LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಕ್ಸಲ್ ಕೋಟೆಹೊಂಡ ರವೀಂದ್ರ ಪೊಲೀಸರಿಗೆ ಶರಣು

ಚಿಕ್ಕಮಗಳೂರು : ನಕ್ಸಲ್ ಕೋಟೆಹೊಂಡ ರವೀಂದ್ರ ಕರ್ನಾಟಕದ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಶನಿವಾರ ತಿಳಿಸಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, 'ಕೊನೆಯ ಭೂಗತ ನಕ್ಸಲ್ ಕೋಟೆಹೊಂಡ ರವೀಂದ್ರ (ಯುಜಿ ನಕ್ಸಲ್) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ನೆಮ್ಮಾರ್ ಫಾರೆಸ್ಟ್ ಐಬಿಯಲ್ಲಿ ಶರಣಾಗಿದ್ದಾನೆ ಎಂದಿದ್ದಾರೆ.

ಶರಣಾಗತಿ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳು ರವೀಂದ್ರನನ್ನು ಚಿಕ್ಕಮಗಳೂರಿಗೆ ಕರೆದೊಯ್ಯುತ್ತಿದ್ದಾರೆ.

ರವೀಂದ್ರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದವನಾಗಿದ್ದು, ಕಳೆದೊಂದು ದಶಕದಿಂದ ರವೀಂದ್ರ ಭೂಗತನಾಗಿದ್ದ. ಆತನ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 14 ಪ್ರಕರಣ ದಾಖಲಾಗಿದ್ದವು.

ಇನ್ನೂ ತಲೆಮರೆಸಿಕೊಂಡಿದ್ದ ನಕ್ಸಲ್ ಲಕ್ಷ್ಮಿ ಕೂಡ ನಾಳೆ ಪೊಲೀಸರ ಮುಂದೆ ಶರಣಾಗಲು ಸಿದ್ಧರಾಗಿದ್ದು ರಾಜ್ಯದಲ್ಲಿ ಕೆಂಪು ಉಗ್ರರ ಇತಿಹಾಸ ಯುಗಾಂತ್ಯವಾಗಲಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ನಾನೇ ಸಿಎಂ: ಸಿದ್ದರಾಮಯ್ಯದೇಶದ 12 ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ.!ಮೊಂಥಾ ಚಂಡಮಾರುತ: ಅ. 31ರವರೆಗೂ ಭಾರೀ ಮಳೆ- ಹವಾಮಾನ ಇಲಾಖೆ ಎಚ್ಚರಿಕೆಬೀದಿ ನಾಯಿಗಳ ಹಾವಳಿ ವಿಚಾರ: ವರದಿ ಸಲ್ಲಿಸದ ಕರ್ನಾಟಕ ಸೇರಿ ಇತರ ರಾಜ್ಯಗಳಿಗೆ ಸುಪ್ರೀಂ​ ತರಾಟೆಅ. 28ರಂದು ಮೊಂಥಾ ಸೈಕ್ಲೋನ್- ಆಂಧ್ರಪ್ರದೇಶ, ಒಡಿಶಾ, ತಮಿಳುನಾಡಿಗೆ ರೆಡ್ ಅಲರ್ಟ್ನ್ಯಾ. ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಹೆಸರಿಸಿದ ನ್ಯಾ. ಗವಾಯಿಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಶೇ.15ರಷ್ಟು ಬಿಪಿಎಲ್ ಕಾರ್ಡ್ ರದ್ದು – ಕೆ.ಎಚ್‌.ಮುನಿಯಪ್ಪದೆಹಲಿಗೆ ದೌಡಾಯಿಸಿದ ಡಿಸಿಎಂ ಡಿಕೆಶಿವರ್ಕ್ ಫ್ರಂ ಹೋಂ ಕೆಲಸ: 12 ಕೋಟಿಗೂ ಅಧಿಕ ಹಣ ವಂಚನೆ.!ಪಿಎಸ್ಐ ಗಾದಿಲಿಂಗಪ್ಪ ವಿರುದ್ಧ ಅತ್ಯಾಚಾರ ಮತ್ತು ಅಟ್ರಾಸಿಟಿ ಕೇಸ್ ದಾಖಲು.!