ಕೊಪ್ಪಳ ಏಪ್ರಿಲ್ 24 ಸಂಪನ್ಮೂಲ ಸಂಗ್ರಹ ಸಮಿತಿ-ಅಬಕಾರಿ ಸುಧಾರಣೆ ವರದಿಯ ಬಗ್ಗೆ ಭಿಪ್ರಾಯಗಳನ್ನು ಸಲ್ಲಿಸಲು ಆಸಕ್ತ ಪಾಲುದಾರರಿಗೆ ಆಹ್ವಾನಿಸಲಾಗಿದೆ.
ರಾಜ್ಯದ ಮದ್ಯ ಅಬಕಾರಿ ತೆರಿಗೆ ವ್ಯವಸ್ಥೆಯನ್ನು ಪರಿಶೀಲಿಸಲು ಕರ್ನಾಟಕ ಸರ್ಕಾರ ರಚಿಸಿದ್ದ ಸಂಪನ್ಮೂಲ ಸಂಗ್ರಹ ಸಮಿತಿ (ಆರ್.ಎಂ.ಸಿ) ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯು ಅಸ್ತಿತ್ವದಲ್ಲಿರುವ ಚೌಕಟ್ಟಿನ ಸಮಗ್ರ ಪರಿಶೀಲನೆಯನ್ನು ಪ್ರಸ್ತುತಪಡಿಸುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ದೃಷ್ಠಿಕೋನ ಹೊಂದಿದ, ಮದ್ಯದ ಅಂಶದ ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆಗೆ ವರ್ಗಾವಣೆಯನ್ನು ಶಿಫಾರಸು ಮಾಡುತ್ತದೆ. ಇದಕ್ಕೆ ಹಂತ ಹಂತವಾಗಿ ಜಾರಿಗೊಳಿಸುವ ಸುಧಾರಣಾ ಮಾರ್ಗಸೂಚಿ ಹಾಗೂ ತಂತ್ರಜ್ಞಾನ ಆಧಾರಿತ ನಿಯಂತ್ರಣ ಕ್ರಮಗಳು ಬೆಂಬಲವಾಗಿವೆ.
ಈ ವರದಿಯನ್ನು ವ್ಯಾಪಕ ಪ್ರಚಾರ/ಸಮಾಲೋಚನೆಗಾಗಿ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಅಧಿಕೃತ ವೆಬ್‌ಸೈಟ್ (finance.karnataka.gov.in) ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಉದ್ಯಮ ಕ್ಷೇತ್ರದ ಪ್ರತಿನಿಧಿಗಳು, ಸಾರ್ವಜನಿಕ ಆರೋಗ್ಯ ತಜ್ಞರು, ಶೈಕ್ಷಣಿಕ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಸಾಮಾನ್ಯ ನಾಗರಿಕರು ಸೇರಿದಂತೆ ಎಲ್ಲಾ ಆಸಕ್ತ ಪಾಲುದಾರರು ವರದಿಯನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯಗಳನ್ನು [email protected] [email protected] ಗೆ ಮೇ 22 ಸಂಜೆ 5.30 ಗಂಟೆಯೊಳಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.