LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಈ  ಮಾರ್ಗದಲ್ಲಿ ಚಲಿಸುವ ವಾಹನಗಳ  ರಸ್ತೆ ಬದಲಾವಣೆ.!

 

ಚಿತ್ರದುರ್ಗ:ಕೆ.ಎಂ.ಇ.ಆರ್.ಸಿ ಯೋಜನೆಯಡಿ ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರಿನಿಂದ ಚಿಕ್ಕಂದವಾಡಿ ಮೂಲಕ ಅಮೃತಾಪುರ ಹೋಗುವ 12 ಕಿ.ಮೀ. ರಿಂದ 16.50 ಕಿ.ಮೀ ವರೆಗಿನ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

ಈ ರಸ್ತೆಯ ಕಾಂಕ್ರಿಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಕ್ಯೂರಿಂಗ್ ಅವಧಿ ಮುಗಿಯುವವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಚಿಕ್ಕಂದವಾಡಿ ಮತ್ತು ಅರಸನಘಟ್ಟಗೆ ಹೋಗುವ ವಾಹನಗಳು, ಚಿಕ್ಕಜಾಜೂರು ಗ್ರಾಮದ ಮಾರುಕಟ್ಟೆ ಪ್ರಾಂಗಣದ ಮುಂಭಾಗದಿAದ ಚನ್ನಪಟ್ಟಣ ಹೋಗುವ ರಸ್ತೆಯನ್ನು ಬಳಸಿಕೊಂಡು ಅಪ್ಪರಸನಹಳ್ಳಿ ಮೂಲಕ ಚಿಕ್ಕಂದವಾಡಿ ಕೆರೆಯ ಸಮೀಪ ಸೇರುವುದು.

ಅಲ್ಲಿಂದ ಮುಂದೆ ಅಪ್ಪರಸನಹಳ್ಳಿ ಮೂಲಕ ಅರಸನಘಟ್ಟ ಗ್ರಾಮ ಸೇರಬಹುದು. ಹೊಳಲ್ಕೆರೆ ಪಟ್ಟಣಕ್ಕೆ ಹೋಗುವ ವಾಹನಗಳು ಚಿಕ್ಕಂದನವಾಡಿ ಮತ್ತು ಅರಸನಘಟ್ಟ ಗ್ರಾಮದಿಂದ ಅಪ್ಪರಸನಹಳ್ಳಿ ಹೋಗುವ ರಸ್ತೆಯನ್ನು ಬಳಸಿಕೊಂಡು, ಪಾಡಿಗಟ್ಟೆ ಅಥವಾ ಆಡನೂರು ರಸ್ತೆಯ ಮೂಲಕ ಹೊಳಲ್ಕೆರೆ ಪಟ್ಟಣ ಸೇರಬಹುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣ : ಬಿಜೆಪಿ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್‌ ದೋಷಮುಕ್ತಿವರ್ಲ್ಡ್‌ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ (WCL 2025) | ಸೆಮಿಫೈನಲ್ಸ್ ಆಡದೆ ಫೈನಲ್ ಪ್ರವೇಶಿಸಿದ ಪಾಕ್ಕೇಂದ್ರ ಸೇವೆಗೆ ಪ್ರಣವ್‌ ಮೊಹಾಂತಿ: ಎಸ್‌ಐಟಿ ಮುಖ್ಯಸ್ಥರ ಬದಲಾವಣೆ?ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಾಲ್ವರು ಮೀನುಗಾರರು ನೀರುಪಾಲುಬಿಗ್‌ಬಾಸ್ ಸೀಸನ್‌-12ರ ಸ್ಪರ್ಧಿಗಳ ಪಟ್ಟಿಯಲ್ಲಿ ಇವರೇ ಸೆಲೆಬ್ರಿಟಿಗಳು?ಆ. 1ರಿಂದ ಭಾರತದ ಮೇಲೆ ಶೇ. 25 ಟ್ಯಾರಿಫ್; ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆಆ. 5 ರಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರಧರ್ಮಸ್ಥಳ ಪ್ರಕರಣ : ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಿದ ಎಸ್‌ಐಟಿರಿಜಿಸ್ಟರ್ಡ್ ಪೋಸ್ಟ್ ಸೇವೆಗೆ ವಿದಾಯ ಹೇಳಿದ ಅಂಚೆ ಕಛೇರಿ!!ಕೋಚಿಂಗ್ ಇಲ್ಲದೆ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸೌಭಾಗ್ಯ