E-PAPER
16 Nov 2026, 02:20:25 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಆತ್ಮ ಸ್ವಾಸ್ತ್ಯದ ಬಗ್ಗೆ ಸಂಶೋಧನೆ ಇಂದಿನ ಅಗತ್ಯ ಬಿ.ಕೆ.ಡಾ. ಅನಿಲ್ ಭತಿಜಾ

[caption id="attachment_3161" align="alignnone" width="300"] Oplus_131072[/caption]

ಬೆಳಗಾವಿ; ಶರೀರಕ್ಕೆ ಚಿಕಿತ್ಸೆ ನೀಡುವ ಶರೀರ ಸ್ವಾಸ್ಥ್ಯದ ಬದಲಾಗಿ ಆತ್ಮಕ್ಕೆ ಚಿಕಿತ್ಸೆ ನೀಡುವ ಆತ್ಮ ಸ್ವಾಸ್ಥ್ಯದ ಕುರಿತು ಸಂಶೋಧನೆ ನಡೆಸುವ ಅಗತ್ಯ ಇಂದು ಹಿಂದೆಂದಿಗಿಂತಲೂf ಹೆಚ್ಚಾಗಿದೆ ಎಂದು

ಗುಜರಾತ್ ರಾಜ್ಯ ಪಾಟನದ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಕೆ.ಡಾ. ಅನಿಲ ಬಥಿಜಾ ಹೇಳಿದರು.
ಅವರಿಂದು ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 135 ನೇ ಜಯಂತಿ ಮಹೋತ್ಸವದಲ್ಲಿ ಶ್ರೀಮಠದಿಂದ ಕೊಡ ಮಾಡಲಾದ "ಆತ್ಮ ಸ್ವಾಸ್ಥ್ಯ ಶ್ರೀ" ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.
ವೈದ್ಯಶಾಸ್ತ್ರದಲ್ಲಿ ವಿವಿಧ ರೋಗಗಳಿಗೆ ಶರೀರಕ್ಕೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ ಆದರೆ ಶರೀರವನ್ನು ನಡೆಸುವ ಆತ್ಮಕ್ಕೆ ಚಿಕಿತ್ಸೆ ನೀಡುವ ಆತ್ಮ ಸ್ವಾಸ್ಥ್ಯದ ಕುರಿತಾದ ಉಲ್ಲೇಖ ಎಲ್ಲಿಯೂ ಇಲ್ಲ ಇದರಿಂದಾಗಿ ಹಿಂದಿನ ಕಾಲಕ್ಕೆ ಹೋಲಿಸಿದರೆ ಇದು ರೋಗಗಳ ಸಂಖ್ಯೆ ಮತ್ತು ರೋಗಿಗಳ ಸಂಖ್ಯೆ ಎರಡು ಹೆಚ್ಚಾಗಿದೆ. ಆತ್ಮ ಸ್ವಾಸ್ಥ್ಯದ ಕುರಿತು ಮಠಮಾನ್ಯಗಳಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ಚಿಂತನೆ ನಡೆಯುತ್ತದೆ ಅಧ್ಯಾತ್ಮ ಮತ್ತು ವಿಜ್ಞಾನ ಎರಡು ಜೊತೆಯಾಗಿ ಹೋದಾಗ ಇಂದಿನ ಅತಿಯಾದ ಒತ್ತಡದ ಜೀವನದಿಂದ ಹೊರಬರಲು ಸಾಧ್ಯವಾಗುವ ಸಾಧ್ಯತೆ ಇದೆ ಅಧ್ಯಾತ್ಮವನ್ನು ಬಿಟ್ಟು ವಿಜ್ಞಾನವಿಲ್ಲ ವಿಜ್ಞಾನವನ್ನು ಬಿಟ್ಟು ಅಧ್ಯಾತ್ಮ ವಿಲ್ಲ ಆದರೆ ಈ ಕುರಿತು ಯಾರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದವರು ಕಳವಳ ವ್ಯಕ್ತಪಡಿಸಿದರು.
ಇಂದಿನ ದಿನಮಾನದ ಅತಿ ಭಯಂಕರ ರೋಗವೆಂದರೆ ಅದು ಹೃದಯಘಾತ ಹಿಂದೆಲ್ಲ 45 ವರ್ಷದವರ ಕ್ಕಿಂತ ಹೆಚ್ಚಿನ ವಯೋಮಾನದವರು ಹೃದಯಘಾತದ ಅಥವಾ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದರು ಆದರೆ ಇತ್ತೀಚಿನ 10 ವರ್ಷಗಳಲ್ಲಿ 25ರಿಂದ 30 ವರ್ಷದೊಳಗಿನ ಯುವಕರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಹೃದಯ ಸಂಬಂಧಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದ ಅವರು ಹೃದಯ ಸಂಬಂಧಿ ರೋಗಗಳನ್ನು ಎಂಜಿಯೋಪ್ಲಾಸ್ಟಿ ಮತ್ತು ಬೈಪಾಸ್ ಸರ್ಜರಿಗಳಿಂದ ಮಾತ್ರ ಗುಣಪಡಿಸುವ ವ್ಯವಸ್ಥೆ ಅಲೋಪತಿ ವೈದ್ಯಕೀಯ ಕ್ಷೇತ್ರದಲ್ಲಿದೆ, ಮೌಂಟ್ ಅಬು ಆಸ್ಪತ್ರೆಯಲ್ಲಿ ಹೊಸದೊಂದು ಅಧ್ಯಾತ್ಮ ರೀತಿಯ ಉಪಚಾರವನ್ನು 11,000ಕ್ಕೂ ಅಧಿಕ ಹೃದಯ ಸಂಬಂಧಿ ರೋಗಿಗಳಿಗೆ ನೀಡಲಾಯಿತು. ಕೇವಲ ಧ್ಯಾನ ಮತ್ತು ನಿಯಮಿತವಾದ ವ್ಯಾಯಾಮದಿಂದ ರೋಗಗಳನ್ನು ಗುಣಪಡಿಸಲಾಯಿತು. ಹೃದಯದಲ್ಲಿರುವ ಎಲ್ಲ ಗುಣಮುಖವಾಯಿತು ಎಂದವರು ವಿವರಿಸಿದರು.
ಸಕಾರಾತ್ಮಕ ವಿಚಾರಗಳು ಒತ್ತಡರಹಿತವಾದ ಜೀವನ ಸಣ್ಣ ಸಣ್ಣ ವಿಷಯಗಳಿಗೆ ಸಿಟ್ಟಿಗೇಳುವುದು ರಾತ್ರಿ 10:00ಗೆ ಮಲಗಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ 4:00ಗೆ ಹೇಳುವುದನ್ನು ತಮ್ಮ ಜೀವನದಲ್ಲಿ ರೂಡಿಸಿಕೊಂಡಿದ್ದೆ ಆದರೆ ಖಂಡಿತವಾಗಿ ಆತ್ಮ ಸ್ವಾಸ್ಥ್ಯವನ್ನು ಹೊಂದುತ್ತಿರಿ ಆಗ ಶರೀರ ಸ್ವಾಸ್ಥ್ಯದ ತಾನಾಗಿಯೇ ಬರುತ್ತದೆ
ಅಧ್ಯಾತ್ಮವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಪ್ರತಿ ದಿವಸ ತಪ್ಪದೇ ಧ್ಯಾನವನ್ನು ಮಾಡಬೇಕು ಎಂದವರು ಹೇಳಿದರು.
. ಹಂದಿಗುಂದ ವಿರಕ್ತಮಠದ ಶ್ರೀ. ಶಿವಾನಂದ ಮಹಾ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಾನಿಧ್ಯದಲ್ಲಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಚೆನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ. ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಿದ್ದರು.ಸಮ್ಮುಖದಲ್ಲಿ ಮಲ್ಲಾಪುರ- ನೇಸರಗಿ ಗಾಳೇಶ್ವರ ಮಠದ ಶ್ರೀ. ಚಿದಾನಂದ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ನೇತೃತ್ವವನ್ನು ಯಮುಕನ ಮರಡಿ ಹುಣಸಿಕೊಳ್ಳ ಮಠದ ಶ್ರೀ.ಸಿದ್ದಬಸವ ದೇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ನಿವೃತ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿ ಶ್ರೀ. ಗೋವಿಂದಪ್ಪ ಗೌಡಪ್ಪಗೋಳ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಗೋಕಾಕದ ಕುಮಾರಿ ವಿನಯಾ ಗಲಗಲಿ ಇವರಿಗೆ ಬಾಲಯೋಗಿನಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಬಸವ ತತ್ವ ಅನುಭವ ಕೇಂದ್ರದ ಶರಣೆ ವಾಗ್ದೇವಿ ತಾಯಿ ಮತ್ತು ಶರಣೆ ಕುಮದಿನಿ ತಾಯಿ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಕಾಶ್ ಗಿರಿಮಲ್ಲನವರ್ ವಿರಚಿತ ಡಾ. ಗುರುದೇವಿ ಹುಲೆಪ್ಪನವರಮಠ ಮತ್ತು ರೀತಾ ಬಣಗಾರ ಅವರು ಇಂಗ್ಲಿಷ ಭಾಷೆಗೆ ಅನುವಾದಿಸಿರುವ ಗ್ರಂಥ "ಎ ಬ್ರೀಫ್ ಬಯೋಗ್ರಾಫಿ ಆಫ್ ಡಾ. ಸಿದ್ದರಾಮ ಸ್ವಾಮೀಜಿ " ಲೋಕಾರ್ಪಣೆಗೊಳಿಸಲಾಯಿತು. ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು 2011 ರಲ್ಲಿ "ಆತ್ಮಸ್ವಾಸ್ಥ್ಯ ಶ್ರೀ" ಪ್ರಶಸ್ತಿಯನ್ನು ಸ್ಥಾಪಿಸಿದ ಮೆಡಿಕಲ್ ಹಳೆಯಕಾಲೇಜಿನ ನೀವ್ರತ್ತ ಪ್ರಾಚಾರ್ಯ ಡಾ. ಎಚ್.ಬಿ. ರಾಜಶೇಖರ್ ಮತ್ತು ಶ್ರೀಮತಿ ಪಾರ್ವತಿ ರಾಜಶೇಖರ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಎ.ಕೆ. ಪಾಟೀಲ ಮತ್ತು ರಾಜಶೇಖರ್ ಪಾಟೀಲ ನಿರ್ವಹಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ