ಪ್ರಖ್ಯಾತ ವೈದ್ಯಾಧಿಕಾರಿ ಜಯಶ್ರೀ ಯಾದವಾಡ ನಿಧನ
ಬೆಳಗಾವಿ : ಕ್ಲಬ್ ರೋಡ್ ನಿವಾಸಿಯಾಗಿದ್ದ ಜಯಶ್ರೀ ಯಾದವಾಡ(80)ಬುಧವಾರ ನಿಧನರಾದರು. ಸರಕಾರಿ ವೈದ್ಯಾಧಿಕಾರಿಯಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಬೆಳಗಾವಿ ಮಹಾನಗರದ ಅನಗೋಳ ಸೇರಿದಂತೆ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಹೆಸರುವಾಸಿಯಾಗಿದ್ದರು.
ಮೃತರು ಪತಿ, ಹೆಸರಾಂತ ವೈದ್ಯರಾಗಿರುವ ಬಸವರಾಜ ಯಾದವಾಡ, ಮೂವರು ಪುತ್ರರು, ಸಹೋದರರಾಗಿರುವ ನಿವೃತ್ತ ನ್ಯಾಯಾಧೀಶ ಉಲ್ಲಾಸ ಬಾಳೆಕುಂದ್ರಿ ಹಾಗೂ ಸಹೋದರಿಯಾಗಿರುವ ಪ್ರಖ್ಯಾತ ಹೃದಯರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಅವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 1 ಕ್ಕೆ ಸದಾಶಿವನಗರದ ರುದ್ರಭೂಮಿಯಲ್ಲಿ ನಡೆಯಲಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.