LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮನೆ ಬಿಟ್ಟು ಬಂದ ಅಪ್ರಾಪ್ತೆ ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ಅತ್ಯಾಚಾರ..!

ಬೆಂಗಳೂರು: ತಾಯಿಯೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದ ಅಪ್ರಾಪ್ತೆಯನ್ನು ವ್ಯಕ್ತಿಯೊಬ್ಬ ಪುಸಲಾಯಿಸಿ ತಿರುಪತಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.

ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ. ದಾವಣಗೆರೆಯಲ್ಲಿ 9ನೇ ತರಗತಿ ಓದುತ್ತಿರುವ ಸಂತ್ರಸ್ತೆ ತಾಯಿ ಸರ್ಕಾರಿ ನೌಕರರಾಗಿದ್ದು, ಅನಾರೋಗ್ಯಕ್ಕೀಡಾಗಿ ಬೆಂಗಳೂರಿನಲ್ಲಿದ್ದಾರೆ. ತಾಯಿ ನೋಡಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ಬಾಲಕಿಗೆ ಇನ್ಸ್ಟಾಗ್ರಾಮ್ ನಲ್ಲಿ ಸುನಿಲ್ ಪರಿಚಯವಾಗಿದೆ. ನಂತರ ಇಬ್ಬರೂ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿ ಕರೆ ಮಾಡುತ್ತಿದ್ದರು.

ಈ ನಡುವೆ ಮಾರ್ಚ್ 13ರಂದು ತಾಯಿಯೊಂದಿಗೆ ಜಗಳವಾಡಿದ ಬಾಲಕಿ ಮನೆ ಬಿಟ್ಟು ಮೆಜೆಸ್ಟಿಕ್ ನಲ್ಲಿ ಸುನಿಲ್ ನನ್ನು ಭೇಟಿಯಾಗಿದ್ದಾಳೆ. ತಿರುಪತಿ ದೇವಾಲಯಕ್ಕೆ ಹೋಗೋಣ ಎಂದು ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡಿದ್ದ ಆರೋಪಿ ಮೂರು ದಿನಗಳ ಕಾಲ ಲಾಡ್ಜ್ ನಲ್ಲಿ ಇರಿಸಿ ಅತ್ಯಚಾರ ಎಸಗಿದ್ದಾನೆ. ಭಾನುವಾರ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾನೆ. ಮನೆಗೆ ಮರಳಿದ ಬಾಲಕಿ ನಡೆದ ಸಂಗತಿಯನ್ನು ತಾಯಿಗೆ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಸುನಿಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಜ್ಜನಕೆರೆ : ಹೆಣ್ಣು ನಿಜವಾದ ಆರ್ಥಿಕ ತಜ್ಞೆ : ಈಶ್ವರಾನಂದಪುರಿ ಶ್ರೀ ಬಣ್ಣನೆಬಿ.ವಿಮಲಾಕ್ಷಿಗೆ “ದಕ್ಷಿಣ ಭಾರತದ ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ” ಪ್ರದಾನಸ್ವ ಉದ್ಯೋಗ ನೆರವಿಗೆ ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಅಹ್ವಾನ..!ಈ ಶಕ್ತಿಶಾಲಿಯಾದ ಮಂತ್ರವನ್ನು 11 ಬಾರಿ ಪಟನೆ ಮಾಡುವುದರಿಂದ ನೀವು ಪ್ರೀತಿಸಿದವರು ಮೊದಲಿನಂತೆ ಸರಿಯಾಗುತ್ತಾರೆಕನ್ನಡದ ‘ ತಿಥಿ’ ಸಿನಿಮಾದಲ್ಲಿ ಅಭಿನಯಸಿದ್ದ  ‘ಸೆಂಚೂರಿ ಗೌಡ’ನಿಧನ.!ಓಂ ಶಕ್ತಿ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ..! ಕೆಲ ಕಾಲ ಉದ್ವಿಗ್ನ.!ಎಲ್ಲಾ ಹಿಂದುಳೀದ ಜಾತಿಗಳ ಸಮುದಾಯ ಸಂಘಗಳಿಗೆ  2.5 ಎಕರೆ ಜಮೀನು..!ವಿ.ವಿ.ಸಾಗರ ಜಲಾಶಯಕ್ಕೆ ಸಚಿವ ಡಿ.ಸುಧಾಕರ್ ಬಾಗಿನ ಅರ್ಪಣೆಇಂದಿನ ವಚನ -ಅಮುಗೆ ರಾಯಮ್ಮ !ಬಳ್ಳಾರಿ ಫೈರಿಂಗ್ ಪ್ರಕರಣ: ಸತೀಶ್ ರೆಡ್ಡಿ ಸೇರಿಂದತೆ ಗನ್ ಮ್ಯಾನ್ಗಳ ಬಂಧನ.!