ಮೂಡಲಗಿ :
ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಬೈಕ್ ಸ್ಕಿಡ್ ಆಗಿ ಇಬ್ಬರು ನದಿ ನೀರಿನಲ್ಲಿ ಸಿಲುಕಿದ್ದಾರೆ.
ಬೈಕ್ ಸವಾರರಾದ ಅವರಾದಿ ಗ್ರಾಮದ ಚನ್ನಪ್ಪ ಹರಿಜನ ( 38), ದುರ್ಗಾಣಿ ಹರಿಜನ( 35 )ನದಿ ಪಾಲಾಗಿದ್ದಾರೆ. ಮುಳುಗಿದವರಿಗೆ ಹುಡುಕಾಟ ನಡೆದಿದೆ. ಇಬ್ಬರು ವೈಯಕ್ತಿಕ ಕೆಲಸ ನಿಮಿತ್ತ ಮಹಾಲಿಂಗಪುರಕ್ಕೆ ತೆರಳುತ್ತಿದ್ದರು. ಘಟಪ್ರಭಾ ನದಿಗೆ ತಡಗೋಡೆ ಇಲ್ಲದ ಕಾರಣ ಸೇತುವೆ ಮೇಲೆ ಬೈಕ್ ಸ್ಕಿಡ್ ಆಗಿ ನೀರಿಗೆ ಸಿಲುಕಿ ನೀರು ಪಾಲಾಗಿದ್ದಾರೆ. ಸದ್ಯ ಬೈಕ್ ನೀರಿನಲ್ಲಿ ಪತ್ತೆಯಾಗಿದೆ. ಮೂಡಲಗಿ ಹಾಗೂ ಕುಲಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.