲಿ ಇಂದು ವಿಶ್ವ ಆಂಟಿಮೈಕ್ರೋಬಿಯಲ್ ಕುರಿತ ಜಾಗೃತಿ ಜಾಥಾವನ್ನು ಆಯೋಜನೆ ಮಾಡಲಾಗಿತ್ತು. ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಡಾ.ಬಸವಕುಮಾರ ಸ್ವಾಮೀಜಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯಾದ ರಂಜಿತ್ ಕುಮಾರ್ ಬಂಡಾರು ಚಾಲನೆ ನೀಡಿದರು.
ಜನರಿಗೆ ಆಂಟಿಬಯೋಟಿಕ್ಸ್ ಯಾವ ರೀತಿ ಉಪಯೋಗಿಸಬೇಕು ಎಂದು ಗೊತ್ತಾಗಬೇಕು. ಮತ್ತೆ ಆಂಟಿಬಯೋಟಿಕ್ಸ್ ಉಪಯೋಗಿಸುವ ಮೊದಲು ವೈದ್ಯರ ಸಲಹೆ ಪಡೆದುಉಪಯೋಗಿಸಿ ಎಂದು ಪೊಲೀಸ್ ವರಿಷ್ಠಾಧಿಕಾರಿಯಾದ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ನಾವು ಬೆಳೆದ ಬೆಳೆಗೆ ಯಾವ ರೀತಿ ಕ್ರಿಮಿನಾಶಕ ಹಾಕಬೇಕು ಎಂಬುದರ ಬಗ್ಗೆ ಮಾಹಿತಿ ಇರಬೇಕು ಹಾಗೇಯೆ ನಮ್ಮ ದೇಹಕ್ಕೆ ಯಾವ ರೀತಿಯ ಔಷಧಿ ನೀಡಿದರೆ ಸೂಕ್ತ ಎಂಬುದರ ಬಗ್ಗೆ ವೈದ್ಯರು ಹೆಚ್ಚಿನ ಕಾಳಜಿವಹಿಸಬೇಕು ಎಂದು ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ಪ್ರವಾಸಿಮಂದಿರದಿಂದ ಹಿಡಿದು ಡಿ.ಸಿ ಕಚೇರಿವರೆಗೆ ಜನಸಾಮಾನ್ಯರಿಗೆ ಘೋಷಣೆ ಕೂಗುವುದರ ಮೂಲಕ ಅರಿವು ಮೂಡಿಸಲಾಯಿತ್ತು. ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಳು ಈ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಡಿ.ಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಿಶ್ವ ಆಂಟಿಮೈಕೋಬಿಯಲ್ ಪ್ರತಿರೋಧಕದ ಬಗ್ಗೆ ತಿಳಿಸಲಾಯಿತ್ತು.
ಬಸವೇಶ್ವರ ಆಸ್ಪತ್ರೆಯ ಎಲ್ಲಾ ಬೋಧಕ ಸಿಬ್ಬಂದಿ ಮತ್ತು ಐಎಂಎ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳಿಗೆ ಆಂಟಿಬಯೋಟಿಕ್ಸ್ ದುರ್ಬಳಕೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಾರಿ ವಿಶ್ವ ಸಂಸ್ಥೆ "ಅರಿಮೂಡಿಸಿ, ಪ್ರತಿಪಾದಿಸಿ, ಕಾರ್ಯಪ್ರವೃತ್ತರಾಗಿ" ಎಂಬ ಮೂರು ಘೋಷಣಾ ವಾಕ್ಯವನ್ನು ವಿದ್ಯಾರ್ಥಿಗಳು ಕೂಗುವುದರ ಮೂಲಕ ಇದರ ಬಗ್ಗೆ ಜಾಗೃತಿ ಮೂಡಿಸಿದರು.
ಜಾಥದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ರಾಜೇಶ್, ಡಾ.ನಾಗೇಂದ್ರಗೌಡ, ಡಾ. ಸುಧೀಂದ್ರ, ಡಾ.ಶುಭ, ಐಎಂಎ ಅಧ್ಯಕ್ಷರಾದ ಡಾ.ಪಾಲಾಕ್ಷಪ್ಪ, ಕಾರ್ಯದರ್ಶಿ ಡಾ.ಬ್ಲಾಕ್, ಎಸ್ಜೆಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಸೇರಿದಂತೆ ಎಲ್ಲಾ ಬೋಧಕ ಸಿಬ್ಬಂದಿ ವರ್ಗದವರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.